ETV Bharat / sports

IPL 2023: ದೀಪಕ್​ ಚಹಾರ್​, ಬೆನ್ ಸ್ಟೋಕ್ಸ್​ಗೆ ಗಾಯ - ETV Bharath Kannada news

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಸ್ಟಾರ್​ ಬೌಲರ್​ ದೀಪಕ್​ ಚಹಾರ್ ಗಾಯಗೊಂಡಿದ್ದಾರೆ.

TATA IPL 2023 Deepak Chahar and Ben Stokes Injured in Chennai Super Kings
IPL 2023: ದೀಪಕ್​ ಚಹಾರ್​, ಬೆನ್ ಸ್ಟೋಕ್ಸ್​ಗೆ ಗಾಯ
author img

By

Published : Apr 9, 2023, 6:52 PM IST

Updated : Apr 9, 2023, 8:43 PM IST

ನವದೆಹಲಿ: ಚೆನ್ನೈ ಸೂಪರ್​ ಕಿಂಗ್ಸ್ ತಂಡ ಒಂದರಲ್ಲಿ ಸೋತು, ನಿನ್ನೆ ಮುಂಬೈ ಇಂಡಿಯನ್ಸ್​ ವಿರುದ್ಧ ತಮ್ಮ ಎರಡನೇ ಜಯ ದಾಖಲಿಸಿದೆ. ಈ ನಡುವೆ ಚೆನ್ನೈ ಬಳಗದಿಂದ ಶಾಕಿಂಗ್​ ಸುದ್ದಿ ಹೊರಬಂದಿದ್ದು ವೇಗದ ಬೌಲರ್ ದೀಪಕ್ ಚಹಾರ್ ಮತ್ತು ಬೆನ್ ಸ್ಟೋಕ್ಸ್ ಗಾಯಕ್ಕೆ ತುತ್ತಾಗಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಚಹಾರ್​ ಗಾಯಗೊಂಡರು.

ಚಹಾರ್​ ಪ್ರಸ್ತುತ ಐಪಿಎಲ್​ ಆವೃತ್ತಿಯಿಂದ ಬಹಳ ಸಮಯದವರೆಗೆ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ನಿನ್ನೆ ಅವರು ಕೇವಲ ಒಂದು ಓವರ್​ ಮಾತ್ರ ಮಾಡಿದ್ದಾರೆ. ಪಂದ್ಯದ ನಂತರ ಫಿಸಿಯೋ, ಮಂಡಿರಜ್ಜು ಗಾಯಕ್ಕೆ ತುತ್ತಾದ ಬಗ್ಗೆ ಮಾಹಿತಿ ನೀಡಿದ್ದರು.

30 ವರ್ಷದ ಚಹಾರ್ ವಾಂಖೆಡೆ ಸ್ಟೇಡಿಯಂನಲ್ಲಿ ತಮ್ಮ ಮೊದಲ ಓವರ್​ನ ಐದನೇ ಎಸೆತದಲ್ಲಿ ಗಾಯಗೊಂಡರು. ಫಿಸಿಯೋ ಸಲಹೆ ಪಡೆದು ಕೊನೆಯ ಎಸೆತ​ ಮಾಡಿದ ನಂತರ ಫೀಲ್ಡ್​ನಿಂದ ಚಹಾರ್​ ಹೊರಗುಳಿದರು. "ತಂಡವು ಚೆನ್ನೈಗೆ ಮರಳಿದ ನಂತರ ಗಾಯದ ಪ್ರಮಾಣ ಗುರುತಿಸಲು ಚಾಹರ್ ಸ್ಕ್ಯಾನ್‌ಗೆ ಒಳಗಾಗುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ವೈದ್ಯಕೀಯ ಸಿಬ್ಬಂದಿ ಆಟಗಾರನನ್ನು ಗಮನಿಸುತ್ತಿದ್ದಾರೆ. ಅವರ ಚೇತರಿಕೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ" ಎಂದು ಸಿಎಸ್​ಕೆ ಹೇಳಿದೆ.

ಇದನ್ನೂ ಓದಿ: GT vs KKR: ಕೆಕೆಆರ್​ ಗೆಲುವಿಗೆ ಬೇಕು 205 ರನ್‌! ಹ್ಯಾಟ್ರಿಕ್‌ ಗೆಲುವು ದಾಖಲಿಸುತ್ತಾ ಗುಜರಾತ್ ಟೈಟಾನ್ಸ್​?

ಚೆನ್ನೈ 14 ಕೋಟಿ ರೂ ಕೊಟ್ಟು ದೀಪಕ್​ ಚಹಾರ್​ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ವರ್ಷದ ಐಪಿಎಲ್​ ವೇಳೆ ಬೆನ್ನು ನೋವಿನ ಕಾರಣ ಸೀಸನ್​ನಿಂದ ಚಹಾರ್​ ಹೊರಗುಳಿದಿದ್ದರು. ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದಲೂ ದೂರ ಉಳಿದಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಗಾಯಕ್ಕೆ ತುತ್ತಾದ ಚಹಾರ್​ ಮತ್ತೆ ಕೆಲವು ತಿಂಗಳ ಹಿಂದೆ ಚೇತರಿಸಿಕೊಂಡಿದ್ದರು.

ಕಾಲ್ಬೆರಳು ಗಾಯದಿಂದಾಗಿ ಸಿಎಸ್‌ಕೆ ಸ್ಟಾರ್​ ಆಲ್​ರೌಂಡರ್​ ಬೆನ್ ಸ್ಟೋಕ್ಸ್ ಒಂದು ವಾರದ ಕಾಲ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಕಾಲ್ಬೆರಳು ಗಾಯದಿಂದಾಗಿ ಸ್ಟೋಕ್ಸ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಏ.12 ರಂದು ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಟೋಕ್ಸ್​ ಆಡುವುದು ಅನುಮಾನ ಎನ್ನಲಾಗುತ್ತಿದ್ದು ಏಪ್ರಿಲ್​ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಮತ್ತೊಂದೆಡೆ, ಫುಡ್ ಪಾಯ್ಸನ್​ನಿಂದಾಗಿ ಆಫ್-ಸ್ಪಿನ್ನಿಂಗ್ ಆಲ್-ರೌಂಡರ್ ಮೊಯಿನ್ ಅಲಿ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಅವರು ಚೇತರಿಸಿಕೊಂಡಿದ್ದು ಮುಂದಿನ ಪಂದ್ಯಕ್ಕೆ ಲಭ್ಯವಿದ್ದಾರೆ. ಇಂದಿನ ಗುಜರಾತ್​ ಮತ್ತು ಕೆಕೆಆರ್​ ಪಂದ್ಯದಲ್ಲಿ ನಾಯಕ ಹಾರ್ದಿಕ್​ ಪಾಂಡ್ಯ ಸಹ ಅನಾರೋಗ್ಯದ ಕಾರಣ ತಂಡದಿಂದ ಹೊರಗುಳಿದಿದ್ದರು. ಅವರ ಬದಲಿಯಾಗಿ ರಶೀದ್​ ಖಾನ್​ ತಂಡವನ್ನು ಮುನ್ನಡೆಸಿದ್ದರು. ಈಗಾಗಲೇ ಐಪಿಎಲ್​ನಿಂದ 13 ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಹೋಗಿದ್ದಾರೆ. ಚಹಾರ್​ ಸಂಪೂರ್ಣ ಐಪಿಎಲ್​ನಿಂದ ಹೊರ ಬಿದ್ದರೆ 14ನೇ ಆಟಗಾರ ಆಗಲಿದ್ದಾರೆ.

ಇದನ್ನೂ ಓದಿ: ಧೋನಿ ರಿವೀವ್​ ಸಿಸ್ಟಮ್​​: ಎಂಎಸ್​ಡಿ ಕರಾರುವಾಕ್ ನಿರ್ಧಾರ ಮತ್ತೆ ಸಾಬೀತು

Last Updated : Apr 9, 2023, 8:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.