ಮುಂಬೈ: ಬಲಾಢ್ಯ ಗುಜರಾತ್ ಟೈಟನ್ಸ್ ಹಾಗೂ ಕಳಪೆ ಪ್ರದರ್ಶನದಿಂದ ಈಗಾಗಲೇ ಪ್ರಶಸ್ತಿ ಪೈಪೋಟಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿವೆ. ಟಾಸ್ ಸೋತ ರೋಹಿತ್ ಬಳಗ ಹಾರ್ದಿಕ್ ಪಾಂಡ್ಯಾ ಬಳಗಕ್ಕೆ 178 ರನ್ಗಳ ಗುರಿ ನೀಡಿದೆ. ಈ ಪಂದ್ಯ ಗೆದ್ದು ಪ್ಲೇ-ಆಫ್ಗೆ ಅಧಿಕೃತವಾಗಿ ಲಗ್ಗೆ ಹಾಕುವ ಕಾತುರದಲ್ಲಿದೆ ಗುಜರಾತ್ ತಂಡವಿದೆ. ಇನ್ನೊಂದೆಡೆ, ಒಟ್ಟಾರೆ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸುವ ಉತ್ಸಾಹ ಮುಂಬೈ ಇಂಡಿಯನ್ಸ್ ತಂಡದ್ದಾಗಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡದ ಬೌಲರ್ಗಳ ಬೆವರಿಳಿಸಿದರು. ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶಾನ್ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡಿ, 7 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೇ 74 ರನ್ಗಳನ್ನು ಕಲೆ ಹಾಕಿ ಮುನ್ನುಗುತ್ತಿತ್ತು. ಆದರೆ, 7ನೇ ಓವರ್ನ ಮೂರನೇ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ 43 ರನ್ಗಳು ಕಲೆ ಹಾಕಿ ಪೆವಿಲಿಯನ್ ಹಾದಿ ಹಿಡಿದರು.
ಓದಿ: IPLನಲ್ಲಿಂದು ಗುಜರಾತ್ ಸವಾಲು ಎದುರಿಸಲಿದೆ ಮುಂಬೈ: ಅರ್ಜುನ್ ತೆಂಡೂಲ್ಕರ್ಗೆ ಚಾನ್ಸ್?
ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಇಶಾನ್ ಕಿಶಾನ್ಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು. ಆದರೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದ ಸೂರ್ಯಕುಮಾರ್ ಯಾದವ್ 13 ರನ್ ಗಳಿಸಿ ಔಟಾದರು. ಬಳಿಕ ಆರಂಭಿಕ ಆಟಗಾರನಾದ ಇಶಾನ್ ಸಹಿತ 45 ರನ್ ಗಳಿಸಿ ಜೋಸೆಫ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇಶಾನ್ ಔಟಾದ ಬಳಿಕ 4 ರನ್ಗಳಿಸಿ ಪೊಲಾರ್ಡ್ ಸಹ ಔಟಾದರು. ಬಳಿಕ ತಿಲಕ್ ವರ್ಮಾ 21 ರನ್ ಮತ್ತು ಟಿಮ್ ಡೇವಿಡ್ ಅಜೇಯರಾಗಿ 44 ರನ್ ಕಲೆ ಹಾಕುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಶ್ರಮಿಸಿದರು. ಸದ್ಯ ಮುಂಬೈ ತಂಡ ನಿಗದಿತ 20 ಓವರ್ಗಳಿಗೆ ಆರು ವಿಕೆಟ್ ನಷ್ಟಕ್ಕೆ 177 ರನ್ಗಳನ್ನು ಕಲೆ ಹಾಕುವ ಮೂಲಕ ಗುಜರಾತ್ ಟೈಟಾನ್ಸ್ಗೆ 178 ರನ್ಗಳ ಗುರಿ ನೀಡಿದೆ.
2022ರ ಐಪಿಎಲ್ನಲ್ಲಿ ಹೊಸ ಫ್ರಾಂಚೈಸಿ ಗುಜರಾತ್ ತಾನಾಡಿರುವ 10 ಪಂದ್ಯಗಳ ಪೈಕಿ 8ರಲ್ಲಿ ಗೆದ್ದು 16 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮುಂಬೈ ಕೇವಲ 1 ಗೆಲುವು ಸಾಧಿಸಿ ಕೊನೆಯ ಸ್ಥಾನದಲ್ಲಿದೆ.
ಗುಜರಾತ್ ಟೈಟಾನ್ಸ್: ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯಾ(ಕ್ಯಾಪ್ಟನ್), ರಾಹುಲ್ ತೆವಾಟಿಯಾ, ವೃದ್ಧಿಮಾನ್ ಸಹಾ (ವಿ.ಕೀ), ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಪ್ರದೀಪ್ ಸಂಗ್ವಾನ್, ರಶೀದ್ ಖಾನ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿ.ಕೀ), ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ತಿಲಕ್ ವರ್ಮಾ, ಟಿಮ್ ಡೇವಿಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಡೇನಿಯಲ್ ಸಾಮ್ಸ್, ಕುಮಾರ್ ಕಾರ್ತಿಕೇಯ.