ಮುಂಬೈ: ಅವೇಶ್ ಖಾನ್ ಮಾರಕ ಬೌಲಿಂಗ್ ಮತ್ತು ಕೆ.ಎಲ್.ರಾಹುಲ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ಅನ್ನು 12 ರನ್‌ಗಳಿಂದ ಮಣಿಸಿತು. ಜೇಸನ್ ಹೋಲ್ಡರ್ ಮೂರು ವಿಕೆಟ್ ಮತ್ತು ಕೃನಾಲ್ ಪಾಂಡ್ಯಾ ಎರಡು ವಿಕೆಟ್ ಕಬಳಿಸಿ ಲಖನೌ ಗೆಲ್ಲಲು ನೆರವಾದರು.
ಮುಂಬೈನ ಡಾ.ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗಿ ಇಳಿದ ಕೆ.ಎಲ್.ರಾಹುಲ್ ಪಡೆ ಆರಂಭಿಕ ಆಘಾತ ಅನುಭವಿಸಿತು. 37 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ವೇಳೆ ನಾಯಕ ರಾಹುಲ್ಗೆ ಜೊತೆಯಾದ ದೀಪಕ್ ಹೂಡಾ 87 ರನ್ಗಳ ಜೊತೆಯಾಟವಾಡಿದರು.
ಕೆ.ಎಲ್.ರಾಹುಲ್ 68, ದೀಪಕ್ ಹೂಡಾ 51, ಹೊಸ ಪ್ರತಿಭೆ ಆಯುಷ್ ಬದೋನಿ 19 ಗಳಿಸಿದ್ದು ಲಖನೌ ಸೂಪರ್ ಜೈಂಟ್ಸ್ 7 ವಿಕೆಟ್ ನಷ್ಟಕ್ಕೆ 169 ರನ್ ಕಲೆ ಹಾಕಲು ಸಾಧ್ಯವಾಯಿತು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ವಾಷಿಂಗ್ಟನ್ ಸುಂದರ್, ರೊಮಾರಿಯೋ ಶೆಫರ್ಡ್, ಟಿ. ನಟರಾಜನ್ ತಲಾ 2 ವಿಕೆಟ್ ಪಡೆದರು.
158 ರನ್ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಲಖನೌ ಸೂಪರ್ಜೈಂಟ್ಸ್ ತಂಡದ ಮಾರಕ ಬೌಲಿಂಗ್ಗೆ ತತ್ತರಿಸಿತು. ಪರಿಣಾಮ, 9 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮುಖೇನ 12 ರನ್ಗಳ ಅಂತರದಿಂದ ಪರಾಭವಗೊಂಡಿತು.
ಇದನ್ನೂ ಓದಿ: IPL ಪಾಯಿಂಟ್ ಪಟ್ಟಿ: ರಾಜಸ್ತಾನ ರಾಯಲ್ಸ್ಗೆ ಅಗ್ರ, ಸನ್ರೈಸರ್ಸ್ಗೆ ಕೊನೆ ಸ್ಥಾನ