ಅಬುಧಾಬಿ: ನಿರ್ಣಾಯಕ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬಲಿಷ್ಠ ಸಿಎಸ್‌ಕೆ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 190 ರನ್‌ಗಳ ಬೃಹತ್ ರನ್ ಗುರಿಯನ್ನು ಆರ್ಆರ್ 17.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು.
-
.@IamShivamDube brings up his 5️⃣0️⃣ 👏👏
— IndianPremierLeague (@IPL) October 2, 2021 " class="align-text-top noRightClick twitterSection" data="
A power-packed knock from the @rajasthanroyals left-hander 🔥 🔥#VIVOIPL #RRvCSK
Follow the match 👉 https://t.co/dRp6k449yy pic.twitter.com/zhVr1a8hBg
">.@IamShivamDube brings up his 5️⃣0️⃣ 👏👏
— IndianPremierLeague (@IPL) October 2, 2021
A power-packed knock from the @rajasthanroyals left-hander 🔥 🔥#VIVOIPL #RRvCSK
Follow the match 👉 https://t.co/dRp6k449yy pic.twitter.com/zhVr1a8hBg.@IamShivamDube brings up his 5️⃣0️⃣ 👏👏
— IndianPremierLeague (@IPL) October 2, 2021
A power-packed knock from the @rajasthanroyals left-hander 🔥 🔥#VIVOIPL #RRvCSK
Follow the match 👉 https://t.co/dRp6k449yy pic.twitter.com/zhVr1a8hBg
ಆರಂಭಿಕನಾಗಿ ಕಣಕ್ಕಿಳಿದಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಸೂಪರ್ ಕಿಂಗ್ಸ್‌ನ ಅಗ್ರ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 21 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಮೂರು ಸಿಕ್ಸರ್ ಸೇರಿ 50 ರನ್ ಗಳಿಸಿದರು. ಜೈಸ್ವಾಲ್ ವಿಕೆಟ್ ಬಳಿಕ ಬಂದ ಶಿವಂ ದುಬೆ ಸಿಡಿಲಬ್ಬರದ ಆಟದೊಂದಿಗೆ ಆರ್ ಆರ್‌ಗೆ ಗೆಲುವು ತಂದು ಕೊಟ್ಟರು. ದುಬೆ 42 ಎಸೆತಗಳಿಂದ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 64 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ಔಟಾಗದೆ ಉಳಿದರು.
ಆರಂಭಿಕ ಆಟಗಾರ ಎವಿನ್ ಲೆವಿಸ್ 12 ಎಸೆತ ಎದುರಿಸಿ 2 ಬೌಂಡರಿ 2 ಸಿಕ್ಸರ್‌ನೊಂದಿಗೆ 27 ರನ್ ಸಿಡಿಸಿದರು. ಸಂಜು ಸ್ಯಾಮನ್ಸ್ 28 ಹಾಗೂ ಔಟಾಗದೆ ಗ್ಲೆನ್ ಫಿಲಿಪ್ಸ್ 8 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್ ಸಹಿತ 14 ರನ್ ಗಳಿಸಿದರು. ಸಿಎಸ್‌ಕೆ ಪರ ಶಾರ್ದುಲ್ ಠಾಕೂರ್ 2 ಹಾಗೂ ಕೆಎಂ ಆಸೀಫ್ 1 ವಿಕೆಟ್ ಕಬಳಿಸಿದರು.
ಗಾಯಕ್ವಾಡ್ ಶತಕ ವ್ಯರ್ಥ
ಇದನ್ನೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಪರ ಆರಂಭಿಕ ರುತುರಾಜ್ ಗಾಯಕ್ವಾಡ್ ಆಕರ್ಷಕ ಶತಕ ಸಿಡಿಸಿದರು. ಇನ್ನಿಂಗ್ಸ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ 100 ರನ್‌ಗಳನ್ನು ಪೂರೈಸಿದ ಗಾಯಕ್ವಾಡ್, ಒಟ್ಟು 60 ಎಸೆತಗಳಿಂದ 9 ಬೌಂಡರಿ, 5 ಸಿಕ್ಸರ್ ಸಹಿತ 101 ರನ್‌ಗಳಿಸಿದರು.
-
1⃣0⃣1⃣* Runs
— IndianPremierLeague (@IPL) October 2, 2021 " class="align-text-top noRightClick twitterSection" data="
6⃣0⃣ Balls
9⃣ Fours
5⃣ Sixes
Ravishing @Ruutu1331's remarkable ton 👏 👏 #VIVOIPL #RRvCSK @ChennaiIPL
Sit back & relish this brilliant knock 🎥 👇https://t.co/TZmS0HrNNX
">1⃣0⃣1⃣* Runs
— IndianPremierLeague (@IPL) October 2, 2021
6⃣0⃣ Balls
9⃣ Fours
5⃣ Sixes
Ravishing @Ruutu1331's remarkable ton 👏 👏 #VIVOIPL #RRvCSK @ChennaiIPL
Sit back & relish this brilliant knock 🎥 👇https://t.co/TZmS0HrNNX1⃣0⃣1⃣* Runs
— IndianPremierLeague (@IPL) October 2, 2021
6⃣0⃣ Balls
9⃣ Fours
5⃣ Sixes
Ravishing @Ruutu1331's remarkable ton 👏 👏 #VIVOIPL #RRvCSK @ChennaiIPL
Sit back & relish this brilliant knock 🎥 👇https://t.co/TZmS0HrNNX
ಪಾಪ್ ಡುಪ್ಲೆಸಿಸ್ 25, ರೈನಾ 3, ಮೊಯಿನ್ ಅಲಿ 21, ರಾಯುಡು 2 ಹಾಗೂ ರವೀಂದ್ರ ಜಡೇಜಾ 15 ಎಸೆತಗಳಿಂದ 4 ಬೌಂಡರಿ 1 ಸಿಕ್ಸರ್ ಸಹಿತ 32 ರನ್ ಗಳಿದರು. ಆರ್ಆರ್ ಪರ ರಾಹುಲ್ ತೇವಾಟಿಯಾ 3 ಹಾಗೂ ಚೇತನ್ ಸಕಾರಿಯಾ 1 ವಿಕೆಟ್ ಪಡೆದರು.