ಮುಂಬೈ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿರುವ ಗುಜರಾತ್ ಟೈಟನ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 168ರನ್ಗಳಿಕೆ ಮಾಡಿದ್ದು, ಆರ್ಸಿಬಿ ಗೆಲುವುಗೆ 169ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ. ಆರಂಭಿಕ ಆಘಾತದ ಹೊರತಾಗಿ ಕೂಡ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾ(62), ಡೇವಿಡ್ ಮಿಲ್ಲರ್(34) ರನ್ಗಳ ನೆರವಿನಿಂದ ಸ್ಪರ್ಧಾತ್ಮಕ ಗುರಿ ನೀಡಿದೆ.
ವೃದ್ಧಿಮಾನ್ ಸಹಾ(31) ಹಾಗೂ ಕೊನೆಯಲ್ಲಿ ಅಬ್ಬರಿಸಿದ ರಶೀದ್ ಖಾನ್ ತಾವು ಎದುರಿಸಿದ 6 ಎಸೆತಗಳಲ್ಲಿ ಭರ್ಜರಿ ಎರಡು ಸಿಕ್ಸರ್ ಸೇರಿ 19ರನ್ಗಳಿಕೆ ಮಾಡಿದರು.
ಆರ್ಸಿಬಿ ಪರ ಹ್ಯಾಜಲ್ವುಡ್ 2 ವಿಕೆಟ್ ಪಡೆದರೆ, ಮ್ಯಾಕ್ಸವೆಲ್ ಹಾಗೂ ಹಸರಂಗ ತಲಾ 1 ವಿಕೆಟ್ ಪಡೆದುಕೊಂಡರು.
ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ನ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಹಾರ್ದಿಕ್ ಪಾಂಡ್ಯಾ ಪಡೆ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ.ಆರ್ಸಿಬಿ ಪಾಲಿಗೆ ಇಂದಿನ ಪಂದ್ಯ 'ಮಾಡು ಇಲ್ಲವೆ ಮಡಿ' ಆಗಿದ್ದು, ಗೆಲುವು ಅನಿವಾರ್ಯವಾಗಿದೆ. 2022ರ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ಈಗಾಗಲೇ ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿದ್ದು, ಇಂದಿನ ಪಂದ್ಯಕ್ಕಾಗಿ ಕೇವಲ ಒಂದು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ.
ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿಗೆ ದೊಡ್ಡ ಮಟ್ಟದ ಗೆಲುವು ಅನಿವಾರ್ಯವಾಗಿದೆ. ಇದರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಾಣಬೇಕು. ಒಂದೊಮ್ಮೆ ಎರಡು ತಂಡಗಳು ಗೆಲುವು ದಾಖಲು ಮಾಡಿದ್ರೂ, ನೆಟ್ ರನ್ರೇಟ್ ಆಧಾರದ ಮೇಲೆ ಆರ್ಸಿಬಿ ಪ್ಲೇ-ಆಫ್ ರೇಸ್ನಿಂದ ಹೊರಬೀಳಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಆಡಿರುವ 13 ಪಂದ್ಯಗಳ ಪೈಕಿ 7ರಲ್ಲಿ ಗೆದ್ದು, 5ನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯದಲ್ಲಿ ಗೆದ್ದರೆ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಹಾಕಲಿದೆ.
-
A look at the Playing XI for #RCBvGT
— IndianPremierLeague (@IPL) May 19, 2022 " class="align-text-top noRightClick twitterSection" data="
Live - https://t.co/TzcNzbrVwI #RCBvGT #TATAIPL https://t.co/ZVP5yZHYtE pic.twitter.com/gLYRVolo18
">A look at the Playing XI for #RCBvGT
— IndianPremierLeague (@IPL) May 19, 2022
Live - https://t.co/TzcNzbrVwI #RCBvGT #TATAIPL https://t.co/ZVP5yZHYtE pic.twitter.com/gLYRVolo18A look at the Playing XI for #RCBvGT
— IndianPremierLeague (@IPL) May 19, 2022
Live - https://t.co/TzcNzbrVwI #RCBvGT #TATAIPL https://t.co/ZVP5yZHYtE pic.twitter.com/gLYRVolo18
ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫು ಡುಪ್ಲೆಸಿಸ್(ಕ್ಯಾಪ್ಟನ್), ರಜತ್ ಪಟಿದಾರ್, ಮಹಿಪಾಲ್, ಗ್ಲೇನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್(ವಿ,ಕೀ), ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಸಿದ್ಧಾರ್ಥ್ ಕೌಲ್, ಜೋಶ್ ಹ್ಯಾಜಲ್ವುಡ್
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ(ವಿ,ಕೀ), ಶುಬ್ಮನ್ ಗಿಲ್, ಮ್ಯಾಥೂ ವೆಡ್, ಹಾರ್ದಿಕ್ ಪಾಂಡ್ಯಾ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಾಶೀದ್ ಖಾನ್, ಸಾಯಿ ಕಿಶೋರ್, ಫರ್ಗ್ಯೂಸನ್, ಯಸ್ ದಯಾಲ್, ಮೊಹಮ್ಮದ್ ಶಮಿ
ಇಂದಿನ ಪಂದ್ಯಕ್ಕಾಗಿ ಉಭಯ ತಂಡಗಳು ತಲಾ ಒಂದು ಬದಲಾವಣೆ ಮಾಡಿದ್ದು, ಆರ್ಸಿಬಿ ತಂಡದಲ್ಲಿ ಸಿರಾಜ್ ಸ್ಥಾನದಲ್ಲಿ ಸಿದ್ಧಾರ್ಥ್ ಕೌಲ್ ಅವಕಾಶ ಪಡೆದುಕೊಂಡಿದ್ದು, ಗುಜರಾತ್ ಬಳಗದಲ್ಲಿ ಫರ್ಗ್ಯೂಸನ್ ಕಮ್ಬ್ಯಾಕ್ ಮಾಡಿದ್ದಾರೆ.