ETV Bharat / sports

ಹ್ಯಾಟ್ರಿಕ್‌ ಸೋಲಿನ ಭೀತಿಯಿಂದ ಪಾರಾದ ಆರ್‌ಆರ್‌; ಕೆಕೆಆರ್‌ ವಿರುದ್ಧ 6 ವಿಕೆಟ್‌ಗಳ ಜಯ - ರಾಜಸ್ಥಾನ್ ರಾಯಲ್ಸ್ vs ಕೋಲ್ಕತಾ ನೈಟ್ ರೈಡರ್ಸ್ ಲೈವ್

ಸತತ 2 ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಜಸ್ಥಾನ ರಾಯಲ್ಸ್‌, ಕೆಕೆಆರ್‌ ವಿರುದ್ಧ 6 ವಿಕೆಟ್‌ಗಳ ಗೆಲುವಿನೊಂದಿಗೆ ಹ್ಯಾಟ್ರಿಕ್‌ ಸೋಲಿನ ಭೀತಿಯಿಂದ ಪಾರಾಗಿದೆ. ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ನೈಟ್‌ ರೈಡರ್ಸ್ ನೀಡಿದ 133ರನ್‌ ಗುರಿಯನ್ನು 18.5 ಓವರ್‌ಗಳಲ್ಲಿ ತಲುಪಿತು.

IPL 2021: Rajasthan Royals won by 6 wickets Against KKR
ಹ್ಯಾಟ್ರಿಕ್‌ ಸೋಲಿನ ಭೀತಿಯಿಂದ ಪಾರಾದ ಆರ್‌ಆರ್‌; ಕೆಕೆಆರ್‌ ವಿರುದ್ಧ 6 ವಿಕೆಟ್‌ಗಳ ಜಯ
author img

By

Published : Apr 25, 2021, 12:25 AM IST

ಮುಂಬೈ: ವಾಂಖೆಡೆಯಲ್ಲಿ ನಡೆದ ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಗೆಲುವಿನ ನಗೆ ಬೀರಿದೆ. ಸತತ 2 ಸೋಲುಗಳಿಂದ ಬೇಸತ್ತಿದ್ದ ಸಂಜು ಸ್ಯಾಮ್ಸನ್‌ ಪಡೆ 18.5 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಕೆಕೆಆರ್‌ ನೀಡಿದ್ದ 134 ರನ್‌ಗಳ ಸಾಧಾರಾಣ ಗುರಿಯನ್ನು ತಲುಪಿತು.

ನಾಯಕ ಸ್ಯಾಮ್ಸನ್‌ ಔಟಾಗದೆ 2 ಬೌಂಡರಿ, 1 ಸಿಕ್ಸರ್‌ ಸಹಿತ 41 ಎಸೆತಗಳಲ್ಲಿ 42 ರನ್‌ಗಳಿಸಿ ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದ್ರು. ಸಂಜುಗೆ ಸಾಥ್‌ ನೀಡಿದ ಡೇವಿಡ್‌ ಮಿಲ್ಲರ್‌ 23 ಎಸೆತಗಳಿಂದ 3 ಬೌಂಡರಿಗಳೊಂದಿಗೆ 24 ರನ್‌ಗಳಿಸಿ ಔಟಾಗದೆ ಉಳಿದ್ರು.

ಆರಂಭಿಕರಾಗಿ ಕಣಕ್ಕಿಳಿದಿದ್ದ ಜೋಸ್‌ ಬಟ್ಲರ್‌ ಮತ್ತು ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಮೊದಲ ವಿಕೆಟ್‌ ನಷ್ಟಕ್ಕೆ 21 ರನ್‌ ಗಳಿಸಿದ್ರು. 7 ಎಸೆತಗಳನ್ನು ಎದುರಿಸಿದ ಬಟ್ಲರ್‌ ಕೇವಲ 5 ರನ್‌ಗಳಿಸಿ ಚಕ್ರವರ್ತಿ ಅವರ ಎಲ್‌ಬಿ ಬಲೆಗೆ ಬಿದ್ದರು. ಜೈಸ್ವಾಲ್‌ 17 ಎಸೆತಗಳಿಂದ 5 ಬೌಂಡರಿ ಸಹಿತ 22 ರನ್‌ ಗಳಿಸಿದರು. ರಾಹುಲ್‌ ತೆವಾಟಿಯಾ 5, ಶಿವಂ ದುಬೆ 22 ರನ್‌ಗಳಿಸಿ ಔಟಾದಾರು. ಕೆಕೆಆರ್‌ ಪರ ವರುಣ್‌ ಚಕ್ರವರ್ತಿ 2 ವಿಕೆಟ್‌ ಗಳಿಸಿದ್ರೆ ಶಿವಂ ಮಾವಿ ಮತ್ತು ಕನ್ನಡಿಗ ಪ್ರಸಿದ್‌ ಕೃಷ್ಣ ತಲಾ 1 ವಿಕೆಟ್‌ ಕಬಳಿಸಿದರು.

ಇನ್ನದೂ ಓದಿ: ವಾಂಖೆಡೆಯಲ್ಲಿ ಮಕಾಡೆ ಮಲಗಿದ ಕೆಕೆಆರ್: ರಾಯಲ್ಸ್​ಗೆ ಗೆಲ್ಲಲು ಬೇಕು ಕೇವಲ 134 ರನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.