ಅಹಮದಾಬಾದ್ (ಗುಜರಾತ್): 16ನೇ ಐಪಿಎಲ್ ಆವೃತ್ತಿಯಲ್ಲಿ ಪ್ಲೇ ಆಪ್ ಸ್ಪರ್ಧೆ ಜೋರಾಗಿದ್ದು, ಬಹುತೇಕ ತಂಡಗಳಿಗೆ ಇನ್ನೆರಡು ಪಂದ್ಯ ಬಾಕಿ ಇದ್ದರೂ ಯಾರು ಅರ್ಹತೆ ಗಿಟ್ಟಿಸಿಕೊಂಡಿಲ್ಲ. ಅಂಕ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ (ಜಿಟಿ) ಇಂದು ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ವಿರುದ್ಧ ಕಣಕ್ಕಿಳಿಯುತ್ತಿದೆ. ಪ್ಲೇ ಆಫ್ ಅರ್ಹತೆಗೆ ಸನ್ ರೈಸರ್ಸ್ ಈ ಪಂದ್ಯ ಸೇರಿದಂತೆ ಮಿಕ್ಕೆರಡು ಮ್ಯಾಚ್ಗಳನ್ನು ಗೆಲ್ಲಬೇಕಿದೆ. ಗುಜರಾತ್ ಇಂದು ಗೆದ್ದಲ್ಲಿ ಪ್ಲೇ ಆಫ್ ಪ್ರವೇಶ ಪಡೆದುಕೊಳ್ಳಲಿದೆ.
ಗುಜರಾತ್ ಟೈಟಾನ್ಸ್ ಈವರೆಗೆ ಆಡಿರುವ 12 ಪಂದ್ಯದಲ್ಲಿ 8ನ್ನು ಗೆದ್ದಿದ್ದು, 16 ಅಂಕಗಳನ್ನು ಪಡೆದುಕೊಂಡಿದೆ. ಅತ್ತ ಸನ್ ರೈಸರ್ಸ್ ಹೈದರಾಬಾದ್ 11 ರಲ್ಲಿ 4 ಗೆದ್ದು 8 ಅಂಕದಿಂದ ಅಂಕಪಟ್ಟಿಯ 9ನೇ ಸ್ಥಾನದಲ್ಲಿದೆ. ಎಸ್ಆರ್ಹೆಚ್ ಇಂದು ಸೋತಲ್ಲಿ ಲೀಗ್ನಿಂದ ಹೊರ ಬಿದ್ದ ಎರಡನೇ ತಂಡವಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯದಲ್ಲಿ 8 ರಲ್ಲಿ ಸೋತು ಈಗಾಗಲೇ ಲೀಗ್ನಿಂದ ಹೊರ ಬಿದ್ದಿದೆ.
-
We meet the Titans tonight 💟 🤝🧡 pic.twitter.com/64LG5phBhC
— SunRisers Hyderabad (@SunRisers) May 15, 2023 " class="align-text-top noRightClick twitterSection" data="
">We meet the Titans tonight 💟 🤝🧡 pic.twitter.com/64LG5phBhC
— SunRisers Hyderabad (@SunRisers) May 15, 2023We meet the Titans tonight 💟 🤝🧡 pic.twitter.com/64LG5phBhC
— SunRisers Hyderabad (@SunRisers) May 15, 2023
ಬೌಲಿಂಗ್ನಲ್ಲಿ ಬಲಿಷ್ಠ ತಂಡವೆಂದು ಕರೆಸಿಕೊಂಡಿದ್ದ ಎಸ್ಆರ್ಹೆಚ್ ಆ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ. 180 ಪ್ಲೇಸ್ ರನ್ನ ಗುರಿಯನ್ನು ನೀಡಿದರೂ ಅದನ್ನು ಬೌಲರ್ಗಳು ಉಳಿಸಿಕೊಳ್ಳದಿರುವುದು ತಂಡವನ್ನು ಸಂಕಷ್ಟಕ್ಕೆ ತಳ್ಳಿದೆ. ಬ್ಯಾಟಿಂಗ್ನಲ್ಲೂ ಉತ್ತಮ ಲಯದ ಪ್ರದರ್ಶನ ಕಂಡುಬಂದಿಲ್ಲ. ವಿದೇಶಿ ಆಟಗಾರರ ಮೇಲೆ ಹೆಚ್ಚು ತಂಡ ಅವಲಂಬಿತವಾಗಿದ್ದು, ಒಂದು ಪಂದ್ಯದಲ್ಲಿ ಬೂಕ್ ಶತಕ ಗಳಿಸಿದರೆ ಮತ್ತೆ ಅವರ ಬ್ಯಾಟ್ ರನ್ ಮಾಡಲೇ ಇಲ್ಲ.
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಗಟ್ಟಿಯಾಗಿದೆ. 8ನೇ ಸ್ಥಾನದವರೆಗೆ ಬ್ಯಾಟಿಂಗ್ ಹೊಂದಿದ್ದು, ಕೆಳ ಕ್ರಮಾಂಕದಲ್ಲಿ ಒತ್ತಡದಲ್ಲೂ ಸ್ಕೋರ್ ಬರುತ್ತಿದೆ. ಆದರೆ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಬ್ಯಾಟಿಂಗ್ ವೈಫಲ್ಯ ಎದುರಿಸಿ ಸೊಲು ಕಂಡಿತು. ಕೊನೆಯಲ್ಲಿ ರಶೀದ್ ಖಾನ್ ಮಾಡಿದ ಹೋರಾಟವೂ ವ್ಯರ್ಥವಾಯಿತು. ಆದರೆ ಆರಂಭಿಕರಾದ ಶುಭಮನ್ ಗಿಲ್, ವೃದ್ಧಿಮಾನ್ ಸಹಾ ಉತ್ತಮ ಫಾರ್ಮ್ನಲ್ಲಿದ್ದಾರೆ. ಇವರ ಜೊತೆಗೆ ಬೌಲಿಂಗ್ನಲ್ಲಿ ವೇಗದ ವಿಭಾಗವನ್ನು ಶಮಿ ಮತ್ತು ಮೋಹಿತ್ ಶರ್ಮಾ ನಿಭಾಯಿಸಿದರೆ, ಸ್ಪಿನ್ನಲ್ಲಿ ರಶೀದ್ ಖಾನ್ ಪ್ರಾಬಲ್ಯ ಹೊಂದಿದ್ದಾರೆ.
-
Final home league game ➡️ Compulsory attendance! 💯#TitansFAM, toh pachi madiye aapde 7️⃣:3️⃣0️⃣ vaage! 🤝#GTvSRH #AavaDe #TATAIPL 2023 pic.twitter.com/W667dUJt6h
— Gujarat Titans (@gujarat_titans) May 15, 2023 " class="align-text-top noRightClick twitterSection" data="
">Final home league game ➡️ Compulsory attendance! 💯#TitansFAM, toh pachi madiye aapde 7️⃣:3️⃣0️⃣ vaage! 🤝#GTvSRH #AavaDe #TATAIPL 2023 pic.twitter.com/W667dUJt6h
— Gujarat Titans (@gujarat_titans) May 15, 2023Final home league game ➡️ Compulsory attendance! 💯#TitansFAM, toh pachi madiye aapde 7️⃣:3️⃣0️⃣ vaage! 🤝#GTvSRH #AavaDe #TATAIPL 2023 pic.twitter.com/W667dUJt6h
— Gujarat Titans (@gujarat_titans) May 15, 2023
ಸಂಭಾವ್ಯ ತಂಡಗಳು..: ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಭಮನ್ ಗಿಲ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್
ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಟಿ ನಟರಾಜನ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ
ಇದನ್ನೂ ಓದಿ: ತನ್ನ ಶರ್ಟ್ ಮೇಲೆ ಧೋನಿ ಆಟೋಗ್ರಾಫ್ ಪಡೆದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್