ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಪಂಜಾಬ್ ನೀಡಿದ್ದ ಸ್ಪರ್ಧಾತ್ಮಕ 190 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಕೊನೆ ಓವರ್ನಲ್ಲಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಭದ್ರವಾಗಿದೆ. ಆದರೆ, ಸೋಲು ಕಂಡಿರುವ ಪಂಜಾಬ್ ಪ್ಲೇ-ಆಫ್ ಹಾದಿ ಮತ್ತಷ್ಟು ದುರ್ಗಮವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಬೈರ್ಸ್ಟೋ ಅವರ ಆಕರ್ಷಕ 56ರನ್ ಹಾಗೂ ಜಿತೇಶ್ ಶರ್ಮಾ ಸ್ಫೋಟಕ 38ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 189ರನ್ಗಳಿಕೆ ಮಾಡಿತು. ಈ ಸ್ಕೋರ್ ಸುಲಭವಾಗಿ ಬೆನ್ನತ್ತಿದ ರಾಜಸ್ಥಾನ 19.4 ಓವರ್ಗಳಲ್ಲಿ 4ವಿಕೆಟ್ನಷ್ಟಕ್ಕೆ 190 ರನ್ಗಳಿಸಿ ಗೆಲುವಿನ ನಗೆ ಬೀರಿದೆ.
ಗುರಿ ಬೆನ್ನತ್ತಿದ ರಾಜಸ್ಥಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಬಟ್ಲರ್-ಜೈಸ್ವಾಲ್ ಜೊಡಿ ಉತ್ತಮ ಆರಂಭ ಒದಗಿಸಿತು. ಆದರೆ, 30 ರನ್ಗಳಿಕೆ ಮಾಡಿದ ವೇಳೆ ಬಟ್ಲರ್ ರಬಾಡಾ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಕ್ಯಾಪ್ಟನ್ ಸ್ಯಾಮ್ಸನ್ ಕೇವಲ 12 ಎಸೆತಗಳಲ್ಲಿ 23ರನ್ಗಳಿಕೆ ಮಾಡಿ, ರಿಷಿ ಧವನ್ ಓವರ್ನಲ್ಲಿ ಕ್ಯಾಚ್ ನೀಡಿದರು.
ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪಡಿಕ್ಕಲ್ ನಿಧಾನಗತಿ ಬ್ಯಾಟಿಂಗ್ ಮಾಡಿ ವಿಕೆಟ್ ಕಾಯ್ದುಕೊಳ್ಳುವ ಕೆಲಸ ಮಾಡಿದ್ರು. ಆರಂಭದಿಂದಲೂ ಉತ್ತಮವಾಗಿ ಆಡಿದ ಜೈಸ್ವಾಲ್ 68ರನ್ಗಳಿಕೆ ಮಾಡಿದ ವೇಳೆ ಅರ್ಷದೀಪ್ ಓವರ್ನಲ್ಲಿ ಔಟಾದರು. ಇದಾದ ಬಳಿಕ ಪಡಿಕ್ಕಲ್ ಕೂಡ 31ರನ್ಗಳಿಸಿದ ವೇಳೆ ಹರ್ಷದೀಪ್ ಓವರ್ನಲ್ಲಿ ಔಟಾದರು.
ಇನ್ನೂ ಕೇವಲ 16 ಎಸೆತಗಳಲ್ಲಿ ಅಜೇಯ 31ರನ್ಗಳಿಕೆ ಮಾಡಿದ ಶಿಮ್ರಾನ್ ಹೆಟ್ಮಾಯರ್ ತಂಡವನ್ನ ಗೆಲುವಿನ ದಡ ಸೇರಿಸಿದರು. ಪಂಜಾಬ್ ಪರ ಅರ್ಷದೀಪ್ 2 ವಿಕೆಟ್ ಪಡೆದರೆ, ರಬಾಡಾ ಹಾಗೂ ರಿಷಿ ಧವನ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 189 ರನ್ಗಳಿಕೆ ಮಾಡಿತು. ತಂಡದ ಪರ ಬೈರ್ ಸ್ಟೋ 56ರನ್, ಕ್ಯಾಪ್ಟನ್ ಅಗರವಾಲ್ 15 ರನ್, ಜಿತೇಶ್ ಶರ್ಮಾ 38ರನ್ ಗಳಿಸಿದರೆ, ಲಿವಿಗ್ಸ್ಟೋನ್ 22ರನ್ಗಳಿಸಿ ಮಿಂಚಿದರು. ತಂಡ ಕೊನೆಯದಾಗಿ 5 ವಿಕೆಟ್ನಷ್ಟಕ್ಕೆ 189 ರನ್ಗಳಿಕೆ ಮಾಡಿತು. ರಾಜಸ್ಥಾನ ತಂಡದ ಪರ ಚಹಲ್ 3 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ, ಅಶ್ವಿನ್ ತಲಾ 1 ವಿಕೆಟ್ ಪಡೆದರು.