ETV Bharat / sports

ಡೆಲ್ಲಿ ವಿರುದ್ಧ ಫೀಲ್ಡಿಂಗ್​ನಲ್ಲಿನ ತಪ್ಪುಗಳಿಂದ ಪಂದ್ಯ ಹೀಗಾಯ್ತು: ಕೊಹ್ಲಿ - ಡೆಲ್ಲಿ ಕ್ಯಾಪಿಟಲ್ಸ್ vs ಆರ್​ಸಿಬಿ

ಪಂದ್ಯದ ವೇಳೆ ಮೈದಾನದಲ್ಲಿ ಇಬ್ಬನಿ ಇರಲಿಲ್ಲ. ಇದೂ ಕೂಡ ನಮ್ಮ ಬೌಲರ್​ಗಳಿಗೆ ಸಹಕಾರಿಯಾಯಿತು. ಮ್ಯಾಕ್ಸ್​ವೆಲ್​ ನಮಗೆ 7ನೇ ಬೌಲರ್​ ಆಗಿದ್ದು, ಹೀಗಾಗಿ ನಮಗೆ ಬಹಳಷ್ಟು ಆಯ್ಕೆಗಳಿವೆ. ದೀರ್ಘವಾದ ಬ್ಯಾಟಿಂಗ್​ ಸರದಿ ಹೊಂದಿರುವ ನಾವು ಬೌಲಿಂಗ್​ನಲ್ಲೂ ಇನ್ನಷ್ಟು ಬಲ ಹೊಂದಬೇಕಿದೆ ಎಂದು ಕೊಹ್ಲಿ ಹೇಳಿದರು.

IPL 2021: Game wouldn't have gone this far if there weren't fielding lapses, says Kohli
ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ
author img

By

Published : Apr 28, 2021, 9:20 AM IST

ಅಹಮದಾಬಾದ್​: ಫೀಲ್ಡಿಂಗ್​ನಲ್ಲಿ ತಪ್ಪುಗಳಾಗದಿದ್ದರೆ ನಾವು ಡೆಲ್ಲಿ ವಿರುದ್ಧ ಇನ್ನೂ ಅದ್ಭುತ ಗೆಲುವು ಸಾಧಿಸಬಹುದಾಗಿತ್ತು ಎಂದು ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ಹಂತದಲ್ಲಿ ಪಂದ್ಯ ನಮ್ಮಿಂದ ಕೈಜಾರಿತೆಂದು ಅನ್ನಿಸಿತು. ಆದರೆ ಅಂತಿಮವಾಗಿ ಸಿರಾಜ್ ತೋರಿದ ಬೌಲಿಂಗ್​ ದಾಳಿ, ಅವರು​​ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂಬ ಆತ್ಮವಿಶ್ವಾಸ ಮೂಡಿಸಿತು. ಫೀಲ್ಡಿಂಗ್​ ಚೆನ್ನಾಗಿ ಮಾಡಿದ್ದರೆ ಪಂದ್ಯವು ಇಷ್ಟೊಂದು ಒತ್ತಡ ಬೀರುತ್ತಿರಲಿಲ್ಲ. ವಿಕೆಟ್​ ಕಳೆದುಕೊಂಡರೂ ಕೊನೆಯ ಓವರ್​ಗಳಲ್ಲಿ ಎಬಿ ಡಿವಿಲಿಯರ್ಸ್​ ಭರ್ಜರಿ ಬ್ಯಾಟಿಂಗ್​ ತೋರಿದರು. ಬಳಿಕ ಹೆಟ್ಮೇರ್​ ಅಬ್ಬರಿಸಿದರೂ ಕೂಡ ನಾವು ಪಂದ್ಯದ ಮೇಲೆ ನಿಯಂತ್ರಣ ಹೊಂದಿದ್ದೆವು ಎಂದು ತಿಳಿಸಿದರು.

ಈ ಪಂದ್ಯದ ವೇಳೆ ಮೈದಾನದಲ್ಲಿ ಇಬ್ಬನಿ ಇರಲಿಲ್ಲ. ಇದೂ ಕೂಡ ನಮ್ಮ ಬೌಲರ್​ಗಳಿಗೆ ಸಹಕಾರಿಯಾಯಿತು. ಮ್ಯಾಕ್ಸ್​ವೆಲ್​ ನಮಗೆ 7ನೇ ಬೌಲರ್​ ಆಗಿದ್ದು, ಹೀಗಾಗಿ ನಮಗೆ ಬಹಳಷ್ಟು ಆಯ್ಕೆಗಳಿವೆ. ದೀರ್ಘವಾದ ಬ್ಯಾಟಿಂಗ್​ ಸರದಿ ಹೊಂದಿರುವ ನಾವು ಬೌಲಿಂಗ್​ನಲ್ಲೂ ಇನ್ನಷ್ಟು ಬಲ ಹೊಂದಬೇಕಿದೆ ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ: ಎಬಿಡಿ ನಿವೃತ್ತರಾಗಿದ್ದಾರೆ ಅನ್ನಿಸುವುದಿಲ್ಲ: ವಿರಾಟ್ ಕೊಹ್ಲಿ

ಡೆಲ್ಲಿ ವಿರುದ್ಧ ಅಂತಿಮ ಎಸೆತದಲ್ಲಿ 1 ರನ್​ಗಳ ರೋಚಕ ಜಯ ಸಾಧಿಸಿದ ಆರ್​ಸಿಬಿ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂದಿನ ಪಂದ್ಯದಲ್ಲಿ ಏಪ್ರಿಲ್​ 30ರಂದು ಪಂಜಾಬ್​ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.