ಮುಂಬೈ: ಐಪಿಎಲ್ ಟಿ-20 ಪ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳುವ ಕ್ರಿಕೆಟಿಗರ ಪಟ್ಟಿಯನ್ನು ಮಂಗಳವಾರ ಬಿಸಿಸಿಐಗೆ ಸಲ್ಲಿಸಿವೆ. ಇನ್ನು ಪ್ರಾಂಚೈಸಿಗಳು ಕೆಲ ಕ್ರಿಕೆಟಿಗರಿಗೆ ಅತ್ಯಧಿಕ ಮೊತ್ತ ನೀಡಿ ಅವರನ್ನು ತಮ್ಮಲ್ಲೇ ಉಳಿಸಿಕೊಂಡಿವೆ.
ಎಂಎಸ್ ಧೋನಿಗೆ 12 ಕೋಟಿ, ವಿರಾಟ್ ಕೊಹ್ಲಿಗೆ 15 ಕೋಟಿ ರೂ. ನೀಡಿ ಆಯಾ ತಂಡಗಳು ತಮ್ಮಲ್ಲೇ ಉಳಿಸಿಕೊಂಡಿವೆ. ಆದ್ರೆ ಈ ಆಟಗಾರರನ್ನೂ ಮೀರಿಸಿ ಕೆಲ ಆಟಗಾರರು ಹೆಚ್ಚಿನ ಮೊತ್ತ ಪಡೆದಿರುವುದು ವಿಶೇಷ.
(ಇದನ್ನೂ ಓದಿ: ಕನ್ನಡಿಗನಿಗೆ ಜಾಕ್ಪಾಟ್: 1 ಕೋಟಿಯಿಂದ 12 ಕೋಟಿ ರೂ.ಗೆ ರಿಟೈನ್ ಆದ ಮಯಾಂಕ್)
ಹೆಚ್ಚು ಮೊತ್ತ ಪಡೆದ ಆಟಗಾರರು:
ರವೀಂದ್ರ ಜಡೇಜಾಗೆ 16 ಕೋಟಿ ರೂ. ನೀಡಿ ಸಿಎಸ್ಕೆ ತಮ್ಮಲೇ ಉಳಿಸಿಕೊಂಡಿದೆ. ಹಾಗೆಯೇ ರಿಶಭ್ ಪಂತ್ಗೆ ದೆಹಲಿ ಕ್ಯಾಪಿಟಲ್ 16 ಕೋಟಿ ನೀಡಿದೆ. ಮುಂಬೈ ನಾಯಕ ರೋಹಿತ್ ಶರ್ಮಾ 16 ಕೋಟಿ ಪಡೆಯುವ ಮೂಲಕ ತಂಡದಲ್ಲಿ ಮುಂದುವರಿದಿದ್ದಾರೆ.
ಇನ್ನು ಸಂಜು ಸ್ಯಾಮನ್ಸ್ಗೆ ರಾಜಸ್ಥಾನ ರಾಯಲ್ಸ್ 14 ಕೋಟಿ ನೀಡಿದೆ. ಕೇನ್ ವಿಲಿಯಮ್ಸ್ಗೆ ಸನ್ರೈಜರ್ಸ್ ಹೈದರಾಬಾದ್ ತಂಡ 14 ಕೋಟಿ ರೂ ಸಂದಾಯ ಮಾಡಿದೆ.
(ಇದನ್ನೂ ಓದಿ: ರಾತ್ರೋರಾತ್ರಿ ಸ್ಟಾರ್ ಆದ ಹೀರೋಗೆ ಕೆಕೆಆರ್ ಮಣೆ... 20 ಲಕ್ಷದಿಂದ 8 ಕೋಟಿ ರೂ.ಗೆ ಅಯ್ಯರ್ ರಿಟೈನ್)