ETV Bharat / sports

'ಮಾತನಾಡಲು ನನ್ನ ಬಳಿ ಪದಗಳೇ ಇಲ್ಲ': KKR​ ವಿರುದ್ಧ ಸೋತ ಬಳಿಕ ಭಾವುಕರಾದ ಪಂತ್​ - ಡೆಲ್ಲಿ ಕ್ಯಾಪಿಟಲ್ಸ್

ಕೋಲ್ಕತ್ತಾ ತಂಡದವರು ಮಧ್ಯಮ ಓವರ್‌ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದರು. ಹೀಗಾಗಿ ನಾವು ಒತ್ತಡಕ್ಕೆ ಸಿಲುಕಿದ್ದು ಮತ್ತು ರನ್​ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಡೆಲ್ಲಿ ತಂಡವು ಸದಾ ಸಕಾರಾತ್ಮಕವಾಗಿದ್ದು, ಮುಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ರಿಷಭ್​ ಪಂತ್​ ಹೇಳಿದ್ದಾರೆ.

I don't have words to express at the moment, says Pant after close defeat
ರಿಷಭ್​ ಪಂತ್
author img

By

Published : Oct 14, 2021, 3:43 AM IST

Updated : Oct 14, 2021, 4:25 AM IST

ಶಾರ್ಜಾ: ಕೆಕೆಆರ್​​ ವಿರುದ್ಧದ ಸೋಲಿನ ಬಗ್ಗೆ ಮಾತನಾಡಲು ನನ್ನ ಬಳಿ ಪದಗಳೇ ಇಲ್ಲ, ಏನನ್ನೂ ಹೇಳಲು ಸಾಧ್ಯವಿಲ್ಲ. ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದೆವು. ಬೌಲರ್​ಗಳು ಬಹುತೇಕ ಗೆಲುವಿನತ್ತ ಕೊಂಡೊಯ್ದರೂ ಕೂಡ ಕೊನೆಯಲ್ಲಿ ಯಶ ಕಾಣದಿರುವುದು ದುರದೃಷ್ಟಕರ ಎಂದು ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ರಿಷಭ್​ ಪಂತ್​ ಭಾವುಕರಾದರು.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆದ 2ನೇ ಕ್ವಾಲಿಫೈಯರ್​​ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್​​ಗಳಿಂದ ಸೋಲುಂಡು ಐಪಿಎಲ್​ನಿಂದ ಹೊರಬಿದ್ದಿತು. ಕೊನೆಯ ಓವರ್​ನಲ್ಲಿ ಗೆಲುವಿನ ಸನಿಹ ಬಂದರೂ ಕೂಡ ಬ್ಯಾಟರ್​​ ರಾಹುಲ್​ ತ್ರಿಪಾಠಿ ಸಿಕ್ಸರ್​ ಸಿಡಿಸಿ ಕೆಕೆಆರ್​ ತಂಡವನ್ನು ಫೈನಲ್​ಗೆ ಕೊಂಡೊಯ್ದರು.

ಪಂದ್ಯದ ಬಳಿಕ ಮಾತನಾಡಿದ ಪಂತ್​, ಕೋಲ್ಕತ್ತಾ ತಂಡದವರು ಮಧ್ಯಮ ಓವರ್‌ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದರು. ಹೀಗಾಗಿ ನಾವು ಒತ್ತಡಕ್ಕೆ ಸಿಲುಕಿದ್ದಲ್ಲದೆ ರನ್​ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಡೆಲ್ಲಿ ತಂಡವು ಸದಾ ಸಕಾರಾತ್ಮಕವಾಗಿದ್ದು, ಮುಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ. ನಾವು ಇಲ್ಲಿಯವರೆಗೆ ಉತ್ತಮ ಕ್ರಿಕೆಟ್ ಆಡಿದ್ದೇವೆ, ಟೂರ್ನಿಯಲ್ಲಿ ಏರಿಳಿತಗಳು ಸಹಜ ಎಂದರು.

2012ರ ಐಪಿಎಲ್​ ಬಳಿಕ ಲೀಗ್ ಹಂತದ ಪಾಯಿಂಟ್ಸ್​​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಕೂಡ ಡೆಲ್ಲಿ 2ನೇ ಬಾರಿಗೆ ಫೈನಲ್‌ಗೆ ತಲುಪುವಲ್ಲಿ ವಿಫಲವಾಗಿದೆ. ಅ. 15ರಂದು ದುಬೈನಲ್ಲಿ ನಡೆಯಲಿರುವ 2021ರ ಐಪಿಎಲ್​ ಫೈನಲ್​ ಪಂದ್ಯದಲ್ಲಿ ಸಿಎಸ್​ಕೆ ಹಾಗೂ ಕೆಕೆಆರ್​ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ.

ಇದನ್ನೂ ಓದಿ: IPL 2021: ಡೆಲ್ಲಿಗೆ ವಿರೋಚಿತ ಸೋಲು... ಮೂರನೇ ಬಾರಿಗೆ ಫೈನಲ್​ ತಲುಪಿದ KKR

Last Updated : Oct 14, 2021, 4:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.