ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಅಂತಿಮ ಟಿ-20 ಪಂದ್ಯದಲ್ಲಿ ಸಿಂಹಳೀಯರ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ ಹೋಗಿರುವ ಟೀಂ ಇಂಡಿಯಾ 20 ಓವರ್ಗಳಲ್ಲಿ 8ವಿಕೆಟ್ನಷ್ಟಕ್ಕೆ ಕೇವಲ 81 ರನ್ಗಳಿಕೆ ಮಾಡಿದೆ. ಈ ಮೂಲಕ ಲಂಕಾ ಗೆಲುವಿಗೆ 82ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ಲಂಕಾ ಪರ 4 ಓವರ್ ಎಸೆದ ಹಸರಂಗ 9ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದುಕೊಂಡು ಟೀಂ ಇಂಡಿಯಾಗೆ ಮಾರಕವಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದ 4 ಓವರ್ಗಳಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಆರಂಭಿಕ ಓವರ್ನಲ್ಲಿ ಶಿಖರ್ ಧವನ್ (0) ವಿಕೆಟ್ ಒಪ್ಪಿಸಿದರೆ, ಇವರ ಬೆನ್ನಲ್ಲೇ ಗಾಯ್ಕವಾಡ(14), ಪಡಿಕ್ಕಲ್(9) ಹಾಗೂ ಸಂಜು ಸ್ಯಾಮನ್ಸ್(0) ವಿಕೆಟ್ ಒಪ್ಪಿಸಿದರು.ಒಂದೇ ಓವರ್ನಲ್ಲಿ ಎರಡು ವಿಕೆಟ್ ಪಡೆದುಕೊಳ್ಳುವ ಮೂಲಕ ಹಸರಂಗ ತಂಡಕ್ಕೆ ಮೆಲುಗೈ ತಂದುಕೊಟ್ಟರು. ಹಸರಂಗ ಎಸೆದ 4ನೇ ಓವರ್ನಲ್ಲಿ ಗಾಯ್ಕವಾಡ ಹಾಗೂ ಸಂಜು ಸ್ಯಾಮನ್ಸ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಿತೀಶ್ ರಾಣಾ ಕೂಡ 6ರನ್ಗಳಿಕೆ ಮಾಡಿ ಔಟ್ ಆದರು.
ಇದಾದ ಬಳಿಕ ಒಂದಾದ ಭುವನೇಶ್ವರ್ ಕುಮಾರ್(16) ಹಾಗೂ ಕುಲ್ದೀಪ್ ಯಾದವ್(23)ರನ್ಗಳಿಕೆ ಮಾಡಿ ತಂಡ 50ರನ್ ಗಡಿದಾಟುವಂತೆ ಮಾಡಿತು. ಇವರ ವಿಕೆಟ್ ಬಿಳುತ್ತಿದ್ದಂತೆ ಚಹರ್(5) ಹಾಗೂ ಸಕಾರಿಯಾ(5)ರನ್ಗಳಿಕೆ ಮಾಡಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 8ವಿಕೆಟ್ ಕಳೆದುಕೊಂಡು 81ರನ್ಗಳಿಕೆ ಮಾಡಿದ್ದು, ಲಂಕಾ ಗೆಲುವಿಗೆ 82ರನ್ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 23 ವೈಯಕ್ತಿಕ ಗರಿಷ್ಠ ಸ್ಕೋರ್ರ ಆಗಿ ಹೊರಹೊಮ್ಮಿದರು. ಲಂಕಾ ಪರ ಹಸರಂಗ 4ವಿಕೆಟ್ ಪಡೆದು ಮಿಂಚಿದರೆ, ಶನಕ್ 2ವಿಕೆಟ್, ಚಮೀರಾ, ಮೆಂಡಿಸ್ ತಲಾ 1ವಿಕೆಟ್ ಕಬಳಿಸಿದರು.
-
A 🔥 performance from Sri Lanka in the field restricts India to 81/8.
— ICC (@ICC) July 29, 2021 " class="align-text-top noRightClick twitterSection" data="
Birthday boy Wanindu Hasaranga ends up with figures of 4/9 in his four overs 👏#SLvIND | https://t.co/mYciWl62Z7 pic.twitter.com/k0C5uEUAr0
">A 🔥 performance from Sri Lanka in the field restricts India to 81/8.
— ICC (@ICC) July 29, 2021
Birthday boy Wanindu Hasaranga ends up with figures of 4/9 in his four overs 👏#SLvIND | https://t.co/mYciWl62Z7 pic.twitter.com/k0C5uEUAr0A 🔥 performance from Sri Lanka in the field restricts India to 81/8.
— ICC (@ICC) July 29, 2021
Birthday boy Wanindu Hasaranga ends up with figures of 4/9 in his four overs 👏#SLvIND | https://t.co/mYciWl62Z7 pic.twitter.com/k0C5uEUAr0