ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ದಾಖಲೆಯ 207ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ ಬೃಹತ್ 208 ರನ್ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಮನದೀಪ್ ಸಿಂಗ್ ವಿಕೆಟ್ ಕಳೆದು ಕೊಂಡಿತು. ಇದರ ಬೆನ್ನಲ್ಲೇ ಬಂದ ಮಿಚೆಲ್ ಮಾರ್ಷ್ 10ರನ್ಗಳಿಕೆ ಮಾಡಿ, ಔಟಾದರು. ಈ ವೇಳೆ, ಒಂದಾದ ಕ್ಯಾಪ್ಟನ್ ರಿಷಭ್ ಪಂತ್ ಹಾಗೂ ವಾರ್ನರ್ ಜೋಡಿ ಅಬ್ಬರಿಸಿತು. ಸತತ ಮೂರು ಸಿಕ್ಸರ್ ಸಿಡಿಸಿ ಮಿಂಚಿದ ಪಂತ್ ತಾವು ಎದುರಿಸಿದ 16 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಸೇರಿದಂತೆ 26ರನ್ಗಳಿಕೆ ಮಾಡಿದರು. ಈ ವೇಳೆ ಶ್ರೇಯಸ್ ಗೋಪಾಲ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
-
𝗜𝗻𝗻𝗶𝗻𝗴𝘀 𝗕𝗿𝗲𝗮𝗸!
— IndianPremierLeague (@IPL) May 5, 2022 " class="align-text-top noRightClick twitterSection" data="
The stunning batting show from @davidwarner31 (92*) & Rovman Powell (67*) powers @DelhiCapitals to 207/3. 👏 👏
The @SunRisers chase to begin soon. 👍 👍
Scorecard ▶️ https://t.co/0T96z8GzHj#TATAIPL | #DCvSRH pic.twitter.com/ppoNlXjQFd
">𝗜𝗻𝗻𝗶𝗻𝗴𝘀 𝗕𝗿𝗲𝗮𝗸!
— IndianPremierLeague (@IPL) May 5, 2022
The stunning batting show from @davidwarner31 (92*) & Rovman Powell (67*) powers @DelhiCapitals to 207/3. 👏 👏
The @SunRisers chase to begin soon. 👍 👍
Scorecard ▶️ https://t.co/0T96z8GzHj#TATAIPL | #DCvSRH pic.twitter.com/ppoNlXjQFd𝗜𝗻𝗻𝗶𝗻𝗴𝘀 𝗕𝗿𝗲𝗮𝗸!
— IndianPremierLeague (@IPL) May 5, 2022
The stunning batting show from @davidwarner31 (92*) & Rovman Powell (67*) powers @DelhiCapitals to 207/3. 👏 👏
The @SunRisers chase to begin soon. 👍 👍
Scorecard ▶️ https://t.co/0T96z8GzHj#TATAIPL | #DCvSRH pic.twitter.com/ppoNlXjQFd
ಅಬ್ಬರಿಸಿದ ವಾರ್ನರ್- ಪೊವೆಲ್: ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಜೊತೆ ಸೇರಿದ ಪೊವೆಲ್ ಎದುರಾಳಿ ತಂಡದ ಬೌಲರ್ಗಳಲ್ಲಿ ಹಿಗ್ಗಾಮುಗ್ಗಾ ಥಳಿಸಿದರು. ಈ ಜೋಡಿ ಕೊನೆ ಓವರ್ವರೆಗೂ ಬ್ಯಾಟಿಂಗ್ ಮಾಡಿತು.ಹೈದರಾಬಾದ್ ಬೌಲರ್ಗಳನ್ನ ದಂಡಿಸಿದ ಪೊವೆಲ್ ಕೇವಲ 30 ಎಸೆತಗಳಲ್ಲಿ ಫಿಫ್ಟಿ ಗಳಿಕೆ ಮಾಡಿದ್ರೆ, ವಾರ್ನರ್ 34 ಎಸೆತಗಳಲ್ಲಿ ಅರ್ಧಶತಕ ಪೊರೈಕೆ ಮಾಡಿದರು. ಐಪಿಎಲ್ನಲ್ಲಿ ವಾರ್ನರ್ ಬ್ಯಾಟ್ನಿಂದ ಸಿಡಿದ 54ನೇ ಅರ್ಧಶತಕ ಇದಾಗಿದೆ. ವಾರ್ನರ್ ಇದೇ ಆವೃತ್ತಿಯಲ್ಲಿ ದಾಖಲೆಯ 4ನೇ ಅರ್ಧಶತಕ ಸಿಡಿಸಿದ್ರೆ, ಪೊವೆಲ್ ಅಜೇಯ 67ರನ್ಗಳಿಕೆ ಮಾಡಿದರು. ಆದರೆ, ವಾರ್ನರ್ ತಾವು ಎದುರಿಸಿದ 58 ಎಸೆತಗಳಲ್ಲಿ 3 ಸಿಕ್ಸರ್, 12 ಬೌಂಡರಿ ಸೇರಿದಂತೆ 92ರನ್ಗಳಿಕೆ ಮಾಡಿದರು.
ಹೈದರಾಬಾದ್ ತಂಡದ ಪರ ಭುವನೇಶ್ವರ್ ಕುಮಾರ್, ಅಬ್ಬೊಟ್ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದುಕೊಂಡರು.