ಪುಣೆ: ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ(73)ಹಾಗೂ ಹಾಲಿ ನಾಯಕ ಫಾಪ್ ಡುಪ್ಲೆಸಿಸ್(44) ಆಕರ್ಷಕ 115 ರನ್ಗಳ ಜೊತೆಯಾಟ ಹಾಗೂ ಮ್ಯಾಕ್ಸವೆಲ್ ಸ್ಫೋಟಕ(40) ಆಟದ ನೆರವಿನಿಂದ ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿರುವ ಆರ್ಸಿಬಿ ಪ್ಲೇ-ಆಫ್ ರೇಸ್ನಲ್ಲಿ ಜೀವಂತವಾಗಿದೆ. ಆದರೂ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೊನೆಯ ಪಂದ್ಯದ ಫಲಿತಾಂಶದ ಮೇಲೆ ಆರ್ಸಿಬಿ ಹಣೆಬರಹ ನಿರ್ಧಾರವಾಗಲಿದೆ.
ವಾಂಖೆಡೆ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 62ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 168ರನ್ಗಳಿಕೆ ಮಾಡಿತು.ಡೇವಿಡ್ ಮಿಲ್ಲರ್(34), ವೃದ್ಧಿಮಾನ್ ಸಹಾ(31) ಹಾಗೂ ಕೊನೆಯಲ್ಲಿ ಅಬ್ಬರಿಸಿದ ರಶೀದ್ ಖಾನ್ ತಾವು ಎದುರಿಸಿದ 6 ಎಸೆತಗಳಲ್ಲಿ ಭರ್ಜರಿ ಎರಡು ಸಿಕ್ಸರ್ ಸೇರಿ 19ರನ್ಗಳಿಕೆ ಮಾಡಿದರು. ಆರ್ಸಿಬಿ ಪರ ಹ್ಯಾಜಲ್ವುಡ್ 2 ವಿಕೆಟ್ ಪಡೆದರೆ, ಮ್ಯಾಕ್ಸವೆಲ್ ಹಾಗೂ ಹಸರಂಗ ತಲಾ 1 ವಿಕೆಟ್ ಪಡೆದುಕೊಂಡರು.
169ರನ್ಗಳ ಗುರಿ ಬೆನ್ನತ್ತಿ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾಲಿ ಕ್ಯಾಪ್ಟನ್ ಡುಪ್ಲೆಸಿಸ್ ಎದುರಾಳಿ ಬೌಲರ್ಗಳನ್ನ ಸುಲಭವಾಗಿ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 115ರನ್ಗಳ ಜೊತೆಯಾಟವಾಡಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 73ರನ್ಗಳಿಕೆ ಮಾಡಿದರು. ಇವರಿಗೆ ಸಾಥ್ ನೀಡಿದ ನಾಯಕ 44ರನ್ಗಳಿಸಿದರು. ಇದಾದ ಬಳಿಕ ಬಂದ ಗ್ಲೇನ್ ಮ್ಯಾಕ್ಸವೆಲ್ ಕೇವಲ 18 ಎಸೆತಗಳಲ್ಲಿ 40ರನ್ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ತಂಡ ಕೊನೆಯದಾಗಿ 18.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 170ರನ್ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ ಪ್ಲೇ-ಆಫ್ ಆಸೆ ಜೀವಂತವಾಗಿಟ್ಟುಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಕೊನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದ್ದು, ಇದರ ಆಧಾರದ ಮೇಲೆ ಆರ್ಸಿಬಿ ಪ್ಲೇಆಫ್ ಆಡಲಿದೆಯಾ ಎಂಬುದು ನಿರ್ಧಾರವಾಗಲಿದೆ. ಈ ಗೆಲುವಿನೊಂದಿಗೆ ಆರ್ಸಿಬಿ 16 ಪಾಯಿಂಟ್ಗಳಿಸಿದ್ದು, ಸದ್ಯ 4ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.
-
That's that from Match 67 as #RCB win by 8 wickets and are now 4th on the #TATAIPL Points Table.
— IndianPremierLeague (@IPL) May 19, 2022 " class="align-text-top noRightClick twitterSection" data="
Scorecard - https://t.co/TzcNzbrVwI #RCBvGT #TATAIPL pic.twitter.com/K7uz6q15qQ
">That's that from Match 67 as #RCB win by 8 wickets and are now 4th on the #TATAIPL Points Table.
— IndianPremierLeague (@IPL) May 19, 2022
Scorecard - https://t.co/TzcNzbrVwI #RCBvGT #TATAIPL pic.twitter.com/K7uz6q15qQThat's that from Match 67 as #RCB win by 8 wickets and are now 4th on the #TATAIPL Points Table.
— IndianPremierLeague (@IPL) May 19, 2022
Scorecard - https://t.co/TzcNzbrVwI #RCBvGT #TATAIPL pic.twitter.com/K7uz6q15qQ
ರೇಸ್ನಿಂದ ಹೊರಬಿದ್ದ ಪಂಜಾಬ್, ಹೈದರಾಬಾದ್: ಗುಜರಾತ್ ವಿರುದ್ಧ ಬೆಂಗಳೂರು ಗೆಲುವು ದಾಖಲು ಮಾಡುತ್ತಿದ್ದಂತೆ ಪಂಜಾಬ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿವೆ. ಈಗಾಗಲೇ ಮುಂಬೈ ಹಾಗೂ ಚೆನ್ನೈ ತಂಡ ಈ ರೇಸ್ನಿಂದ ಹೊರಹೋಗಿವೆ.ಗುಜರಾತ್, ಲಖನೌ ಪ್ಲೇ-ಆಫ್ ರೇಸ್ಗೆ ಪ್ರವೇಶ ಪಡೆದುಕೊಂಡಿವೆ.