ETV Bharat / sports

ಐಪಿಎಲ್​ 2023: ಎರಡನೇ ಅತಿ ಉದ್ದದ ಸಿಕ್ಸರ್ ಬಾರಿಸಿದ ಬಟ್ಲರ್​, ​ಆರ್​ಸಿಬಿ ಹೆಸರಲ್ಲಿದೆ ಫಸ್ಟ್ ಲಾಂಗೆಸ್ಟ್​​ ಸಿಕ್ಸ್

author img

By

Published : Apr 20, 2023, 11:25 AM IST

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 87 ರನ್ ಜೊತೆಯಾಟವಾಡಿ ಮಿಂಚಿದರು. ಉತ್ತಮ ಆರಂಭ ದೊರೆತರು ಸಹ ಆರ್​ಆರ್​ಗೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

Indian Premier League 2023  jos buttler hit 2nd longest six  Lucknow Super Giants  ಎರಡನೇ ಅತಿ ಉದ್ದದ ಸಿಕ್ಸರ್ ಬಾರಿಸಿದ ಬಟ್ಲರ್​ ​ಆರ್​ಸಿಬಿ ಹೆಸರಲ್ಲಿದೆ ಫಸ್ಟ್ ಲಾಂಗೆಸ್ಟ್​​ ಸಿಕ್ಸ್  ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ  ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್  ರಾಜಸ್ಥಾನ್ ರಾಯಲ್ಸ್ ಸ್ಟಾರ್ ಓಪನರ್ ಜೋಸ್ ಬಟ್ಲರ್  ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್  ರಾಯಲ್ ಚಾಲೆಂಜರ್ಸ್ ಬೆಂಗಳೂರು
ಐಪಿಎಲ್​ 2023: ಎರಡನೇ ಅತಿ ಉದ್ದದ ಸಿಕ್ಸರ್ ಬಾರಿಸಿದ ಬಟ್ಲರ್

ಜೈಪುರ (ರಾಜಸ್ಥಾನ್)​: ರಾಜಸ್ಥಾನ್ ರಾಯಲ್ಸ್ ಸ್ಟಾರ್ ಓಪನರ್ ಜೋಸ್ ಬಟ್ಲರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಎರಡನೇ ಅತಿ ಉದ್ದದ ಸಿಕ್ಸರ್ ಬಾರಿಸಿದ ಆಟಗಾರರಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಇನಿಂಗ್ಸ್‌ನ ನಾಲ್ಕನೇ ಓವರ್‌ಗೆ ಚೆಂಡನ್ನು ಯುಧವೀರ್ ಸಿಂಗ್ ಚರಕ್ ಕೈಗೆ ನೀಡಿದರು. ಯಶಸ್ವಿ ಜೈಸ್ವಾಲ್ ಅವರು ಯುದ್ಧವೀರ್ ಅವರ ಮೊದಲ ಎಸೆತವನ್ನು ಬೌಂಡರಿ ಬಾರಿಸಿದರು. ಎರಡನೇ ಚೆಂಡು ಡಾಟ್ ಆಗಿತ್ತು. ಮೂರನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಒಂದು ರನ್ ಗಳಿಸಿ ಜೋಸ್ ಬಟ್ಲರ್‌ಗೆ ಸ್ಟ್ರೈಕ್ ನೀಡಿದರು.

ಯುಧ್ವೀರ್ ಸಿಂಗ್ ಚರಕ್ ಅವರ ಈ ಚೆಂಡು ಮಿಡಲ್ ಸ್ಟಂಪ್‌ಗೆ ಗುರಿ ಮಾಡಿ ಎಸೆದಿದ್ದರು. ಆ ಎಸೆದ ಚೆಂಡನ್ನು ಜೋಸ್ ಬಟ್ಲರ್ ಡೀಪ್ ಮಿಡ್‌ವಿಕೆಟ್‌ನತ್ತ ಸ್ಲಾಗ್ ಮಾಡಿದರು. ಆ ಚೆಂಡ ನೇರವಾಗಿ ಬೌಂಡರಿ ಗೆರೆ ದಾಟಿತು. ಜೋಸ್ ಬಟ್ಲರ್ ಅವರು ಬಾರಿಸಿದ ಈ ಸಿಕ್ಸರ್ 112 ಮೀಟರ್ ಉದ್ದವಿತ್ತು. ಇದು ಟೂರ್ನಿಯ ಎರಡನೇ ಅತಿ ಉದ್ದದ ಸಿಕ್ಸರ್ ಆಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಐಪಿಎಲ್ 2023 ರಲ್ಲಿ ಇದುವರೆಗೆ ಅತಿ ಉದ್ದದ ಸಿಕ್ಸರ್ ಬಾರಿಸಿದ ಆಟಗಾರರ ಪೈಕಿ ಮೊದಲನೇ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ 112 ಮೀಟರ್​ ಉದ್ದದ ಸಿಕ್ಸರ್​ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ 46 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದರು. ಆ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ 15ನೇ ಓವರ್​ನಲ್ಲಿ 115 ಮೀಟರ್ ಉದ್ದದ ಸಿಕ್ಸರ್ ಬಾರಿಸಿ ಮಿಂಚಿದ್ದರು.

ಈ ಟೂರ್ನಿಯಲ್ಲಿ ಇದುವರೆಗಿನ ಅತಿ ಉದ್ದದ ಟಾಪ್-5 ಸಿಕ್ಸರ್‌ಗಳು:

* ಒಂದನೇ ಲಾಂಗೆಸ್ಟ್ ಸಿಕ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ 115 ಮೀಟರ್‌ಗಳ ಲಾಂಗೆಸ್ಟ್​ ಸಿಕ್ಸ್​ ಬಾರಿಸಿದ್ದಾರೆ.

* ಎರಡನೇ ಅತಿ ಉದ್ದದ ಸಿಕ್ಸರ್: ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿ ಆಟಗಾರ ಜೋಸ್ ಬಟ್ಲರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ 112 ಮೀಟರ್‌ಗಳ ಉದ್ದದ ಸಿಕ್ಸರ್ ಬಾರಿಸಿದರು.

* ಮೂರನೇ ಅತಿ ಉದ್ದದ ಸಿಕ್ಸರ್: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಶಿವಂ ದುಬೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 111 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು.

* ನಾಲ್ಕನೇ ಅತಿ ಉದ್ದದ ಸಿಕ್ಸರ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 103 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು.

* ಐದನೇ ಅತಿ ಉದ್ದದ ಸಿಕ್ಸರ್: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಶಿವಂ ದುಬೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 102 ಮೀಟರ್‌ಗಳ ಸಿಕ್ಸರ್ ಬಾರಿಸಿದರು.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಅವರೊಂದಿಗೆ ಮೊದಲ ವಿಕೆಟ್‌ಗೆ 87 ರನ್ ಜೊತೆಯಾಟವನ್ನಾಡಿದರು. ಯಶಸ್ವಿ ಜೈಸ್ವಾಲ್ 35 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 44 ರನ್​ಗಳಿಸಿ ಔಟಾದರು. ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಜೊತೆಯಾಟವನ್ನು ಮಾರ್ಕಸ್ ಸ್ಟೊಯಿನಿಸ್ ಮುರಿದರು. ಜೋಸ್ ಬಟ್ಲರ್ 41 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ಬಟ್ಲರ್ ವಿಕೆಟ್ ಕೂಡಾ ಮಾರ್ಕಸ್ ಸ್ಟೊಯಿನಿಸ್ ಪಡೆದರು.

ಓದಿ: ರಾಯಲ್ಸ್​ ತವರಲ್ಲಿ ಗೆಲುವಿನ ಪತಾಕೆ ಹಾರಿಸಿದ ಲಕ್ನೋ: ಫೋಟೋಗಳಲ್ಲಿ ಮ್ಯಾಚ್​ ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.