ಚೆನ್ನೈ: ಹಾಲಿಚಾಂಪಿಯನ್ಸ್ ವಿರುದ್ಧ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್‌ಗಳಷ್ಟೇ ಗಳಿಸಲಷ್ಟೇ ಶಕ್ತವಾಯಿತು. 138 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ 19.1 ಓವರ್‌ನಲ್ಲಿ ಜಯದ ಮಾಲೆ ಧರಿಸಿತು.
ಆರಂಭಿಕ ಶಿಖರ್ ಧವನ್ 42 ಎಸೆತಗಳಿಂದ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 45 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ದೆಹಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೃಥ್ವಿ ಶಾ ಕೇವಲ 7 ರನ್‌ಗಳಿಸಿ ಜಯಂತ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಧವನ್ ಜತೆಗೊಡಿದ ಸ್ವೀವನ್ ಸ್ಮಿತ್ 29 ಎಸೆತಗಳಲ್ಲಿ 4 ಬೌಂಡರಿ ಸಹಿತ 33 ರನ್ ಗಳಿಸಿ ಪೊಲಾರ್ಡ್ ಅವರ ಎಲ್‌ಬಿ ಬಲೆಗೆ ಬಿದ್ದರು.
ಇದನ್ನೂ ಓದಿ: ಅಮಿತ್ ಮಿಶ್ರಾ ದಾಳಿಗೆ ಮುಗ್ಗರಿಸಿದ ಚಾಂಪಿಯನ್ಸ್: ಡೆಲ್ಲಿ ಗೆಲುವಿಗೆ ಕೇವಲ 138ರನ್ ಟಾರ್ಗೆಟ್
ಈತ್ತ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಧವನ್ ಕೂಡ ರಾಹುಲ್ ಚಾಹರ್ ಬೌಲಿಂಗ್‌ನಲ್ಲಿ ಕೃನಾಲ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಪಂತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕೇವಲ 7 ರನ್ ಗಳಿಸಿ ಬೂಮ್ರಾ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದರು. ಲಲಿತ್ ಯಾದವ್ ಹಾಗೂ ಸಿಮ್ರೋನ್ ಹೆಟ್ಮೇಯರ್ ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿದರು. ಮುಂಬೈ ಪರ ಜಸ್ಪ್ರೀತ್ ಬೂಮ್ರಾ 3, ರಾಹುಲ್ ಚಾಹರ್ 1 ವಿಕೆಟ್ ಪಡೆದರು. ಒಟ್ಟಾರೆ ದೆಹಲಿ ಆಡಿರುವ 4 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ.