ಅಬುಧಾಬಿ: ಹ್ಯಾಟ್ರಿಕ್ ಸೋಲುಗಳ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳ ಗೆಲುವು ಸಾಧಿಸಿದ್ದಾರೆ. ಕೆ.ಎಲ್.ರಾಹುಲ್ ಪಡೆ ನೀಡಿದ 136 ರನ್‌ಗಳ ಸಾಧಾರಣ ಮೊತ್ತವನ್ನು 19 ಓವರ್‌ಗಳಲ್ಲಿ 4 ವಿಕೆಟ್ ಕಳೆದು ಕೊಂಡು ಜಯ ದಾಖಲಿಸಿದೆ.
-
A 6⃣-wicket victory! 👏 👏@mipaltan return to winning ways as they beat #PBKS in Abu Dhabi. 👍 👍 #VIVOIPL #MIvPBKS
— IndianPremierLeague (@IPL) September 28, 2021 " class="align-text-top noRightClick twitterSection" data="
Scorecard 👉 https://t.co/8u3mddWeml pic.twitter.com/lCN63QoI30
">A 6⃣-wicket victory! 👏 👏@mipaltan return to winning ways as they beat #PBKS in Abu Dhabi. 👍 👍 #VIVOIPL #MIvPBKS
— IndianPremierLeague (@IPL) September 28, 2021
Scorecard 👉 https://t.co/8u3mddWeml pic.twitter.com/lCN63QoI30A 6⃣-wicket victory! 👏 👏@mipaltan return to winning ways as they beat #PBKS in Abu Dhabi. 👍 👍 #VIVOIPL #MIvPBKS
— IndianPremierLeague (@IPL) September 28, 2021
Scorecard 👉 https://t.co/8u3mddWeml pic.twitter.com/lCN63QoI30
ಸೌರಭ್ ತಿವಾರಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಆಟದ ನೆರವಿಂದ ಗೆಲುವಿನ ಹಳಿಗೆ ಮರಳಿತು. 8 ರನ್‌ಗಳಿಸಿ ರವಿ ಬಿಷ್ಣೋಯಿಗೆ ನಾಯಕ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ ಬಳಿಕ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ತಿವಾರಿ 37 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಹಿತ 45 ರನ್‌ಗಳಿಸಿ 16ನೇ ಓವರ್‌ನಲ್ಲಿ ನಾಥನ್ ಎಲ್ಲಿಸ್‌ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಹಾರ್ದಿಕ್ ಪಾಂಡ್ಯ 30 ಎಸೆತಗಳಿಂದ 4 ಬೌಂಡರಿ ಹಾಗೂ 2 ಸಿಕ್ಸರ್ ಸೇರಿ 40 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿದರು. ಸೂರ್ಯಕುಮಾರ್ ಯಾದವ್ (0), ಕ್ವಿಂಟನ್ ಡಿ'ಕಾಕ್ 27 ಹಾಗೂ ಕಿರಾನ್ ಪೊಲಾರ್ಡ್ 15 ರನ್‌ಗಳಿಸಿದರು. ಪಂಜಾಬ್ ಪರ ರವಿ ಬಿಷ್ಣೋಯಿ 2, ಮಹಮ್ಮದ್ ಶಮಿ ಹಾಗೂ ನಾಥನ್ ಎಲ್ಲಿಸ್ ತಲಾ ಒಂದು ವಿಕೆಟ್ ಪಡೆದರು. ಸದ್ಯ ಆಡಿದ 11 ಪಂದ್ಯಗಳಲ್ಲಿ 5 ರಲ್ಲಿ ಜಯ ಗಳಿಸಿರುವ ಮುಂಬೈ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.
-
This is what the Points Table looks like after Match 42 of #VIVOIPL. 🔽 #MIvPBKS pic.twitter.com/JGWUyjqXbW
— IndianPremierLeague (@IPL) September 28, 2021 " class="align-text-top noRightClick twitterSection" data="
">This is what the Points Table looks like after Match 42 of #VIVOIPL. 🔽 #MIvPBKS pic.twitter.com/JGWUyjqXbW
— IndianPremierLeague (@IPL) September 28, 2021This is what the Points Table looks like after Match 42 of #VIVOIPL. 🔽 #MIvPBKS pic.twitter.com/JGWUyjqXbW
— IndianPremierLeague (@IPL) September 28, 2021
ಪಂಜಾಬ್ ಬ್ಯಾಟಿಂಗ್ ವೈಫಲ್ಯ!
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಕಿಂಗ್ಸ್, ಬ್ಯಾಟಿಂಗ್‌ನಲ್ಲಿ ಆಘಾತ ಅನುಭವಿಸಿತು. ಕೇವಲ 11 ರನ್‌ಗಳ ಅಂತರದಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಮಾರ್ಕ್ರಮ್ ಹಾಗೂ ದೀಪಕ್ ಹೂಡ ಉತ್ತಮ ಬ್ಯಾಟಿಂಗ್ ಮೂಲಕ ತಂಡವನ್ನು ನೂರರ ಗಟಿ ದಾಟಿಸಿದರು. 29 ಎಸೆತಗಳನ್ನು ಎದುರಿಸಿದ ಮಾರ್ಕ್ರಮ್ 6 ಬೌಂಡರಿ ಸಹಿತ 42 ರನ್‌ಗಳಿಸಿದರೆ, ಹೂಡಾ 26 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್‌ನೊಂದಿಗೆ 28 ರನ್ ಗಳಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ 21, ಮಂದೀಪ್ ಸಿಂಗ್ 15, ಕ್ರಿಸ್ ಗೇಲ್ 1, ಪೂರನ್ 2, ಹರ್ಪ್ರೀತ್ 14 ಹಾಗೂ ನಾಥನ್ ಎಲ್ಲಿಸ್ 6 ರನ್ ಗಳಿಸಿದರು. ಮುಂಬೈ ಪರ ಬೂಮ್ರಾ, ಪೊಲಾರ್ಡ್ ತಲಾ 2 ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ, ರಾಹುಲ್ ಚಾಹರ್ ತಲಾ 1 ವಿಕೆಟ್ ಪಡೆದರು.