ETV Bharat / sports

GT vs RR: ಫೈನಲ್ ಕಿರೀಟ ಯಾರ ಮುಡಿಗೆ?.. ಎರಡು ತಿಂಗಳ ರೋಚಕತೆಗೆ ಮೋದಿ ಮೈದಾನದಲ್ಲಿ ತೆರೆ - gujarat titans

ಕಳೆದ ಎರಡು ತಿಂಗಳಿಂದ ನಡೆದ ಹೊಡಿ - ಬಡಿ ಆಟಕ್ಕೆ ಇಂದು ತೆರೆ ಬೀಳಲಿದೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಯಾವ ತಂಡ ಗೆಲುವಿನ ನಗೆ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

GT vs RR Final
GT vs RR Final
author img

By

Published : May 28, 2022, 10:56 PM IST

Updated : May 29, 2022, 7:05 AM IST

ಅಹಮದಾಬಾದ್​: 15ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಸೀಸನ್​ ಇಂದು ಅಂತ್ಯಗೊಳ್ಳಲಿದ್ದು, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್​​​ ಪ್ರಶಸ್ತಿಗೋಸ್ಕರ ಕಾದಾಟ ನಡೆಸಲಿವೆ. ಈ ಪಂದ್ಯದ ಮೂಲಕ ಎರಡು ತಿಂಗಳ ರೋಚಕತೆಗೆ ಅಂತ್ಯ ಸಿಗಲಿದೆ. ವಿಶ್ವದ ಅತಿದೊಡ್ಡ ಮೈದಾನದಲ್ಲಿ ಫೈನಲ್​ ಪಂದ್ಯ ಆಯೋಜನೆಗೊಂಡಿದ್ದು, ಹೊಸ ಚಾಂಪಿಯನ್​ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಐಪಿಎಲ್​​ ಆರಂಭಗೊಂಡ ವರ್ಷವೇ ಪ್ರಶಸ್ತಿಗೆ ಮುತ್ತಿಕ್ಕಿರುವ ರಾಜಸ್ಥಾನ ರಾಯಲ್ಸ್​ ಹಾಗೂ ಚೊಚ್ಚಲ ಪ್ರಯತ್ನದಲ್ಲೇ ಫೈನಲ್​ಗೆ ಲಗ್ಗೆ ಹಾಕಿರುವ ಗುಜರಾತ್​ ಟೈಟನ್ಸ್​ ಪ್ರಶಸ್ತಿ ಗೆಲ್ಲಲು ಸಜ್ಜುಗೊಂಡಿವೆ. ಉಭಯ ತಂಡಗಳು ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿವೆ. ಆದರೆ, ಕ್ವಾಲಿಫೈಯರ್​ 1ರಲ್ಲಿ ರಾಜಸ್ಥಾನ ವಿರುದ್ಧ ಗೆಲುವು ದಾಖಲಿಸಿರುವ ಗುಜರಾತ್​ ಆತ್ಮವಿಶ್ವಾಸದಲ್ಲಿದ್ದರೆ, ಕ್ವಾಲಿಫೈಯರ್​ 2ರಲ್ಲಿ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ಸಂಘಟಿತ ಪ್ರದರ್ಶನ ನೀಡಿ ಫೈನಲ್​ಗೆ ಲಗ್ಗೆ ಹಾಕಿದೆ.

GT vs RR Final Match preview
ಫೈನಲ್​​ನಲ್ಲಿ ಅಬ್ಬರಿಸಿಲು ಗುಜರಾತ್ ಪಡೆ ಸನ್ನದ್ಧ

ಇದನ್ನೂ ಓದಿ: IPL ಫೈನಲ್​ ವೀಕ್ಷಣೆಗೆ 65 ಸಾವಿರ ರೂ. ಟಿಕೆಟ್... ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್​!

ರಾಜಸ್ಥಾನ ತಂಡದಲ್ಲಿ ಜೋಸ್ ಬಟ್ಲರ್​ ಅಬ್ಬರ ಜೋರಾಗಿದ್ದು, ಈಗಾಗಲೇ 4 ಶತಕ ಸಿಡಿಸಿ ಮಿಂಚಿದ್ದಾರೆ. ಇವರಿಗೆ ಯಶಸ್ವಿ ಜೈಸ್ವಾಲ್ ನಾಯಕ ಸಂಜು ಸ್ಯಾಮ್ಸನ್​, ಪಡಕ್ಕಿಲ್ ಹಾಗೂ ಹೆಟ್ಮಾಯರ್​ ಉತ್ತಮ ಸಾಥ್ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗ ಕೂಡ ಉತ್ತಮವಾಗಿದ್ದು, ಬೌಲ್ಟ್, ಪ್ರಸಿದ್ಧ ಕೃಷ್ಣ, ಮೆಕಾಯ್​, ಅಶ್ವಿನ್ ಹಾಗೂ ಚಹಲ್ ತಂಡದ ಬೆನ್ನೆಲುಬು ಆಗಿದ್ದಾರೆ.

ಗುಜರಾತ್ ಪಡೆ ಕೂಡ ಸಂಘಟಿತವಾಗಿದ್ದು, ಶುಬ್ಮನ್ ಗಿಲ್​, ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್​, ಮ್ಯಾಥ್ಯೂ ವೇಡ್​, ರಾಹುಲ್ ತೆವಾಟಿಯಾ, ಪಾಂಡ್ಯ, ರಶೀದ್​ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಮೊಹಮ್ಮದ್ ಶಮಿ. ಅಲ್ಜರಿ ಜೋಸೆಫ್​, ದರ್ಶನ್ ನಲ್ಕಂಡೆ ಹಾಗೂ ಯಶ್ ದಯಾಲ್ ಬೌಲಿಂಗ್​ ಪಡೆ ಉತ್ತಮವಾಗಿದೆ.

GT vs RR Final Match preview
ಫೈನಲ್​ಗೋಸ್ಕರ ಸಜ್ಜುಗೊಂಡ ರಾಜಸ್ಥಾನ

ಉಭಯ ಮುಖಾಮುಖಿ ದಾಖಲೆ: ರಾಜಸ್ಥಾನ್‌ ರಾಯಲ್ಸ್‌ ಹಾಗೂ ಗುಜರಾತ್‌ ಟೈಟನ್ಸ್ ಪ್ರಸಕ್ತ ಆವೃತ್ತಿಯ ಐಪಿಎಲ್​ನಲ್ಲಿ ಎರಡು ಸಲ ಮುಖಾಮುಖಿಯಾಗಿವೆ. ಆದರೆ, ಈ ಎರಡೂ ಪಂದ್ಯಗಳಲ್ಲಿ ಗುಜರಾತ್‌ ಟೈಟನ್ಸ್ ಗೆಲುವು ಪಡೆದುಕೊಂಡಿದೆ. ಲೀಗ್ ಹಂತದಲ್ಲಿ 37 ರನ್​ ಹಾಗೂ ಮೊದಲನೇ ಕ್ವಾಲಿಫೈಯರ್​ನಲ್ಲಿ 7 ವಿಕೆಟ್​​ಗಳ ಜಯ ದಾಖಲಿಸಿದೆ.

ಒಟ್ಟಿನಲ್ಲಿ ಪ್ರಶಸ್ತಿ ಗೆಲ್ಲುವ ತಂಡ ಹೊಸದೊಂದು ಇತಿಹಾಸ ರಚನೆ ಮಾಡಲಿದ್ದು, ರಾಜಸ್ಥಾನ ತಂಡ ಕ್ರಿಕೆಟ್ ದಿಗ್ಗಜ ಶೇನ್​ ವಾರ್ನ್​ಗೋಸ್ಕರ ಚಾಂಪಿಯನ್​ ಆಗಿ ಹೊರಹೊಮ್ಮುವ ಇರಾದೆ ಇಟ್ಟುಕೊಂಡಿದ್ದರೆ, ಗುಜರಾತ್ ತಂಡ ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಗುರಿ ಹೊಂದಿದೆ. ಈ ಮಹತ್ವದ ಪಂದ್ಯಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಈಗಾಗಲೇ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಭಾನುವಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ 50 ನಿಮಿಷಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌; ಗುಜರಾತ್‌ ಟೈಟನ್ಸ್: ವೃದ್ದಿಮಾನ್‌ ಸಹಾ(ವಿ.ಕೀ), ಶುಭಮನ್‌ ಗಿಲ್‌, ಮ್ಯಾಥ್ಯೂ ವೇಡ್‌, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯ, ರಶೀದ್‌ ಖಾನ್‌, ಸಾಯಿ ಕಿಶೋರ್‌, ಯಶ್‌ ದಯಾಳ್‌, ಅಲ್ಜಾರಿ ಜೋಸೆಫ್‌, ಮೊಹಮ್ಮದ್‌ ಶಮಿ

ರಾಜಸ್ಥಾನ್‌ ರಾಯಲ್ಸ್: ಯಶಸ್ವಿ ಜೈಸ್ವಾಲ್‌, ಜೋಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌(ನಾಯಕ/ವಿ.ಕೀ), ದೇವದತ್‌ ಪಡಿಕ್ಕಲ್‌, ರವಿಚಂದ್ರನ್‌ ಅಶ್ವಿನ್‌, ಶಿಮ್ರಾನ್‌ ಹೆಟ್ಮಾಯೆರ್‌, ರಿಯಾನ್‌ ಪರಾಗ್‌, ಟ್ರೆಂಟ್‌ ಬೌಲ್ಟ್‌, ಪ್ರಸಿಧ್‌ ಕೃಷ್ಣ, ಯುಜ್ವೇಂದ್ರ ಚಹಲ್‌, ಒಬೆಡ್‌ ಮೆಕಾಯ್‌

Last Updated : May 29, 2022, 7:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.