ದುಬೈ: ರೋಚಕ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಅಂತಿಮ ಓವರ್ನವರೆಗೂ ಕುತೂಹಲ ಉಳಿಸಿಕೊಂಡಿದ್ದ ಪಂದ್ಯ ಕೊನೆಗೆ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಜಾರಿದೆ.
ಕೇವಲ 2ರನ್ಗಳ ಅಂತರ ಸೋಲು ಗೆಲುವನ್ನು ನಿರ್ಧರಿಸಿರುವುದು ಈ ಪಂದ್ಯದ ವಿಶೇಷವಾಗಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 185 ರನ್ಗಳನ್ನು ಗಳಿಸಿತ್ತು.
ಇವಿನ್ ಲೆವಿಸ್ (36), ಯಶಸ್ವಿ ಜೈಸ್ವಾಲ್ (49), ಮಹಿಪಾಲ್ ಲೊಮ್ರೋರ್ (43) ಲಿಯಾಮ್ ಲಿವಿಂಗ್ಸ್ಟೋನ್ (25) ಅವರ ಆಕರ್ಷಕ ಆಟದಿಂದ ಪಂಜಾಬ್ ಕಿಂಗ್ಸ್ಗೆ ಕಠಿಣ ಸವಾಲು ನೀಡಲಾಗಿತ್ತು.
-
WHAT. A. WIN! 👏 👏
— IndianPremierLeague (@IPL) September 21, 2021 " class="align-text-top noRightClick twitterSection" data="
Simply stunning how @rajasthanroyals have pulled off a two-run victory from the jaws of defeat. 👌 👌
Scorecard 👉 https://t.co/odSnFtwBAF #VIVOIPL #PBKSvRR pic.twitter.com/16m71yzAOW
">WHAT. A. WIN! 👏 👏
— IndianPremierLeague (@IPL) September 21, 2021
Simply stunning how @rajasthanroyals have pulled off a two-run victory from the jaws of defeat. 👌 👌
Scorecard 👉 https://t.co/odSnFtwBAF #VIVOIPL #PBKSvRR pic.twitter.com/16m71yzAOWWHAT. A. WIN! 👏 👏
— IndianPremierLeague (@IPL) September 21, 2021
Simply stunning how @rajasthanroyals have pulled off a two-run victory from the jaws of defeat. 👌 👌
Scorecard 👉 https://t.co/odSnFtwBAF #VIVOIPL #PBKSvRR pic.twitter.com/16m71yzAOW
ಪಂಜಾಬ್ ಕಿಂಗ್ಸ್ನ 5 ವಿಕೆಟ್, ಮೊಹಮದ್ ಶಮಿ 3 ವಿಕೆಟ್ ಪಡೆದರೆ, ಇಶಾನ್ ಪೋರೆಲ್ ಮತ್ತು ಹರ್ಪ್ರೀತ್ ಬ್ರಾರ್ ತಲಾ ಒಂದು ವಿಕೆಟ್ ಪಡೆದಿದ್ದರು.
ಬೃಹತ್ ಮೊತ್ತ ಬೆನ್ನಟ್ಟಿದ ಪಂಜಾಬ್
ರಾಜಸ್ಥಾನ ರಾಯಲ್ಸ್ ನೀಡಿದ್ದ ಬೃಹತ್ ಮೊತ್ತ ಬೆನ್ನಟ್ಟಿದ ಪಂಜಾಬ್ ಕೊನೆಯವರೆಗೂ ಗೆಲ್ಲುವ ತಂಡವಾಗಿತ್ತು. ಕೆ.ಎಲ್.ರಾಹುಲ್ (49), ಮಯಾಂಕ್ ಅಗರ್ವಾಲ್ (67), ಐಡೆನ್ ಮರ್ಕ್ರಮ್ (26) , ನಿಕೋಲಸ್ ಪೂರನ್(32) ನೆರವಿನಿಂದ ಗೆಲುವಿನ ಸನಿಹಕ್ಕೆ ಬಂದಿತ್ತು
ಕೊನೆಯ ಓವರ್..
ಕೊನೆಯ ಓವರ್ನಲ್ಲಿ 6 ಎಸೆತಗಳಿಗೆ 5 ರನ್ಗಳ ಅವಶ್ಯಕತೆ ಪಂಜಾಬ್ ಕಿಂಗ್ಸ್ಗೆ ಇತ್ತು. ಕಾರ್ತಿಕ್ ತ್ಯಾಗಿ ಐಡನ್ ಮರ್ಕ್ರಮ್ಗೆ ಮೊದಲ ಎಸೆತ ಡಾಟ್ ಬಾಲ್ ಆಗಿದ್ದು, ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ.
ಎರಡನೇ ಎಸೆತದಲ್ಲಿ ಕಾರ್ತಿಕ್ ತ್ಯಾಗಿ ಎಸೆತವನ್ನು ಎದುರಿಸಿದ ಐಡನ್ ಮರ್ಕ್ರಮ್ ಕೇವಲ ಒಂದು ರನ್ ಗಳಿಸಿದರು. ನಂತರದ ಎಸೆತದಲ್ಲಿ ನಿಕೋಲಸ್ ಪೂರನ್ ಔಟಾಗಿದ್ದು, ಪಂಜಾಬ್ ತಂಡ ಆತಂಕಕ್ಕೆ ಸಿಲುಕಿತ್ತು.
ನಂತರ ಕ್ರೀಸ್ಗೆ ಇಳಿದ ದೀಪಕ್ ಹೂಡಾ ಓವರ್ನ ನಾಲ್ಕನೇ ಎಸೆತವನ್ನು ಡಾಟ್ ಬಾಲ್ ಮಾಡಿದ್ದು, ಐದನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ಗೆ ಕ್ಯಾಚ್ ಒಪ್ಪಿಸಿ, ಪೆವಿಲಿಯನ್ಗೆ ತೆರಳಿದರು.
ಕೊನೆಯ ಎಸೆತದಲ್ಲಿ ಪಂಜಾಬ್ ಕಿಂಗ್ಸ್ ಗೆಲ್ಲಲು ಮೂರು ರನ್ ಅವಶ್ಯಕತೆ ಇತ್ತು. ಕ್ರೀಸ್ಗೆ ಇಳಿದ ಫ್ಯಾಬಿಯನ್ ಅಲ್ಲೆನ್ ಯಾವುದೇ ರನ್ ಗಳಿಸಲು ವಿಫಲರಾದರು. ಈ ಮೂಲಕ ಕೇವಲ 2 ರನ್ಗಳಿಂದ ಪಂಜಾಬ್ ಕಿಂಗ್ಸ್ ಸೋಲು ಕಂಡಿತು.