ETV Bharat / sports

IPL 2021: ಫೈನಲ್​ನಲ್ಲಿ ಮುಗ್ಗರಿಸಿದ KKR... 4ನೇ ಬಾರಿಗೆ ಚಾಂಪಿಯನ್​ ಪಟ್ಟಕ್ಕೇರಿದ ಧೋನಿ ಪಡೆ - ಕೋಲ್ಕತ್ತಾ ನೈಟ್ ರೈಡರ್ಸ್

ಚೆನ್ನೈ ಸೂಪರ್​​ ಕಿಂಗ್ಸ್​ ನಾಲ್ಕನೇ ಬಾರಿಗೆ ಇಂಡಿಯನ್​ ಪ್ರೀಮಿಯರ್ ಲೀಗ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಫೈನಲ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಧೋನಿ ಪಡೆ ಭರ್ಜರಿ ಜಯ ದಾಖಲಿಸಿದೆ.

IPL 2021 final
IPL 2021: ಫೈನಲ್​ನಲ್ಲಿ ಮುಗ್ಗರಿಸಿದ KKR... 4ನೇ ಬಾರಿಗೆ ಚಾಂಪಿಯನ್​ ಪಟ್ಟಕ್ಕೇರಿದ ಧೋನಿ ಪಡೆ
author img

By

Published : Oct 15, 2021, 11:31 PM IST

Updated : Oct 16, 2021, 1:46 AM IST

ದುಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವನ್ನು 27 ರನ್​ಗಳಿಂದ ಮಣಿಸಿದ ಚೆನ್ನೈ ಸೂಪರ್​​ ಕಿಂಗ್ಸ್​ ನಾಲ್ಕನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಧೋನಿ ಬಳಗ ನಿಗದಿತ 20 ಓವರ್​ಗಳಲ್ಲಿ 3ವಿಕೆಟ್​ ನಷ್ಟಕ್ಕೆ 192 ರನ್ ​ಗಳಿಸಿತ್ತು. ಚೆನ್ನೈ ಪರ ಆರಂಭಿಕ ಆಟಗಾರರಾದ ಡು ಪ್ಲೆಸಿಸ್​​ 59 ಎಸೆತಗಳಲ್ಲಿ 86, ರುತುರಾಜ್​ ಗಾಯಕ್ವಾಡ್​ 32 ರನ್​ ಬಾರಿಸಿ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ 61 ರನ್​ ಸೇರಿಸಿತು. ಬಳಿಕ ರಾಬಿನ್​ ಉತ್ತಪ್ಪ ಸ್ಫೋಟಕ 31 ಹಾಗೂ ಮೋಯಿನ್​ ಅಲಿ 37 ರನ್​ ಬಾರಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಕೋಲ್ಕತ್ತಾ ಪರ ನರೈನ್​ 26 ರನ್​ಗೆ 2 ವಿಕೆಟ್​​ ಪಡೆದರೆ, ಅಯ್ಯರ್​​ ಹೊರತುಪಡಿಸಿ ಉಳಿದೆಲ್ಲ ಬೌಲರ್​ಗಳು ದುಬಾರಿ ಎನಿಸಿದರು.

ಬಳಿಕ 193 ರನ್​ಗಳ ಗುರಿ ಬೆನ್ನಟ್ಟಿದ ಕೆಕೆಆರ್​ಗೆ ಆರಂಭಿಕರಾದ ವೆಂಕಟೇಶ್​ ಅಯ್ಯರ್​​ (50) ಹಾಗೂ ಶುಬ್ಮನ್​ ಗಿಲ್​ (51) ತಲಾ ಅರ್ಧಶತಕ ಗಳಿಸಿ ಉತ್ತಮ ಭರವಸೆಯ ಆರಂಭ ನೀಡಿದರು. ಈ ಇಬ್ಬರು ಯುವ ಆಟಗಾರರು ಮೊದಲ ವಿಕೆಟ್​ಗೆ 91 ರನ್​ ಜೊತೆಯಾಟವಾಡಿದರು. ಆದರೆ ಇವರಿಬ್ಬರ ವಿಕೆಟ್​ ಪತನದ ಬಳಿಕ ಕೋಲ್ಕತ್ತಾ ಕುಸಿತದ ಹಾದಿ ಹಿಡಿಯಿತು.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದ ನಿತೀಶ್​ ರಾಣಾ ಶೂನ್ಯಕ್ಕೆ ಔಟ್​ ಆದರು. ಬಳಿಕ ಸುನೀಲ್​ ನರೈನ್ ಕೂಡ​ 2 ರನ್​ಗೆ ಕ್ಯಾಚ್​​ ನೀಡಿ ಪೆವಿಲಿಯನ್​ ಸೇರಿಕೊಂಡರು. ಬಳಿಕ ಮೈದಾಕ್ಕಿಳಿದ ದಿನೇಶ್​ ಕಾರ್ತಿಕ್​ ಸಿಕ್ಸರ್​ ಮೂಲಕ ಖಾತೆ ತೆರೆದರೂ ಕೂಡ 9 ರನ್​ಗೆ ಅವರ ಆಟ ಅಂತ್ಯವಾಯಿತು.

ಹೀಗೆ ಒಂದರ ಹಿಂದೊಂದರಂತೆ ವಿಕೆಟ್​ ಕಳೆದುಕೊಂಡ ಕೆಕೆಆರ್​ ಒತ್ತಡಕ್ಕೆ ಸಿಲುಕಿತು. ಇದೇ ವೇಳೆ ಶಕಿಬ್​ ಅಲ್​ ಹಸನ್​ ಕೂಡ ಡಕ್​ ಔಟಾದರು. ನಂತರ ಫೀಲ್ಡಿಂಗ್​ ವೇಳೆ ಗಾಯಗೊಂಡಿದ್ದ ಕಳೆದ ಪಂದ್ಯದ ಹೀರೋ ರಾಹುಲ್​ ತ್ರಿಪಾಠಿ ಕೂಡ 2 ರನ್​ಗೆ ಮೋಯಿನ್​ ಅಲಿಗೆ ಕ್ಯಾಚಿತ್ತರು. 120 ರನ್​ಗೆ ನೈಟ್​ ರೈಡರ್ಸ್​​ 6 ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಕಳಪೆ ಫಾರ್ಮ್​ನಿಂದ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದ ನಾಯಕ ಮೋರ್ಗನ್​ ಫೈನಲ್​ನಲ್ಲೂ ಕೂಡ 4 ರನ್​ ಗಳಿಸಿ ಸಿಕ್ಸರ್​ ಬಾರಿಸುವ ಯತ್ನದಲ್ಲಿ ದೀಪಕ್​ ಚಹರ್​ ಪಡೆದ ಅದ್ಭುತ ಕ್ಯಾಚ್​ನಿಂದ ನಿರಾಸೆ ಅನುಭವಿಸಿದರು.

ಕೊನೆಯಲ್ಲಿ ಶಿವಂ ಮಾವಿ 20 ಹಾಗೂ ಲುಕಿ ಫರ್ಗುಸನ್​​ 18 ರನ್​ ಗಳಿಸಿದರು. ಅಂತಿಮವಾಗಿ 9 ವಿಕೆಟ್​ 165 ರನ್​ ಗಳಿಸಲಷ್ಟೇ ಶಕ್ತವಾದ ಕೆಕೆಆರ್ 27 ರನ್​ಗಳ ಅಂತರದಿಂದ​ ಸೋಲು ಅನುಭವಿಸಿತು. ಸಿಎಸ್​ಕೆ ಪರ ಶಾರ್ದುಲ್​ ಠಾಕೂರ್​ 3 ವಿಕೆಟ್​ ಪಡೆದು ಮಿಂಚಿದರು.

2020ರ ಐಪಿಎಲ್​ನಲ್ಲಿ 7ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದ ಸಿಎಸ್​ಕೆ ಈ ಬಾರಿ ಭರ್ಜರಿ ಕಮ್​ಬ್ಯಾಕ್​ ಮೂಲಕ 4ನೇ ಬಾರಿಗೆ ಚಾಂಪಿಯನ್​ ಆಗಿದೆ. 86 ರನ್​ ಗಳಿಸಿದ ಡು ಪ್ಲೆಸಿಸ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಇದನ್ನೂ ಓದಿ: 2023ರ ಏಷ್ಯಾಕಪ್​ ಪಾಕಿಸ್ತಾನದಲ್ಲಿ ಆಯೋಜನೆ.. 17 ವರ್ಷಗಳ ನಂತರ ಪಾಕ್​ ನೆಲಕ್ಕೆ ಭಾರತ ಪ್ರವಾಸ?

Last Updated : Oct 16, 2021, 1:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.