ಚೆನ್ನೈ (ತಮಿಳುನಾಡು): ಭಾರತದ ಲೆಜೆಂಡರಿ ವಿಕೆಟ್ ಕೀಪರ್ ಕಂ ಬ್ಯಾಟರ್ ಎಂ.ಎಸ್.ಧೋನಿ ಇಂದು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ 200ನೇ ನಾಯಕತ್ವದ ಪಂದ್ಯ ಆಡುತ್ತಿದ್ದಾರೆ. ಸಿಎಸ್ಕೆ ತಂಡವು ಚೆಪಾಕ್ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ಅನ್ನು ಎದುರಿಸಲಿದೆ. ಸ್ಪಿನ್‌ಸ್ನೇಹಿ ಪಿಚ್‌ನಲ್ಲಿ ಯಾರು ಪಾರಮ್ಯ ಸಾಧಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಈ ಪಂದ್ಯವನ್ನು ಸ್ಪಿನ್ನರ್‌ಗಳ ಕಾಳಗವೆಂದು ಕರೆದರೆ ತಪ್ಪಾಗದು. ಚೆನ್ನೈ ಬಳಗದಲ್ಲಿ ಮೊಯಿನ್ ಅಲಿ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮಹೇಶ್ ತೀಕ್ಷಣ ಇದ್ದರೆ, ಅತ್ತ ಆರ್ಆರ್ನಲ್ಲಿ ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ಇದ್ದಾರೆ. ಚೆಪಾಕ್ ಪಿಚ್ ನಿಧಾನಗತಿಯ ಸ್ಪಿನ್ ಸ್ನೇಹಿಯಾಗಿದ್ದು ಪಂದ್ಯದಲ್ಲಿ ಬ್ಯಾಟರ್ಗಳಿಗೆ ಸವಾಲಾಗಲಿದೆ.
-
The Run Up to the Royal Clash begins! 🥳#CSKvRR #WhistlePodu #Yellove 🦁💛 pic.twitter.com/MhDIZ2bGXb
— Chennai Super Kings (@ChennaiIPL) April 12, 2023 " class="align-text-top noRightClick twitterSection" data="
">The Run Up to the Royal Clash begins! 🥳#CSKvRR #WhistlePodu #Yellove 🦁💛 pic.twitter.com/MhDIZ2bGXb
— Chennai Super Kings (@ChennaiIPL) April 12, 2023The Run Up to the Royal Clash begins! 🥳#CSKvRR #WhistlePodu #Yellove 🦁💛 pic.twitter.com/MhDIZ2bGXb
— Chennai Super Kings (@ChennaiIPL) April 12, 2023
ಚೆನ್ನೈ ತಂಡವು ಉದ್ಘಾಟನಾ ಪಂದ್ಯದಲ್ಲಿ ಸೋತ ನಂತರ ಸತತ ಎರಡು ಗೆಲುವು ಪಡೆದಿದೆ. ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಮಣಿಸಿ ಗೆಲುವಿನ ಟ್ರ್ಯಾಕ್ಗೆ ಮರಳಿತ್ತು. ಬಳಿಕ ಮುಂಬೈ ಇಂಡಿಯನ್ಸ್ ಸೋಲಿಸಿತ್ತು. ಇಂದು ನಾಲ್ಕನೇ ಪಂದ್ಯ ಆಡುತ್ತಿದ್ದು, 3ನೇ ಗೆಲುವನ್ನು ಎದುರು ನೋಡುತ್ತಿದೆ. ರುತುರಾಜ್ ಗಾಯಕ್ವಾಡ್ ಜೊತೆಗೆ ಅಜಿಂಕ್ಯ ರಹಾನೆ ಅವರು ಲಯಕ್ಕೆ ಮರಳಿರುವುದು ಚೆನ್ನೈಗೆ ಪ್ಲಸ್ ಪಾಯಿಂಟ್. ಆರಂಭಿಕ ಆಟಗಾರ ಡೆವೊನ್ ಕಾನ್ವೆ ಇನ್ನುಳಿದಂತೆ ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಎಂ.ಎಸ್.ಧೋನಿಯ ಬ್ಯಾಟ್ನಿಂದಲೂ ರನ್ಗಳು ಬಂದರೆ ತಂಡ ಇನ್ನಷ್ಟು ಬಲಿಷ್ಟವಾಗಲಿದೆ.
ರಾಜಸ್ಥಾನದಲ್ಲಿ ಬಟ್ಲರ್, ಜೈಸ್ವಾಲ್ ಮತ್ತು ಸಂಜು ಲಯದಲ್ಲಿದ್ದಾರೆ. ಇವರಿಗೆ ಇತರೆ ಬ್ಯಾಟರ್ಗಳು ಸಾಥ್ ಕೊಡುವ ಅಗತ್ಯವಿದೆ. ಅಶ್ವಿನ್ ಅವರನ್ನು ಆರಂಭಿಕರಾಗಿಳಿಸಿ ಪ್ರಯೋಗ ಮಾಡಿ ಸೋಲನುಭವಿಸಿದ ಸಂಜು ಇಂದು ಬೇರೆ ಹೊಸ ಪ್ರಯತ್ನಗಳನ್ನು ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕು.
-
+ Halla Mode ON 🔥 pic.twitter.com/Xgbwj85f6D
— Rajasthan Royals (@rajasthanroyals) April 12, 2023 " class="align-text-top noRightClick twitterSection" data="
">+ Halla Mode ON 🔥 pic.twitter.com/Xgbwj85f6D
— Rajasthan Royals (@rajasthanroyals) April 12, 2023+ Halla Mode ON 🔥 pic.twitter.com/Xgbwj85f6D
— Rajasthan Royals (@rajasthanroyals) April 12, 2023
ಮುಖಾಮುಖಿ: ಐಪಿಎಲ್‌ನಲ್ಲಿ ಇದುವರೆಗೆ ಆಡಿದ ಪಂದ್ಯಗಳಲ್ಲಿ ಎರಡು ತಂಡಗಳ ನಡುವೆ ವಿವಿಧ ಸ್ಥಳಗಳಲ್ಲಿ ಒಟ್ಟು 27 ಪಂದ್ಯಗಳು ನಡೆದಿವೆ. ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ್ ಕೇವಲ 12 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ಕಳೆದ ಐದು ಪಂದ್ಯಗಳ ದಾಖಲೆ ನೋಡಿದರೆ ರಾಜಸ್ಥಾನ್ ರಾಯಲ್ಸ್ 4 ಪಂದ್ಯ ಗೆದ್ದಿದೆ.
ಗಾಯ: ದೀಪಕ್ ಚಾಹರ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದು ಕೆಲವು ಪಂದ್ಯಗಳಿಗೆ ಅಲಭ್ಯರಾಗಿರಲಿದ್ದಾರೆ. ಬೆನ್ ಸ್ಟೋಕ್ಸ್ ಕಾಲ್ಬೆರಳು ಗಾಯದಿಂದಾಗಿ ಮುಂಬೈ ವಿರುದ್ಧ ಆಡಲು ಸಾಧ್ಯವಾಗಲಿಲ್ಲ. ಇಂದಿನ ಪಂದ್ಯದಲ್ಲೂ ಕಣಕ್ಕಿಳಿತಯುವುದು ಅನುಮಾನ.
ಸಂಭಾವ್ಯ ತಂಡಗಳು ..: ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ಧ್ರುವ್ ಜುರೆಲ್ / ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಸನ್ ಹೋಲ್ಡರ್, ಆರ್.ಅಶ್ವಿನ್, ಎಂ.ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ರಾಜವರ್ಧನ್ ಹಂಗರ್ಗೇಕರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ
ಇದನ್ನೂ ಓದಿ: ಕೊನೆಯ ಓವರ್ ಥ್ರಿಲ್ಲರ್ ಗೆದ್ದ ಮುಂಬೈಗೆ ಮೊದಲ ಗೆಲುವಿನ ಸಿಂಚನ: ಡೆಲ್ಲಿಗೆ 4 ನೇ ಸೋಲು