ಮುಂಬೈ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 189 ರನ್ಗಳಿಕೆ ಮಾಡಿದ್ದು, ಎದುರಾಳಿ ರಾಜಸ್ಥಾನ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.
ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟೋ - ಶಿಖರ್ ಧವನ್ ಜೋಡಿ ಉತ್ತಮ ಆರಂಭ ಒದಗಿಸಿತು. ಕೇವಲ 5 ಓವರ್ಗಳಲ್ಲಿ 47ರನ್ ಸೊರೆಗೈದರು. ಆದರೆ, 12ರನ್ಗಳಿಕೆ ಮಾಡಿದ್ದ ಧವನ್ ಅಶ್ವಿನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ರಾಜಪಕ್ಸೆ ತಾವು ಎದುರಿಸಿದ 18 ಎಸೆತಗಳಲ್ಲಿ 27ರನ್ಗಳಿಕೆ ಮಾಡಿ ಚಹಲ್ ಓವರ್ನಲ್ಲಿ ಔಟಾದರು. 56 ರನ್ಗಳಿಸಿ ಉತ್ತಮವಾಗಿ ಆಡ್ತಿದ್ದ ಬೈರ್ ಸ್ಟೋ ಕೂಡ ಚಹಲ್ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
-
A double-wicket over from @yuzi_chahal! 👏 👏#PBKS lose their captain Mayank Agarwal and fifty-up Jonny Bairstow.
— IndianPremierLeague (@IPL) May 7, 2022 " class="align-text-top noRightClick twitterSection" data="
Follow the match ▶️ https://t.co/Oj5tAfX0LP #TATAIPL | #PBKSvRR | @rajasthanroyals pic.twitter.com/JNAMLaXtxC
">A double-wicket over from @yuzi_chahal! 👏 👏#PBKS lose their captain Mayank Agarwal and fifty-up Jonny Bairstow.
— IndianPremierLeague (@IPL) May 7, 2022
Follow the match ▶️ https://t.co/Oj5tAfX0LP #TATAIPL | #PBKSvRR | @rajasthanroyals pic.twitter.com/JNAMLaXtxCA double-wicket over from @yuzi_chahal! 👏 👏#PBKS lose their captain Mayank Agarwal and fifty-up Jonny Bairstow.
— IndianPremierLeague (@IPL) May 7, 2022
Follow the match ▶️ https://t.co/Oj5tAfX0LP #TATAIPL | #PBKSvRR | @rajasthanroyals pic.twitter.com/JNAMLaXtxC
ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್ ಅಗರವಾಲ್ 15ರನ್, ಜಿತೇಶ್ ಶರ್ಮಾ 38ರನ್ ಗಳಿಸಿದರೆ, ಲಿವಿಗ್ಸ್ಟೋನ್ 22ರನ್ಗಳಿಸಿ ಮಿಂಚಿದರು. ತಂಡ ಕೊನೆಯದಾಗಿ 5 ವಿಕೆಟ್ನಷ್ಟಕ್ಕೆ 189 ರನ್ಗಳಿಕೆ ಮಾಡಿತು. ರಾಜಸ್ಥಾನ ತಂಡದ ಪರ ಚಹಲ್ 3 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ, ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಇಂಡಿಯನ್ ಪ್ರೀಮಿಯರ್ ಲೀಗ್ನ 25ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸವಾಲು ಎದುರಿಸಲು ಪಂಜಾಬ್ ಕಿಂಗ್ಸ್ ಸನ್ನದ್ಧವಾಗಿದ್ದು, ಟಾಸ್ ಗೆದ್ದು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳುವ ಉದ್ದೇಶದಿಂದ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಈಗಾಗಲೇ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ ಇಂದಿನ ಪಂದ್ಯದಲ್ಲಿ ಗೆದ್ದು, ಎರಡನೇ ಸ್ಥಾನಕ್ಕೆ ಲಗ್ಗೆ ಹಾಕುವ ತವಕದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ಕೂಡ ಈ ಪಂದ್ಯ ಗೆದ್ದು ರೇಸ್ನಲ್ಲಿ ಉಳಿಯವ ಇರಾದೆ ಹೊಂದಿದೆ.
-
🚨 Toss Update 🚨@PunjabKingsIPL have elected to bat against @rajasthanroyals.
— IndianPremierLeague (@IPL) May 7, 2022 " class="align-text-top noRightClick twitterSection" data="
Follow the match ▶️ https://t.co/Oj5tAfX0LP #TATAIPL | #PBKSvRR pic.twitter.com/7aagJzGe5A
">🚨 Toss Update 🚨@PunjabKingsIPL have elected to bat against @rajasthanroyals.
— IndianPremierLeague (@IPL) May 7, 2022
Follow the match ▶️ https://t.co/Oj5tAfX0LP #TATAIPL | #PBKSvRR pic.twitter.com/7aagJzGe5A🚨 Toss Update 🚨@PunjabKingsIPL have elected to bat against @rajasthanroyals.
— IndianPremierLeague (@IPL) May 7, 2022
Follow the match ▶️ https://t.co/Oj5tAfX0LP #TATAIPL | #PBKSvRR pic.twitter.com/7aagJzGe5A
ಇಂದಿನ ಪಂದ್ಯಕ್ಕಾಗಿ ಪಂಜಾಬ್ ತಂಡದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಆದರೆ, ರಾಜಸ್ಥಾನ ತಂಡ ಕರುಣ್ ನಾಯರ್ ಜಾಗಕ್ಕೆ ಯಶಸ್ವಿ ಜೈಸ್ವಾಲ್ಗೆ ಮಣೆ ಹಾಕಿದೆ.
ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ವಿ.ಕೀ/ ಕ್ಯಾಪ್ಟನ್), ದೇವದತ್ ಪಡಿಕ್ಕಲ್, ರಿಯಾಗ್ ಪರಾಗ್, ಶಿಮ್ರಾನ್ ಹೆಟ್ಮಾಯರ್, ಆರ್.ಅಶ್ವಿನ್, ಟ್ರೆಟ್ ಬೊಲ್ಟ್, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಲ್, ಕುಲ್ದೀಪ್ ಸೇನ್
ಪಂಜಾಬ್ ಕಿಂಗ್ಸ್: ಬೈರ್ಸ್ಟೋ, ಶಿಖರ್ ಧವನ್, ಮಯಾಂಕ್ ಅಗರವಾಲ್(ಕ್ಯಾಪ್ಟನ್), ಭಾನುಕಾ ರಾಜಪಕ್ಸೆ, ಲಿವಿಗ್ಸ್ಟೋನ್, ಜಿತೇಶ್ ಶರ್ಮಾ(ವಿ.ಕೀ), ರಿಶಿ ಧವನ್, ಕಾಗಿಸೊ ರಬಾಡಾ, ರಾಹುಲ್ ಚಹರ್, ಅರ್ಷದೀಪ್ ಸಿಂಗ್, ಸಂದೀಪ್ ಶರ್ಮಾ