ETV Bharat / sports

ರಾಹುಲ್​ ಹಿಂದಿಕ್ಕಿದ ಗಾಯಕ್ವಾಡ್.. IPLನಲ್ಲಿ ಹೆಚ್ಚು ರನ್​ಗಳಿಸಿ ಆ್ಯರೆಂಜ್ ಕ್ಯಾಪ್​ ಪಡೆದ ಯಂಗ್ ಪ್ಲೇಯರ್.. - ಚೆನ್ನೈ ವರ್ಸಸ್ ಕೋಲ್ಕತ್ತಾ

ಗಾಯಕ್ವಾಡ್ 32 ರನ್ ​ಗಳಿಕೆ ಮಾಡುವ ಮೂಲಕ 635 ರನ್ ​ಗಳಿಸಿ ಐಪಿಎಲ್​​ನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್​ಗಳಿಸಿರುವ ಪ್ಲೇಯರ್​ ಆಗಿ ಹೊರ ಹೊಮ್ಮಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಶಿಖರ್ ಧವನ್​​​ 587ರನ್ ​​ಗಳಿಸಿದ್ರೇ, ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿ ಇದ್ದಾರೆ..

Ruturaj Gaikwad
Ruturaj Gaikwad
author img

By

Published : Oct 15, 2021, 9:04 PM IST

ದುಬೈ : ಇಂಡಿಯನ್​​​ ಪ್ರೀಮಿಯರ್ ಲೀಗ್​​ನ ಫೈನಲ್​​ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆರಂಭಿಕರಾಗಿ ಕಣಕ್ಕಿಳಿದ ಯಂಗ್​ ಪ್ಲೇಯರ್​​​ ಋತುರಾಜ್​​ ಗಾಯಕ್ವಾಡ್ 32ರನ್​ಗಳಿಕೆ ಮಾಡುವ ಮೂಲಕ ಹೊಸದೊಂದು ದಾಖಲೆ ಬರೆದರು.

14ನೇ ಆವೃತ್ತಿ ಐಪಿಎಲ್​​ನಲ್ಲಿ ಹೆಚ್ಚಿನ ರನ್​ಗಳಿಕೆ ಮಾಡುವ ಮೂಲಕ ಆ್ಯರೆಂಜ್ ಕ್ಯಾಪ್​​ ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಂಗ್ ಪ್ಲೇಯರ್​ ಋತುರಾಜ್​ ಗಾಯಕ್ವಾಡ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.

Ruturaj Gaikwad
ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಮಿಂಚಿದ ಡುಪ್ಲೆಸಿ-ಗಾಯಕ್ವಾಡ್ ಜೋಡಿ

ಈ ಆವೃತ್ತಿಯಲ್ಲಿ 626 ರನ್​ಗಳಿಕೆ ಮಾಡುವ ಮೂಲಕ ಕನ್ನಡಿಗ ಕೆ.ಎಲ್​​ ರಾಹುಲ್​ ಆರೆಂಜ್​ ಕ್ಯಾಪ್​ ತಮ್ಮ ಬಳಿ ಉಳಿಸಿಕೊಂಡಿದ್ದರು. ಆದರೆ, ಇವರ ನಂತರದ ಸ್ಥಾನದಲ್ಲಿದ್ದ ಯಂಗ್ ಪ್ಲೇಯರ್​​ ಋತುರಾಜ್ ಗಾಯಕ್ವಾಡ್ ಕೇವಲ 24 ರನ್​ ಹಿನ್ನಡೆಯಲ್ಲಿದ್ದರು.

ಕೊನೆಯ ಪಂದ್ಯದಲ್ಲಿ ಬ್ಯಾಟ್​ ಬೀಸಿದ ಗಾಯಕ್ವಾಡ್ 32 ರನ್ ​ಗಳಿಕೆ ಮಾಡುವ ಮೂಲಕ 635 ರನ್ ​ಗಳಿಸಿ ಐಪಿಎಲ್​​ನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್​ಗಳಿಸಿರುವ ಪ್ಲೇಯರ್​ ಆಗಿ ಹೊರ ಹೊಮ್ಮಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಶಿಖರ್ ಧವನ್​​​ 587ರನ್ ​​ಗಳಿಸಿದ್ರೇ, ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿ ಇದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಜೊತೆಯಾಗಿ ಕಣಕ್ಕಿಳಿಯುತ್ತಿದ್ದ ಡುಪ್ಲೆಸಿ ಹಾಗೂ ಗಾಯಕ್ವಾಡ್ ಒಟ್ಟು 756 ರನ್​ಗಳ ಜೊತೆಯಾಟ ನೀಡಿದ್ದಾರೆ. ಈ ಟೂರ್ನಿಯಲ್ಲಿ ಹೆಚ್ಚಿನ ರನ್​ಗಳಿಸಿರುವ ಪ್ಲೇಯರ್​ ಆಗಿದ್ದಾರೆ. ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ವಿರುದ್ಧ ಟಾಸ್ ಗೆದ್ದಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೊದಲು ಬ್ಯಾಟಿಂಗ್​ ನಡೆಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.