ETV Bharat / sports

ಸೂಪರ್​ ಓವರ್​ನಲ್ಲಿ ರನ್​ಗಳಿಸಲು ವಿಫಲ: ಕಾರಣ ತಿಳಿಸಿದ ವಿಲಿಯಮ್ಸನ್

author img

By

Published : Apr 26, 2021, 11:25 AM IST

ಸನ್‌ರೈಸರ್ಸ್ ಹೈದರಾಬಾದ್ 5 ಪಂದ್ಯಗಳಲ್ಲಿ 2 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಏಳನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಹೈದರಾಬಾದ್​ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ.

ಕೇನ್ ವಿಲಿಯಮ್ಸನ್
ಕೇನ್ ವಿಲಿಯಮ್ಸನ್

ಚೆನ್ನೈ: ಐಪಿಎಲ್​​ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೂಪರ್​ ಓವರ್​ನಲ್ಲಿ ವಿರೋಚಿತ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಹೈದರಾಬಾದ್​ ತಂಡವನ್ನು ಅಂತಿಮ ಹಂತದವರೆಗೂ ಕೊಂಡೊಯ್ದಿದ್ದ ಕೇನ್ ವಿಲಿಯಮ್ಸನ್ ಪಂದ್ಯ ಗೆಲ್ಲುಸುವಲ್ಲಿ ವಿಫಲರಾಗಿದ್ದರು. ಆದರೆ ಈ ಪಂದ್ಯದ ಸೂಪರ್​ ಓವರ್​ನಲ್ಲಿ ವಿಲಿಯಮ್ಸನ್​ ಬ್ಯಾಟ್‌ನಿಂದ ಉತ್ತಮ ರನ್‌ ಬಂದಿರಲಿಲ್ಲ.

ಈ ಕುರಿತು ಪಂದ್ಯದ ನಂತರ ಮಾತನಾಡಿದ ವಿಲಿಯಮ್ಸನ್,​ "ಸೂಪರ್ ಓವರ್‌ನಲ್ಲಿ ಎರಡನೇ ಬಾರಿಗೆ ಕ್ರಿಸ್​ಗೆ ಬಂದಾಗ ನಾನು ಆಯಾಸಗೊಂಡಿದ್ದೆ. ಸ್ಪರ್ಧಾತ್ಮಕವಾದ ಸ್ಕೋರ್ ಬೆನ್ನಟ್ಟುವಾಗ ಸ್ವಲ್ಪ ಒತ್ತಡ ಇರುತ್ತದೆ, ಅದನ್ನು ಸರಿಯಾಗಿ ನಿಭಾಯಿಸಬೇಕು. ಈ ಪಂದ್ಯದಲ್ಲಿ ಅನೇಕ ಏರುಪೇರುಗಳಾದವು. ಪಂದ್ಯದ ಅಂತಿಮ ಹಂತದಲ್ಲಿ ಪಂದ್ಯ ಬಹಳ ರೋಮಾಂಚನಕಾರಿಯಾಗಿತ್ತು. ಈ ಪಂದ್ಯವನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆಯಲ್ಲಿದ್ದೆ. ಆದರೆ ಅದು ಡೆಲ್ಲಿ ಕಡೆ ತಿರುಗಿತು" ಎಂದು ಹೇಳಿದರು.

"ಇದು ಬಹಳ ಕಡಿಮೆ ಅಂತರದ ಸ್ಕೋರ್​ ಆಗಿತ್ತು. ಈ ಪಂದ್ಯವನ್ನು ಗೆಲ್ಲಬಹುದಾಗಿತ್ತು. ತಂಡದಲ್ಲಾದ ಏರು ಪೇರುಗಳಿಂದ ನಾವು ಈ ಪಂದ್ಯ ಕಳೆದುಕೊಂಡೆವು. ಮುಂದಿನ ಪಂದ್ಯಗಳಲ್ಲಿ ವಿಭಿನ್ನ ಯೋಚನೆಯೊಂದಿಗೆ ಕಣಕ್ಕಿಳಿದು ಕಮ್​​ಬ್ಯಾಕ್​ ಮಾಡುತ್ತೇವೆ" ಎಂದರು.

ಇದನ್ನೂ ಓದಿ: ಕೋವಿಡ್​ ಪಾಸಿಟಿವ್​ ವರದಿ ಬಗ್ಗೆ ನಾನು ಹೆಚ್ಚು ಯೋಚಿಸಿಲ್ಲ: ಅಕ್ಷರ್​ ಪಟೇಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.