ETV Bharat / sports

CSK vs GT: ಕ್ವಾಲಿಫೈಯರ್ 1 ಖಚಿತ ಪಡಿಸಿಕೊಂಡ ಟೈಟನ್ಸ್​ - ಕ್ವಾಲಿಫೈಯರ್ 1 ಖಚಿತ ಪಡಿಸಿಕೊಂಡ ಟೈಟನ್ಸ್

19.1 ಓವರ್‌ಗಳಲ್ಲಿ ಗುಜರಾತ್ ಗೆಲುವು ಸಾಧಿಸಿದೆ. ಸಹಾರ ಅಜೇಯ ಆಟಕ್ಕೆ ಚೆನ್ನೈ ಮಣಿದಿದೆ. ಗುಜರಾತ್​ ಈ ಮೂಲಕ 'ಕ್ವಾಲಿಫೈಯರ್ 1' ನಲ್ಲಿ ಆಡುವುದು ಪಕ್ಕಾ ಆಗಿದೆ.

Titans tame CSK to secure top two finish
ಕ್ವಾಲಿಫೈಯರ್ 1 ಖಚಿತ ಪಡಿಸಿಕೊಂಡ ಟೈಟನ್ಸ್​
author img

By

Published : May 15, 2022, 8:20 PM IST

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ ಸಾಧಾರಣ ಮೊತ್ತವನ್ನು ಹಾರ್ದಿಕ್ ಪಾಂಡ್ಯ ಬಳಗವು ಸುಲಭವಾಗಿ ಬೆನ್ನಟ್ಟಿದೆ. ಗುಜರಾತ್ ಟೈಟನ್ಸ್ ತಂಡವು ಏಳು ವಿಕೇಟ್​ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಗ್ರಸ್ಥಾನ ಭದ್ರ ಪಡಿಸಿಕೊಂಡಿರುವ ಟೈಟನ್ಸ್ 'ಕ್ವಾಲಿಫೈಯರ್ 1' ನಲ್ಲಿ ಆಡುವುದು ಪಕ್ಕಾ ಆಗಿದೆ.

ಚೆನ್ನೈ ತಂಡ ನೀಡಿದ್ದ 133 ರನ್​ಗಳ ಗುರಿಯನ್ನು ವೃದ್ಧಿಮಾನ್ ಸಹಾ ಅಜೇಯ 67 ರನ್​ನ ಸಹಾಯದಿಂದ 3 ವಿಕೇಟ್​ ನಷ್ಟಕ್ಕೆ ಗಳಿಸಲು ಸಾಧ್ಯವಾಯಿತು. ಐದು ಬಾಲ್​ ಬಾಕಿ ಇರುವಾಗಲೇ ಪಂದ್ಯವನ್ನು ಟೈಟನ್ಸ್ ಗೆದ್ದು ಬೀಗಿತು. ಸಹಾ ಮತ್ತು ಗಿಲ್(18)​ ಮೊದಲ ವಿಕೇಟ್​ಗೆ 59 ರನ್​ನ ಜೊತೆಯಾಟ ನೀಡಿದರು. ಗಿಲ್​ ವಿಕೇಟ್​ ನಂತರ ಮ್ಯಾಥ್ಯೂ ವೇಡ್ 20 ರನ್‌ಗಳ ಕಾಣಿಕೆ ನೀಡಿದರು. ಹಾರ್ದಿಕ್ ಪಾಂಡ್ಯ 7 ಹಾಗೂ ಡೇವಿಡ್ ಮಿಲ್ಲರ್ ಅಜೇಯ 15 ರನ್ ಗಳಿಸಿದರು. ಸಹಾ 8 ಬೌಂಡರಿ ಮತ್ತು ಒಂದು ಸಿಕ್ಸರ್​ನ ಸಹಾಯದಿಂದ 67 ರನ್​ ಗಳಿಸಿ ಅಜೇಯರಾಗಿ ಉಳಿದರು.

ಚೆನ್ನೈ ಪರ ಮಥೀಶ ಪತಿರಾನ್​ 2 ವಿಕೇಟ್​ ಮತ್ತು ಮೊಯಿನ್​ ಅಲಿ ಒಂದು ವಿಕೆಟ್​ ಗಳಿಸಿದರು. ಗುಜರಾತ್ ಆಡಿರುವ 13 ಪಂದ್ಯಗಳಲ್ಲಿ 10ನೇ ಗೆಲುವಿನೊಂದಿಗೆ ಒಟ್ಟು 20 ಅಂಕ ಗಳಿಸಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ. ಅತ್ತ ಚೆನ್ನೈ 13 ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲೇ ಉಳಿದುಕೊಂಡಿದೆ.

ಗಾಯಕವಾಡ್ ಅರ್ಧಶತಕ ವ್ಯರ್ಥ: ಋತುರಾಜ್ ಗಾಯಕವಾಡ್ ಅರ್ಧಶತಕದ (53) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. ಆರಂಭಿಕ ಆಟಗಾರ ಡೆವೊನ್ ಕಾನ್ವೆ (5) ಬೇಗ ಪೆವಿಲಿಯನ್​ಗೆ ಮರಳಿದರೂ ನಂತರ ಬಂದ ಮೊಯಿನ್ ಅಲಿ(21) ಅವರು ಋತುರಾಜ್ ಗಾಯಕವಾಡ್​ಗೆ ಉತ್ತಮ ಜೊತೆಯಾದರು. ಕಲಾತ್ಮಕ ಇನ್ನಿಂಗ್ಸ್ ಕಟ್ಟಿದ ಋತುರಾಜ್ 49 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು. ದುಬೆ ಸೊನ್ನೆ ಸುತ್ತಿದರೆ, ಎನ್. ಜಗದೀಶನ್ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ನಾಯಕ ಮಹೇಂದ್ರ ಸಿಂಗ್ ಧೋನಿ (7) ರನ್​ ಗಳಿಸಿ ಪರಿಣಾಮಕಾರಿ ಎನಿಸಿಕೊಳ್ಳಲಿಲ್ಲ. 33 ಎಸೆತಗಳನ್ನು ಎದುರಿಸಿದ ಜಗದೀಶನ್ 39 ರನ್ ಗಳಿಸಿ ಔಟಾಗದೆ ಉಳಿದರು. ಗುಜರಾತ್ ಪರ ಮೊಹಮ್ಮದ್ ಶಮಿ ಎರಡು ವಿಕೆಟ್ ಗಳಿಸಿದರು.

ಇದನ್ನೂ ಓದಿ: CSK vs GT : ಟಾಸ್​ ಗೆದ್ದು ಚೆನ್ನೈ ಬ್ಯಾಟಿಂಗ್ ಆಯ್ಕೆ​.. ಆರಂಭಿಕ ಕಾನ್ವೇ ವಿಕೆಟ್​ ಪತನ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.