ಪುಣೆ: ಕೋಲ್ಕತ್ತಾ ತಂಡದ ಆಲ್ರೌಂಡರ್ ರೆಸೆಲ್(49) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 177ರನ್ಗಳಿಕೆ ಮಾಡಿದ್ದು, ಎದುರಾಳಿ ಹೈದರಾಬಾದ್ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಕೋಲ್ಕತ್ತಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕೇವಲ 7ರನ್ಗಳಿಸಿದ ವೆಂಕಟೇಶ್ ಅಯ್ಯರ್ ವಿಕೆಟ್ ಒಪ್ಪಿಸಿ, ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಇದಾದ ಬಳಿಕ ಒಂದಾದ ರಹಾನೆ-ರಾಣಾ ಜೋಡಿ ಕೆಲಹೊತ್ತು ಎದುರಾಳಿಗಳನ್ನ ದಂಡಿಸಿದರು. ನಿತಿಶ್ ರಾಣಾ 16 ಎಸೆತಗಳಲ್ಲಿ 26ರನ್ಗಳಿಸಿದರೆ, ರಹಾನೆ 28ರನ್ಗಳಿಸಿ ಔಟಾದರು.ಇದಾದ ಬಳಿಕ ಬಂದ ಕ್ಯಾಪ್ಟನ್ ಅಯ್ಯರ್(15), ರಿಂಕು ಸಿಂಗ್ 5ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಬಿಲ್ಲಿಂಗ್ಸ್-ರಸೆಲ್ ಜೊತೆಯಾಟ: ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಈ ವೇಳೆ ಒಂದಾದ ಬಿಲ್ಲಿಂಗ್ಸ್-ರೆಸೆಲ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ರೆಸೆಲ್ ತಾವು ಎದುರಿಸಿದ 28 ಎಸೆತಗಳಲ್ಲಿ ಅಜೇಯ 49ರನ್ಗಳಿಸಿದರೆ, ಬಿಲ್ಲಿಂಗ್ಸ್ 34ರನ್ಗಳಿಸಿ ಭುವನೇಶ್ವರ್ ಓವರ್ನಲ್ಲಿ ಔಟಾದರು.
ಹೈದರಾಬಾದ್ ಪರ ಮತ್ತೊಮ್ಮೆ ಮಿಂಚಿದ ಉಮ್ರಾನ್ ಮಲಿಕ್ 3 ವಿಕೆಟ್, ಭುವನೇಶ್ವರ್, ಜಾನ್ಸೆನ್ ಹಾಗೂ ನಟರಾಜನ್ ತಲಾ 1 ವಿಕೆಟ್ ಪಡೆದರು.
ಇಂಡಿಯನ್ ಪ್ರೀಮಿಯರ್ ಲೀಗ್ನ 61ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಶ್ರೇಯಸ್ ಅಯ್ಯರ್ ಪಡೆ ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ಪಂದ್ಯ ಆಯೋಜನೆಗೊಂಡಿದೆ.
-
A look at the Playing XI for #KKRvSRH
— IndianPremierLeague (@IPL) May 14, 2022 " class="align-text-top noRightClick twitterSection" data="
Live - https://t.co/BGgtxVDXPl #KKRvSRH #TATAIPL https://t.co/wyj11981Zp pic.twitter.com/M1ugLeTDDL
">A look at the Playing XI for #KKRvSRH
— IndianPremierLeague (@IPL) May 14, 2022
Live - https://t.co/BGgtxVDXPl #KKRvSRH #TATAIPL https://t.co/wyj11981Zp pic.twitter.com/M1ugLeTDDLA look at the Playing XI for #KKRvSRH
— IndianPremierLeague (@IPL) May 14, 2022
Live - https://t.co/BGgtxVDXPl #KKRvSRH #TATAIPL https://t.co/wyj11981Zp pic.twitter.com/M1ugLeTDDL
ಸನ್ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ಕ್ಯಾಪ್ಟನ್), ರಾಹುಲ್ ತ್ರಿಪಾಠಿ, ಮರ್ಕ್ರಾಮ್, ಪೂರನ್(ವಿ,ಕೀ), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಜಾನ್ಸೆನ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಉಮ್ರಾನ್ ಮಲಿಕ್
ಕೋಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ, ನಿತಿಶ್ ರಾಣಾ, ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ಸ್ಯಾಮ್ ಬಿಲ್ಲಿಂಗ್ಸ್(ವಿ.ಕೀ), ರಿಂಕು ಸಿಂಗ್, ರೆಸ್ಸೆಲ್, ಸುನಿಲ್ ನರೈನ್, ಉಮೇಶ್ ಯಾದವ್,ಟಿಮ್ ಸೌಥಿ, ವರುಣ್ ಚಕ್ರವರ್ತಿ
ಹೈದರಾಬಾದ್ ತಂಡಕ್ಕೆ ನಟರಾಜನ್, ವಾಷಿಂಗ್ಟನ್ ಸುಂದರ್ ಹಾಗೂ ಜಾನ್ಸೆನ್ ಕಮ್ಬ್ಯಾಕ್ ಮಾಡಿದ್ದಾರೆ. ಕೋಲ್ಕತ್ತಾ ತಂಡ ಗಾಯಾಳು ಕಮ್ಮಿನ್ಸ್ ಬದಲಿಗೆ ಉಮೇಶ್ ಯಾದವ್ ಹಾಗೂ ಜಾಕ್ಸನ್ ಸ್ಥಾನಕ್ಕೆ ಸ್ಯಾಮ್ ಬಿಲ್ಲಿಂಗ್ಸ್ಗೆ ಮಣೆ ಹಾಕಿದೆ.
ಪಾಯಿಂಟ್ ಪಟ್ಟಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ 7ನೇ ಸ್ಥಾನದಲ್ಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ 8ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಪ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ಇಂದಿನ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇಂದಿನ ಪಂದ್ಯದಲ್ಲಿ ಸೋಲುವ ತಂಡ ಪ್ಲೇ-ಆಫ್ ರೇಸ್ನಿಂದ ಬಹುತೇಕ ಹೊರ ಬೀಳಲಿದೆ.