ETV Bharat / sports

ಹೈದರಾಬಾದ್​​ vs ಮುಂಬೈ: ಟಾಸ್​​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಪಡೆ

ಪ್ಲೇ-ಆಫ್ ಹಂತಕ್ಕೆ ಕಠಿಣ ಸವಾಲು ಎದುರಾಗಿರುವ ಮುಂಬೈ ಇಂಡಿಯನ್ಸ್​ ಲೀಗ್​ ಹಂತದ ಇಂದಿನ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​ ಸವಾಲು ಎದುರಿಸುತ್ತಿದ್ದು, ಮುಂದಿನ ಹಂತಕ್ಕೆ ದಾಪುಗಾಲು ಹಾಕಲು 170ಕ್ಕೂ ಅಧಿಕ ರನ್​ಗಳ ಅಂತರದಿಂದ ಜಯ ಸಾಧಿಸಬೇಕಾಗಿದೆ.

IPL 2021
IPL 2021
author img

By

Published : Oct 8, 2021, 7:37 PM IST

ಅಬುದಾಭಿ: ಇಂಡಿಯನ್​ ಪ್ರೀಮಿಯರ್​ ಲೀಗ್​​ನ 55ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದಿರುವ ರೋಹಿತ್ ಶರ್ಮಾ ಪಡೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಪ್ಲೇ-ಆಫ್​ ಹಂತಕ್ಕೆ ಪ್ರವೇಶ ಪಡೆದುಕೊಳ್ಳಬೇಕಾದರೆ ಮುಂಬೈ ಇಂಡಿಯನ್ಸ್​​ ಮುಂದೆ ಅತಿದೊಡ್ಡ ಕಠಿಣ ಸವಾಲು ಇದೆ.

14ನೇ ಆವೃತ್ತಿ ಐಪಿಎಲ್​​ನಲ್ಲಿ ಈಗಾಗಲೇ ಸನ್​ರೈಸರ್ಸ್​ ಹೈದರಾಬಾದ್​ ತಂಡ ರೇಸ್​ನಿಂದ ಹೊರಬಿದ್ದಿದೆ. ಆದರೆ, ಮುಂಬೈ ಇಂಡಿಯನ್ಸ್​​ ತಂಡ ದಾಖಲೆಯ 170 ರನ್​ಗಳ ಅಂತರದಿಂದ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಇದನ್ನೂ ಓದಿರಿ: IPL 2021: ಡೆಲ್ಲಿ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಆರ್​ಸಿಬಿ

ಆಡುವ 11ರ ಬಳಗ ಇಂತಿದೆ.

ಸನ್​ರೈಸರ್ಸ್ ಹೈದರಾಬಾದ್​: ಜಾಸನ್ ರಾಯಲ್​, ಅಭಿಷೇಕ್​ ಶರ್ಮಾ, ಮನೀಷ್ ಪಾಂಡೆ(ಕ್ಯಾಪ್ಟನ್​), ಪ್ರಿಯಾಮ್ ಗರ್ಗ್​, ಅಬ್ದುಲ್​ ಶಮದ್​, ವೃದ್ಧಿಮಾನ್​ ಸಾಹಾ(ವಿ.ಕೀ), ಜಾಸನ್ ಹೊಲ್ಡರ್​​, ರಶೀದ್ ಖಾನ್​, ಮೊಹಮ್ಮದ್ ನಬಿ, ಉಮ್ರಾನ್ ಮಲಿಕ್​, ಸಿದ್ಧಾರ್ಥ್ ಕೌಲ್​

ಮುಂಬೈ ಇಂಡಿಯನ್ಸ್​​: ರೋಹಿತ್ ಶರ್ಮಾ(ಕ್ಯಾಪ್ಟನ್​), ಇಶಾನ್ ಕಿಶನ್​(ವಿ,ಕೀ), ಸೂರ್ಯಕುಮಾರ್ ಯಾದವ್​, ಹಾರ್ದಿಕ್ ಪಾಂಡ್ಯ, ಕಿರನ್ ಪೊಲಾರ್ಡ್​​, ಕೃನಾಲ್ ಪಾಂಡ್ಯ, ಜೇಮ್ಸ್ ನಿಶಮ್​, ನಾಥನ್ ಕೌಟರ್​ ನೇಲ್​, ಜಸ್ಪ್ರೀತ್ ಬುಮ್ರಾ, ಪಿಯೂಷ್ ಚಾವ್ಲಾ, ಟ್ರೆಂಟ್ ಬೋಲ್ಡ್​

ಇಂದಿನ ಪಂದ್ಯಕ್ಕಾಗಿ ಉಭಯ ತಂಡಗಳು ಎರಡು ಬದಲಾವಣೆ ಮಾಡಿಕೊಳ್ಳಲಾಗಿದ್ದು, ಸನ್​ರೈಸರ್ಸ್​ ಹೈದರಾಬಾದ್ ತಂಡದ ಕ್ಯಾಪ್ಟನ್​​​ ಕೇನ್ ವಿಲಿಯಮ್ಸನ್​ ಗಾಯಗೊಂಡಿರುವ ಕಾರಣ ನಾಯಕನಾಗಿ ಮನೀಷ್ ಪಾಂಡೆ ಆಯ್ಕೆಯಾಗಿದ್ದು, ಮುಂಬೈ ಇಂಡಿಯನ್ಸ್​ ಪರ ಪಿಯೂಷ್​ ಚಾವ್ಲಾ ಡೆಬ್ಯು ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.