ETV Bharat / sports

IPL 2021: 2ನೇ ಹಂತದ ಐಪಿಎಲ್​ಗಾಗಿ ದುಬೈ ಸೇರಿದ ಅಗ್ರಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್​

ದೆಹಲಿ ತಂಡದ ಶ್ರೇಯಸ್​ ಅಯ್ಯರ್​ ಈಗಾಗಲೇ ಸಹಾಯಕ ಕೋಚ್​ ಪ್ರವೀಣ್​ ಆಮ್ರೆ ಜೊತೆಗೆ ದುಬೈಗೆ ತೆರಳಿದ್ದಾರೆ. ಅವರು ಐಸಿಸಿ ಅಕಾಡೆಮಿಯಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

Delhi Capitals leave for Dubai
ಡೆಲ್ಲಿ ಕ್ಯಾಪಿಟಲ್ಸ್​
author img

By

Published : Aug 21, 2021, 4:03 PM IST

ನವದೆಹಲಿ: 2021ರ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅಗ್ರಸ್ಥಾನ ಕಾಯ್ದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ದ್ವಿತಿಯಾರ್ಧದ ಐಪಿಎಲ್​ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಶನಿವಾರ ದುಬೈಗೆ ತೆರಳಿದೆ. ಮೊದಲ ಹಂತವಾಗಿ ಡೊಮೆಸ್ಟಿಕ್ ಕ್ರಿಕೆಟಿಗರು ಮತ್ತು ತಂಡದ ಸಹಾಯಕ ಸಿಬ್ಬಂದಿ ಇಂದು ದುಬೈಗೆ ತೆರಳಿದ್ದಾರೆ.

ನವದೆಹಲಿಯ ಇಂದಿರಾಗಾಂದಿ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುತ್ತಿರುವ ವಿಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ. ಲೆಗ್​ ಸ್ಪಿನ್ನರ್​ ಅಮಿತ್ ಮಿಶ್ರಾ ಕೂಡ ಪಿಪಿಇ ಕಿಟ್​ ಧರಿಸಿರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದು, 'ದುಬೈನತ್ತ ಪಯಣ' ಎಂದು ಬರೆದುಕೊಂಡಿದ್ದಾರೆ.

ದೆಹಲಿ ತಂಡದ ಶ್ರೇಯಸ್​ ಅಯ್ಯರ್​ ಈಗಾಗಲೇ ಸಹಾಯಕ ಕೋಚ್​ ಪ್ರವೀಣ್​ ಆಮ್ರೆ ಜೊತೆಗೆ ದುಬೈಗೆ ತೆರಳಿದ್ದಾರೆ. ಅವರು ಐಸಿಸಿ ಅಕಾಡೆಮಿಯಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ಮಾರ್ಚ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಭುಜದ ನೋವಿಗೆ ಒಳಗಾಗಿದ್ದರು. ಏಪ್ರಿಲ್ 8ರಂದು ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಎನ್​ಸಿನ್​ನಲ್ಲಿ ಫಿಟ್​ನೆಸ್​ ಸಾಬೀತು ಪಡಿಸಿ ಕಳೆದ ವಾರ ದುಬೈಗೆ ತೆರಳಿದ್ದರು.

ಡೆಲ್ಲಿ ಕ್ಯಾಪಿಟಲ್ಸ್​ ಆಡಿರುವ 8 ಪಂದ್ಯಗಳಿಂದ 12 ಅಂಕ ಪಡೆದುಕೊಂಡು ಅಗ್ರಸ್ಥಾನದಲ್ಲಿದೆ. ಸೆಪ್ಟೆಂಬರ್​ 22ರಂದು ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ ತನ್ನ 2ನೇ ಹಂತದ ಐಪಿಎಲ್ ಅಭಿಯಾನ ಶುರು ಮಾಡಲಿದೆ. ಮುಂಬೈ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಮೊದಲ ಪಂದ್ಯ ಸೆಪ್ಟೆಂಬರ್​ 19ರಂದು ಆರಂಭಗೊಳ್ಳಲಿದೆ.

ಇದನ್ನು ಓದಿ:IPL: ಐಸಿಸಿ ಅಕಾಡೆಮಿಯಲ್ಲಿ CSKಗೆ ತರಬೇತಿ, ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ MIಗೆ ತರಬೇತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.