ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿರುವ ಮುಂಬೈ ಇಂಡಿಯನ್ಸ್, ಜಯದೊಂದಿಗೆ 2022ರ ಐಪಿಎಲ್ ಅಭಿಯಾನ ಮುಗಿಸಿದೆ. ಇದರ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ತಂಡವಾಗಿ ಪ್ಲೇ-ಆಫ್ಗೆ ಪ್ರವೇಶ ಪಡೆದುಕೊಂಡಿದ್ದು, ಮುಂದಿನ ಪಂದ್ಯದಲ್ಲಿ ಲಖನೌ ತಂಡದ ಎದುರು ಸೆಣಸಾಟ ನಡೆಸಲಿದೆ.
-
Playoffs spot sealed ✅
— IndianPremierLeague (@IPL) May 21, 2022 " class="align-text-top noRightClick twitterSection" data="
Congratulations to the @RCBTweets on making it to the #TATAIPL 2022 playoffs! 👏👏 pic.twitter.com/pipXAVUQQg
">Playoffs spot sealed ✅
— IndianPremierLeague (@IPL) May 21, 2022
Congratulations to the @RCBTweets on making it to the #TATAIPL 2022 playoffs! 👏👏 pic.twitter.com/pipXAVUQQgPlayoffs spot sealed ✅
— IndianPremierLeague (@IPL) May 21, 2022
Congratulations to the @RCBTweets on making it to the #TATAIPL 2022 playoffs! 👏👏 pic.twitter.com/pipXAVUQQg
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ತಂಡದ ಮಾರಕ ಬೌಲಿಂಗ್ ನಡುವೆ ಕೂಡ ಡೆಲ್ಲಿ ತಂಡದ ಪೊವೆಲ್(43), ರಿಷಭ್ ಪಂತ್(39)ರನ್ಗಳ ನೆರವಿಂದ ಡೆಲ್ಲಿ ತಂಡ 20 ಓವರ್ಗಳಲ್ಲಿ 7ವಿಕೆಟ್ನಷ್ಟಕ್ಕೆ 159ರನ್ಗಳಿಕೆ ಮಾಡಿದ್ದು, ಎದುರಾಳಿ ಮುಂಬೈ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿತ್ತು.
160ರನ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ರೋಹಿತ್ ಶರ್ಮಾ(2) ಹೊರತಾಗಿ ಕೂಡ ಇಶಾನ್ ಕಿಶನ್(48), ಬ್ರೇವಿಸ್(39) ಹಾಗೂ ಟಿಮ್ ಡೇವಿಡ್(34) ಸ್ಫೋಟಕ ಆಟದ ನೆರವಿನಿಂದ 19.1 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 160ರನ್ಗಳಿಸಿ, ಗೆಲುವಿನ ನಗೆ ಬೀರಿತು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ತಂಡಕ್ಕೆ ಆಸರೆಯಾದರು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ಜ್ವರದಿಂದ ಗುಣಮುಖರಾಗಿ ಇಂದಿನ ಪಂದ್ಯದಲ್ಲಿ ಬ್ಯಾಟ್ ಬೀಸಿದ ಪೃಥ್ವಿ ಶಾ 24ರನ್ಗಳಿಸಿದರೆ, ಪಂತ್ 39ರನ್ಗಳ ಕಾಣಿಕೆ ನೀಡಿದರು. ಪಂತ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಬಂದ ಸರ್ಫರಾಜ್ ಖಾನ್ 10ರನ್ ಗಳಿಸಿದರು. ಡೇವಿಡ್ ವಾರ್ನರ್ ನಿರಾಸೆ ಮೂಡಿಸಿದರು.
ಅಬ್ಬರಿಸಿದ ಪೊವೆಲ್: ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಡೆಲ್ಲಿ ತಂಡಕ್ಕೆ ಪೊವೆಲ್ ಆಸರೆಯಾದರು. ಇವರು ತಾವು ಎದುರಿಸಿದ 34 ಎಸೆತಗಳಲ್ಲಿ 4 ಸಿಕ್ಸರ್, 1 ಬೌಂಡರಿ ಸಮೇತ 43 ರನ್ಗಳಿಸಿದರು. ಕೊನೆಯಾಗಿ ಅಬ್ಬರಿಸಿದ ಅಕ್ಸರ್ ಕೂಡ ತಾವು ಎದುರಿಸಿದ 10 ಎಸೆತಗಳಲ್ಲಿ 2 ಸಿಕ್ಸರ್ ಸಮೇತ ಅಜೇಯ 19ರನ್ಗಳಿಕೆ ಮಾಡಿದ್ದರಿಂದ ತಂಡ 20 ಓವರ್ಗಳಲ್ಲಿ 7ವಿಕೆಟ್ನಷ್ಟಕ್ಕೆ 159ರನ್ಗಳಿಕೆ ಮಾಡಿತು.
ಮುಂಬೈ ಇಂಡಿಯನ್ಸ್ ಪರ ಮಿಂಚಿದ ವೇಗಿ ಬುಮ್ರಾ ತಾವು ಎಸೆದ 4ಓವರ್ಗಳಲ್ಲಿ 30 ರನ್ ನೀಡಿ, 4 ವಿಕೆಟ್ ಪಡೆದುಕೊಂಡರು. ಇವರಿಗೆ ಸಾಥ್ ನೀಡಿದ ರಮಣದೀಪ್ 2 ವಿಕೆಟ್ ಪಡೆದರೆ, ಸ್ಯಾಮ್ಸ್ ಹಾಗೂ ಮಾರ್ಕಡೆ ತಲಾ 1 ವಿಕೆಟ್ ಪಡೆದರು.
-
.@mipaltan win 🤝 @RCBTweets reach the Playoffs! 👍 👍 #MIvDC @faf1307 & Co. join @gujarat_titans, @rajasthanroyals & @LucknowIPL in the Top 4⃣ of the #TATAIPL 2022. 👏 👏
— IndianPremierLeague (@IPL) May 21, 2022 " class="align-text-top noRightClick twitterSection" data="
Scorecard ▶️ https://t.co/sN8zo9RIV4 pic.twitter.com/KqxCb0iJYS
">.@mipaltan win 🤝 @RCBTweets reach the Playoffs! 👍 👍 #MIvDC @faf1307 & Co. join @gujarat_titans, @rajasthanroyals & @LucknowIPL in the Top 4⃣ of the #TATAIPL 2022. 👏 👏
— IndianPremierLeague (@IPL) May 21, 2022
Scorecard ▶️ https://t.co/sN8zo9RIV4 pic.twitter.com/KqxCb0iJYS.@mipaltan win 🤝 @RCBTweets reach the Playoffs! 👍 👍 #MIvDC @faf1307 & Co. join @gujarat_titans, @rajasthanroyals & @LucknowIPL in the Top 4⃣ of the #TATAIPL 2022. 👏 👏
— IndianPremierLeague (@IPL) May 21, 2022
Scorecard ▶️ https://t.co/sN8zo9RIV4 pic.twitter.com/KqxCb0iJYS
ಮುಂಬೈ ಇನ್ನಿಂಗ್ಸ್: 160ರನ್ಗಳ ಗುರಿ ಬೆನ್ನತ್ತಿದ ಮುಂಬೈ ಆರಂಭದಲ್ಲೇ ರೋಹಿತ್ ಶರ್ಮಾ(2) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮೈದಾನಕ್ಕೆ ಬಂದ ಬ್ರೆವೀಸ್ ಹಾಊ ಕಿಶನ್ ತಂಡಕ್ಕೆ ಉತ್ತಮ ಜೊತೆಯಾಟವಾಡಿದರು. 48ರನ್ಗಳಿಸಿದ ವೇಳೆ ಕಿಶನ್ ಔಟಾದರೆ, ಬ್ರೆವೀಸ್ (37) ರನ್ಗಳಿಕೆ ಮಾಡಿದರು. ಕಿಶನ್ ಔಟಾದ ಬಳಿಕ ಮೈದಾನಕ್ಕೆ ಬಂದ ತಿಲಕ್ ವರ್ಮಾ(21) ಜವಾಬ್ದಾರಿಯುತ ಆಟ ಪ್ರದರ್ಶಸಿದರು. ಆದರೆ, ಈ ವೇಳೆ ಮೈದಾನಕ್ಕಿಳಿದ ಟಿಮ್ ಡೇವಿಡ್ ತಾವು ಎದುರಿಸಿದ 11 ಎಸೆತಗಳಲ್ಲಿ ಭರ್ಜರಿ 34ರನ್ಗಳಿಸಿ ತಂಡಕ್ಕೆ ಜಯ ಸುಲಭಗೊಳಿಸಿದರು. ಕೊನೆಯದಾಗಿ ರಮಣದೀಪ್ 13ರನ್ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಡೆಲ್ಲಿ ಪರ ನೋರ್ಟ್ಜೆ, ಠಾಕೂರ್ 2 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 1 ವಿಕೆಟ್ ಪಡೆದು ಮಿಂಚಿದರು.
-
.@mipaltan end their #TATAIPL 2022 campaign on a winning note! 👍 👍
— IndianPremierLeague (@IPL) May 21, 2022 " class="align-text-top noRightClick twitterSection" data="
The @ImRo45-led unit beat #DC by 5 wickets & with it, @RCBTweets qualify for the Playoffs. 👏 👏 #MIvDC
Scorecard ▶️ https://t.co/sN8zo9RIV4 pic.twitter.com/kzO12DXq7w
">.@mipaltan end their #TATAIPL 2022 campaign on a winning note! 👍 👍
— IndianPremierLeague (@IPL) May 21, 2022
The @ImRo45-led unit beat #DC by 5 wickets & with it, @RCBTweets qualify for the Playoffs. 👏 👏 #MIvDC
Scorecard ▶️ https://t.co/sN8zo9RIV4 pic.twitter.com/kzO12DXq7w.@mipaltan end their #TATAIPL 2022 campaign on a winning note! 👍 👍
— IndianPremierLeague (@IPL) May 21, 2022
The @ImRo45-led unit beat #DC by 5 wickets & with it, @RCBTweets qualify for the Playoffs. 👏 👏 #MIvDC
Scorecard ▶️ https://t.co/sN8zo9RIV4 pic.twitter.com/kzO12DXq7w
ಆರ್ಸಿಬಿ ಪ್ಲೇ-ಆಫ್ಗೆ ಲಗ್ಗೆ: ಮುಂಬೈ ಗೆಲುವಿನೊಂದಿಗೆ 4ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ-ಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದು, ಕೋಟ್ಯಂತರ ಆರ್ಸಿಬಿ ಅಭಿಮಾನಿಗಳ ಆಸೆ ಈಡೇರಿದಂತಾಗಿದೆ. ಜೊತೆಗೆ ಲಖನೌ ತಂಡದ ವಿರುದ್ಧ ಮುಂದಿನ ಪಂದ್ಯ ಆಡಲಿದೆ.