ಅಹಮದಾಬಾದ್ (ಗುಜರಾತ್): ಇಂಡಿಯನ್ ಪ್ರೀಮಿಯರ್ ಲೀಗ್ನ 44ನೇ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಮತ್ತು ಕೊನೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿವೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಈ ಪಂದ್ಯಕ್ಕೆ ಸಜ್ಜಾಗಿದೆ. 8 ಪಂದ್ಯದಲ್ಲಿ ಕೇವಲ ಎರಡರಲ್ಲಿ ಗೆಲುವು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ 4 ಅಂಕಗಳಿಸಿದೆ. 8 ಪಂದ್ಯದಲ್ಲಿ 6 ಗೆದ್ದು 12 ಅಂಕದಿಂದ ಮೊದಲ ಸ್ಥಾನದಲ್ಲಿ ಗುಜರಾತ್ ಇದೆ. ಇಂದಿನ ಪಂದ್ಯ ಗೆದ್ದಲ್ಲಿ ಜಿಟಿ ಅಗ್ರಸ್ಥಾನದಲ್ಲೇ ಮುಂದುವರೆಯಲಿದೆ.
ಲೀಗ್ನ ಆರಂಭದಿಂದ ಐದು ಪಂದ್ಯಗಳಲ್ಲಿ ಸೋಲು ಕಂಡಿದ್ದ ಡೇವಿಡ್ ವಾರ್ನರ್ ಪಡೆ ಆರು ಮತ್ತು ಏಳನೇ ಪಂದ್ಯದಲ್ಲಿ ಗೆಲುವು ಪಡೆದುಕೊಂಡಿತ್ತು. ಆದರೆ, 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿತು. ಇದರಿಂದ ಅಂಕಪಟ್ಟಿಯಲ್ಲಿ ಡೆಲ್ಲಿ ಕೊನೆ ಸ್ಥಾನದಲ್ಲೇ ಇದೆ. ಇನ್ನೂ ಆರು ಪಂದ್ಯಗಳನ್ನು ಡೆಲ್ಲಿ ಆಡಬೇಕಿದ್ದು, ಎಲ್ಲವನ್ನೂ ಗೆದ್ದಲ್ಲಿ ಪ್ಲೇ ಆಫ್ ಪ್ರವೇಶ ಸಾಧ್ಯತೆ ಇದೆ. ಆದರೆ, ಬಾಕಿ ತಂಡಗಳ ಗೆಲುವೂ ಸಹ ಇವರ ಕ್ವಾಲಿಪೈಯರ್ಗೆ ಸಮಸ್ಯೆಯಾಗಲಿದೆ.
-
Dilliwalon, kaisi thi Amdavad metro ki sawari? 🤩
— Gujarat Titans (@gujarat_titans) May 2, 2023 " class="align-text-top noRightClick twitterSection" data="
Milte hai seedha Motera station pe #GTvDC ke liye 🔥#AavaDe #TATAIPL 2023 pic.twitter.com/rR1uaKKxEn
">Dilliwalon, kaisi thi Amdavad metro ki sawari? 🤩
— Gujarat Titans (@gujarat_titans) May 2, 2023
Milte hai seedha Motera station pe #GTvDC ke liye 🔥#AavaDe #TATAIPL 2023 pic.twitter.com/rR1uaKKxEnDilliwalon, kaisi thi Amdavad metro ki sawari? 🤩
— Gujarat Titans (@gujarat_titans) May 2, 2023
Milte hai seedha Motera station pe #GTvDC ke liye 🔥#AavaDe #TATAIPL 2023 pic.twitter.com/rR1uaKKxEn
ಡೆಲ್ಲಿಗೆ ವಿದೇಶಿ ಬ್ಯಾಟರ್ಗಳ ಬಲ: ಡೇವಿಡ್ ವಾರ್ನರ್, ಫಿಲ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಫಾರ್ಮ್ನಲ್ಲಿರುವ ಬ್ಯಾಟರ್ಗಳಾಗಿದ್ದು, ಆರಂಭಿಕ ಮೂವರು ಘರ್ಜಿಸಿದರೂ ತಂಡ ಬೃಹತ್ ಮೊತ್ತವನ್ನು ಕಲೆಹಾಕಲು ಸಾಧ್ಯವಿದೆ. ಸನ್ ರೈಸರ್ಸ್ ವಿರುದ್ಧ ಫಿಲ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಅರ್ಧಶತಕದ ಆಟ ಪ್ರದರ್ಶಿಸಿದರು, ಟೂರ್ನಿ ಉದ್ದಕ್ಕೂ ಸಿಕ್ಸ್ ಗಳಿಸದೇ ಹಾಫ್ ಸೆಂಚುರಿಗಳನ್ನು ದಾಖಲಿಸುತ್ತಾ ಬಂದಿದ್ದಾರೆ. ಕೊನೆಯ ವಿಕೆಟ್ಗೆ ಬರುವ ಅಕ್ಷರ್ ಡೆಲ್ಲಿಗೆ ಫಿನಿಶರ್ ರೀತಿ ಕಾರ್ಯ ನಿರ್ವಹಿಸಬೇಕಿದೆ.
-
Jalebi, fafada aur dher saari masti, on our way to #GTvDC 😍 #YehHaiNayiDilli #IPL2023 pic.twitter.com/BSmZHg7Ox9
— Delhi Capitals (@DelhiCapitals) May 2, 2023 " class="align-text-top noRightClick twitterSection" data="
">Jalebi, fafada aur dher saari masti, on our way to #GTvDC 😍 #YehHaiNayiDilli #IPL2023 pic.twitter.com/BSmZHg7Ox9
— Delhi Capitals (@DelhiCapitals) May 2, 2023Jalebi, fafada aur dher saari masti, on our way to #GTvDC 😍 #YehHaiNayiDilli #IPL2023 pic.twitter.com/BSmZHg7Ox9
— Delhi Capitals (@DelhiCapitals) May 2, 2023
ಗುಜತರಾತ್ ಟೈಟಾನ್ಸ್ನಲ್ಲಿ ವೃದ್ಧಿಮಾನ್ ಸಹಾ ಬಿಟ್ಟು ಮತ್ತೆಲ್ಲರೂ ಫಾರ್ಮ್ನಲ್ಲಿದ್ದು, ಅಬ್ಬರಿಸುತ್ತಿದ್ದಾರೆ. ಗಿಲ್ ಸತತ ತಂಡಕ್ಕೆ ಸ್ಕೋರ್ ಮಾಡುತ್ತಿದ್ದಾರೆ. ತಂಡ ಗೆಲುವಿನ ಲಯದಲ್ಲಿರುವ ಕಾರಣ ತಂಡದಲ್ಲಿ ಬದಲಾವಣೆ ಮಾಡಿ ರಿಸ್ಕ್ ತೆಗೆದುಕೊಳ್ಳಲು ಹಾಲಿ ಚಾಂಪಿಯನ್ ನಾಯಕ ಹಾರ್ದಿಕ್ ಪಾಂಡ್ಯ ಯೋಚಿಸುತ್ತಿಲ್ಲ. ಬೌಲಿಂಗ್ನಲ್ಲಿ ಶಮಿ, ಶರ್ಮಾ ತಂಡಕ್ಕೆ ಅನುಭವ ದಾರೆ ಎರೆಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮಧ್ಯಮ ಕ್ರಮಾಂಕ ಇನ್ನಷ್ಟೂ ಬಲಪಡಿಸಿಕೊಳ್ಳಬೇಕಾಗಿದ್ದು ಬೆಂಚ್ನಲ್ಲಿರುವ ಯಾರಿಗೆ ಮಣೆಹಾಕಲಿದೆ ಕಾದು ನೋಡಬೇಕಿದೆ.
ಸಂಭಾವ್ಯ ತಂಡಗಳು ಇಂತಿವೆ..: ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಲಲಿತ್ ಯಾದವ್ / ರಿಪಾಲ್ ಪಟೇಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾನ್ ಶರ್ಮಾ, ಮುಕೇಶ್ ಕುಮಾರ್
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಜೋಶ್ ಲಿಟಲ್
ಇದನ್ನೂ ಓದಿ: ನಾವು ನೋಡೋದೆಲ್ಲ ದೃಷ್ಟಿಕೋನವಷ್ಟೇ, ಸತ್ಯವಲ್ಲ: ವಿರಾಟ್ ಕೊಹ್ಲಿ ಮಾರ್ಮಿಕ ಪೋಸ್ಟ್