ಲಕ್ನೋ (ಉತ್ತರ ಪ್ರದೇಶ): ಇಲ್ಲಿನ ಏಕಾನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮತ್ತು ಡೆಲ್ಲಿ ಕ್ಯಾಪಿಟಲ್ಸ್(ಡಿಸಿ) ತಂಡಗಳು ಇಂದು ಪೈಪೋಟಿ ನಡೆಸಲಿವೆ. ಕಳೆದ ಬಾರಿ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ ಚೊಚ್ಚಲ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ-ಆಫ್ ವರೆಗೆ ಬಂದಿತ್ತು. ಈ ಬಾರಿ ಸರ್ವ ಸನ್ನದ್ಧವಾಗಿ ತಂಡ ಮತ್ತೆ ಕಣಕ್ಕಿಳಿಯುತ್ತಿದೆ. ಮತ್ತೊಂದೆಡೆ, ಅತ್ಯಂತ ಯಶಸ್ವಿ ವಿದೇಶಿ ಬ್ಯಾಟರ್ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಣಕ್ಕಿಳಿಯಲು ಸಿದ್ಧವಾಗುತ್ತಿದೆ.
-
When you realize it’s MATCHDAY! 🤩 💃🏻#LucknowSuperGiants | #LSG | #GazabAndaz pic.twitter.com/2lZgs9Gljj
— Lucknow Super Giants (@LucknowIPL) April 1, 2023 " class="align-text-top noRightClick twitterSection" data="
">When you realize it’s MATCHDAY! 🤩 💃🏻#LucknowSuperGiants | #LSG | #GazabAndaz pic.twitter.com/2lZgs9Gljj
— Lucknow Super Giants (@LucknowIPL) April 1, 2023When you realize it’s MATCHDAY! 🤩 💃🏻#LucknowSuperGiants | #LSG | #GazabAndaz pic.twitter.com/2lZgs9Gljj
— Lucknow Super Giants (@LucknowIPL) April 1, 2023
ಎಲ್ಎಸ್ಜಿ ಈ ವರ್ಷದ ಮಿನಿ ಹರಾಜಿನಲ್ಲಿ ತಮ್ಮ ತಂಡಕ್ಕೆ ಬ್ಯಾಟರ್ ಕಂ ವಿಕೇಟ್ ಕೀಪರ್ ಕೆರಿಬಿಯನ್ ಪ್ಲೇಯರ್ ನಿಕೋಲಸ್ ಪೂರನ್ ಅವರನ್ನು ಸೇರಿಸಿ ಕೊಂಡಿದೆ. ಮಿನಿ ಹರಾಜಿನಲ್ಲಿ ಬರೋಬ್ಬರಿ 16 ಕೋಟಿ ವ್ಯಯಿಸಿದೆ. ತಂಡದಲ್ಲಿ ಈಗಾಗಲೇ ಇಬ್ಬರು ವಿಕೆಟ್ ಕೀಪರ್ (ಕೆಎಲ್ ರಾಹುಲ್, ಕ್ಲಿಂಟನ್ ಡಿ ಕಾಕ್) ಇದ್ದರೂ ಮೂರನೇ ವಿಕೆಟ್ ಕೀಪರ್ನ್ನು ತಂಡ ತೆಗೆದುಕೊಂಡಿದೆ. ಪೂರನ್ರಿಂದ ಲಕ್ನೋ ತಂಡ ತನ್ನ ಮಧ್ಯಮ ಕ್ರಮಾಂಕದ ಬಲ ಹೆಚ್ಚಲಿದೆ.
ರಾಹುಲ್ ಪಾಳಯದಲ್ಲಿ ಆಲ್ರೌಂಡರ್ಗಳ ಸಂಖ್ಯೆ ಹೆಚ್ಚಿರುವುದು, ಹೊಸ ಇಂಪ್ಯಾಕ್ಟ್ ಪ್ಲೇಯರ್ಗಳನ್ನು ಆಡಿಸಲು ಸಹಕಾರಿಯಾಗಲಿದೆ. ಆದರೆ ಎಡಗೈ ವೇಗದ ಬೌಲರ್ ಮೊಹ್ಸಿನ್ ಖಾನ್ ಭುಜದ ಗಾಯದಿಂದ ಚೇತರಿಸಿಕೊಂಡಿಲ್ಲ. ಇದು ತಂಡಕ್ಕೆ ದೊಡ್ಡ ಹೊಡೆತ ಎಂದು ಹೇಳಲಾಗುತ್ತಿದೆ. ಮೊಹ್ಸಿನ್ ಖಾನ್ ಈ ಬಾರಿಯ ಐಪಿಎಲ್‌ನಲ್ಲಿ ಆಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.
-
Dilli, get ready to fill #IPL2023 with your ROARS 🐯
— Delhi Capitals (@DelhiCapitals) March 31, 2023 " class="align-text-top noRightClick twitterSection" data="
Here's what you can look forward to this season 👉 https://t.co/fbZBfmsGgW#YehHaiNayiDilli pic.twitter.com/yN88IkPPwi
">Dilli, get ready to fill #IPL2023 with your ROARS 🐯
— Delhi Capitals (@DelhiCapitals) March 31, 2023
Here's what you can look forward to this season 👉 https://t.co/fbZBfmsGgW#YehHaiNayiDilli pic.twitter.com/yN88IkPPwiDilli, get ready to fill #IPL2023 with your ROARS 🐯
— Delhi Capitals (@DelhiCapitals) March 31, 2023
Here's what you can look forward to this season 👉 https://t.co/fbZBfmsGgW#YehHaiNayiDilli pic.twitter.com/yN88IkPPwi
ಕಾರು ಅಪಘಾತದಿಂದ ಗಾಯಗೊಂಡಿರುವ ರಿಷಬ್ ಪಂತ್ ಬದಲಾಗಿ ಆಸಿಸ್ನ ಅನುಭವಿ ಆಟಗಾರ ಡೇವಿಡ್ ವಾರ್ನರ್ ಈ ಬಾರಿಯ ಡೆಲ್ಲಿ ನಾಯಕತ್ವದ ಹೊಣೆ ಹೊತ್ತಿದ್ದಾರೆ. 2016ರಲ್ಲಿ ಕಪ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ವಾರ್ನರ್ ಮುನ್ನಡೆಸಿದ್ದರು. ಡೇವಿಡ್ ವಾರ್ನರ್, ಪೃಥ್ವಿ ಶಾ ಮತ್ತು ಮಿಚೆಲ್ ಮಾರ್ಷ್ ಜೋಡಿ ದೆಹಲಿ ಕ್ರಿಕೆಟ್‌ನ ಬ್ಯಾಟಿಂಗ್ ಬಲವಾಗಿದೆ. ಮಿಚೆಲ್ ಮಾರ್ಷ್ ಬೌಲಿಂಗ್ ಮಾಡುವ ನಿರೀಕ್ಷೆಯಿದೆ, ಇದರಿಂದಾಗಿ ಡಿಸಿಗೆ ಬೌಲರ್ ಕೊರತೆ ಕಂಡು ಬರುವುದಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಆಲ್ ರೌಡರ್ಗಳ ಕೊರತೆ ಎದುರಿಸುತ್ತಿದೆ. ಇದರ ನಡುವೆಯೂ, ಕೋಚ್ ರಿಕಿ ಪಾಂಟಿಂಗ್ ಅವರು ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿಯಲ್ಲಿ ಈ ಕೊರತೆಯನ್ನು ತುಂಬಲು ಪ್ರಯತ್ನಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದಿನ ಪಂದ್ಯಕ್ಕೆ ಈ ಆಟಗಾರರಿಲ್ಲ: ಲಕ್ನೋ ಸೂಪರ್‌ಜೈಂಟ್ಸ್ ತಂಡವು ಅವರ ಸ್ಫೋಟಕ ಬ್ಯಾಟರ್ ಕ್ವಿಂಟನ್ ಡಿಕಾಕ್ ಇಲ್ಲದೆ ಮೊದಲ ಪಂದ್ಯ ಆಡಬೇಕಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ದಕ್ಷಿಣ ಆಫ್ರಿಕಾದ ಏಕದಿನ ಸರಣಿಯ ಕೊನೆಯ ಪಂದ್ಯ ಏಪ್ರಿಲ್ 2 ರಂದು ನಡೆಯಲಿದೆ. ಪಂದ್ಯದ ನಂತರ ಭಾರತಕ್ಕೆ ಡಿ ಕಾಕ್ ಪ್ರಯಾಣ ಬೆಳೆಸಲಿದ್ದಾರೆ. ಇದೇ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರಾದ ಎನ್ರಿಚ್ ನಾರ್ಟ್ಜೆ ಮತ್ತು ಲುಂಗಿ ಎನ್ಗಿಡಿ ಕೂಡ ಶನಿವಾರದ ಪಂದ್ಯದಲ್ಲಿ ಆಡುತ್ತಿಲ್ಲ. ಮುಸ್ತಾಫಿಜುರ್ ರೆಹಮಾನ್ ಲಕ್ನೋ ತಂಡ ಸೇರಿದ್ದು, ಇಂದು ಆಡುವ ಸಾದ್ಯೆತೆ ಇದೆ.
ಪಂದ್ಯದ ಸಮಯ: 7.30PM
ಸ್ಥಳ: ಲಕ್ನೋದ ಏಕಾನಾ ಸ್ಟೇಡಿಯಂ
ಇದನ್ನೂ ಓದಿ: IPL 2023: ಶಿಖರ್-ರಾಣ ಫೈಟ್.. ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ