ಚೆನ್ನೈ (ತಮಿಳುನಾಡು): ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 10ನೇ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಂಎಸ್ ಧೋನಿ ಪಡೆ ಗುಜರಾತ್ ಟೈಟಾನ್ಸ್ ತಂಡವನ್ನು 15 ರನ್ಗಳಿಂದ ಮಣಿಸಿ ಜಯದ ಕೇಕೆ ಹಾಕಿದೆ.
ಇಲ್ಲಿನ ಚೆಪಾಕ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ಗೆ ಇಳಿಯಿತು. ಎಂದಿನಂತೆ ಆರಂಭಿಕ ಬ್ಯಾಟರ್ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಇಬ್ಬರು ಕೂಡ ಮೊದಲ ವಿಕೆಟ್ಗೆ 87 ರನ್ ಕಲೆ ಹಾಕಿ 9ನೇ ಬಾರಿಗೆ ಅರ್ಧಶತಕದ ಜೊತೆಯಾಟ ನೀಡಿದರು. 44 ಎಸೆತ ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 60 ರನ್ ಬಾರಿಸಿ ಗಾಯಕ್ವಾಡ್ ನಿರ್ಗಮಿಸಿದರು. ಇದರ ಬೆನ್ನಲ್ಲೆ 40 ರನ್ ಗಳಿಸಿದ್ದ ಕಾನ್ವೆ ಕೂಡಾ ವಿಕೆಟ್ ಒಪ್ಪಿಸಿದರು.
ಕಾನ್ವೆ ಮತ್ತು ಗಾಯಕ್ವಾಡ್ ವಿಕೆಟ್ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕವೂ ಏಕಾಏಕಿ ಕುಸಿತ ಕಂಡಿತು. ಅಲ್ಲದೇ, ಗುಜರಾತ್ನ ಬೌಲರ್ಗಳು ರನ್ಗೆ ಕಡಿವಾಣ ಹಾಕಿದ್ದರು. ಶಿವಂ ದುಬೆ 1 ರನ್, ಅಜಿಂಕ್ಯಾ ರಹಾನೆ 17 ರನ್, ಅಂಬಟಿ ರಾಯುಡು 17 ಮತ್ತು ನಾಯಕ ಧೋನಿ 1 ರನ್ಗೆ ಪೆವಿಲಿಯನ್ ಸೇರಿದರು.
-
𝘿𝙊 𝙉𝙊𝙏 𝙈𝙄𝙎𝙎!
— IndianPremierLeague (@IPL) May 23, 2023 " class="align-text-top noRightClick twitterSection" data="
🎥 Join the Chennai Super Kings as they celebrate a spectacular win and become the first finalists of #TATAIPL 2023 🙌#TATAIPL | #Qualifier1 | #GTvCSK | @ChennaiIPL pic.twitter.com/ZLPIY2gEEu
">𝘿𝙊 𝙉𝙊𝙏 𝙈𝙄𝙎𝙎!
— IndianPremierLeague (@IPL) May 23, 2023
🎥 Join the Chennai Super Kings as they celebrate a spectacular win and become the first finalists of #TATAIPL 2023 🙌#TATAIPL | #Qualifier1 | #GTvCSK | @ChennaiIPL pic.twitter.com/ZLPIY2gEEu𝘿𝙊 𝙉𝙊𝙏 𝙈𝙄𝙎𝙎!
— IndianPremierLeague (@IPL) May 23, 2023
🎥 Join the Chennai Super Kings as they celebrate a spectacular win and become the first finalists of #TATAIPL 2023 🙌#TATAIPL | #Qualifier1 | #GTvCSK | @ChennaiIPL pic.twitter.com/ZLPIY2gEEu
ಆದರೆ ಕೊನೆಯ ಓವರ್ನಲ್ಲಿ ರವೀಂದ್ರ ಜಡೇಜಾ ಆಸರೆಯಾದರು. 16 ಬಾಲ್ ಎದುರಿಸಿದ ಅವರು 2 ಬೌಂಡರಿಯ ಸಹಾಯದಿಂದ 22 ರನ್ ಗಳಿಸಿ ಕೊನೆಯ ಬಾಲ್ಗೆ ವಿಕೆಟ್ ಕೊಟ್ಟರು. 9 ರನ್ ಗಳಿಸಿದ್ದ ಅಲಿ ಅಜೇಯರಾಗಿ ಉಳಿದರು. ಇದರಿಂದ 7 ವಿಕೆಟ್ ಕಳೆದುಕೊಂಡ ಚೆನ್ನೈ 172 ರನ್ ಕಲೆ ಹಾಕಿತ್ತು. ಗುಜರಾತ್ ಪರ ಶಮಿ ಮತ್ತು ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ರಶೀದ್ ಖಾನ್, ದರ್ಶನ್ ನಲ್ಕಂಡೆ, ಮತ್ತು ನೂರ್ ಅಹ್ಮದ್ ಒಂದೊಂದು ವಿಕೆಟ್ ಪಡೆದರು.
173 ರನ್ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ವೃದ್ಧಿಮಾನ್ ಸಹಾ 12 ರನ್ಗೆ ವಿಕೆಟ್ ಒಪ್ಪಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೂಡ ಕೇವಲ8 ರನ್ ಗಳಿಸಿ ನಿರ್ಗಮಿಸಿದರು. ದಾಸುನ್ ಶನಕ 17 ರನ್ ಕಲೆ ಹಾಕಿದರೆ, ಡೇವಿಡ್ ಮಿಲ್ಲರ್ 4 ರನ್ಗೆ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೆ 42 ರನ್ ಗಳಿಸಿ ಆಡುತ್ತಿದ್ದ ಶುಭಮಾನ್ ಗಿಲ್ ನಿರ್ಗಮಿಸಿದರು. ಇದರಿಂದ 13.1 ಓವರ್ನಲ್ಲಿ 88 ರನ್ ಗಳಿಸಿ ಗುಜರಾತ್ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
-
𝗔𝗻𝗼𝘁𝗵𝗲𝗿 𝗙𝗶𝗻𝗮𝗹 🙌@ChennaiIPL enter the #TATAIPL Final for a record 10th time! 🥳#TATAIPL | #Qualifier1 | #GTvCSK pic.twitter.com/f5nfAfMc7X
— IndianPremierLeague (@IPL) May 23, 2023 " class="align-text-top noRightClick twitterSection" data="
">𝗔𝗻𝗼𝘁𝗵𝗲𝗿 𝗙𝗶𝗻𝗮𝗹 🙌@ChennaiIPL enter the #TATAIPL Final for a record 10th time! 🥳#TATAIPL | #Qualifier1 | #GTvCSK pic.twitter.com/f5nfAfMc7X
— IndianPremierLeague (@IPL) May 23, 2023𝗔𝗻𝗼𝘁𝗵𝗲𝗿 𝗙𝗶𝗻𝗮𝗹 🙌@ChennaiIPL enter the #TATAIPL Final for a record 10th time! 🥳#TATAIPL | #Qualifier1 | #GTvCSK pic.twitter.com/f5nfAfMc7X
— IndianPremierLeague (@IPL) May 23, 2023
ನಂತರದಲ್ಲಿ ರಾಹುಲ್ ತೆವಾಟಿಯಾ ಸಹ ಕೇವಲ 3 ರಅಂತಿಮ ಎಸೆತದಲ್ಲಿ ಮೊಹಮ್ಮದ್ ಶಮಿ ವಿಕೆಟ್ ಪತನದೊಂದಿಗೆ ಗುಜರಾತ್ ಟೈಟಾನ್ಸ್ 157 ರನ್‌ಗ ಆಲೌಟ್ ಆಯಿತು. ಸಿಎಸ್‌ಕೆ 15 ರನ್ ಗೆಲುವು ದಾಖಲಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ.
ನ್ಗೆ ಔಟಾದರು. ಇದರ ನಡುವೆ ವಿಜಯ್ ಶಂಕರ್ ಮತ್ತು ರಶೀದ್ ಖಾನ್ ಸ್ವಲ್ಪ ಹೋರಾಟ ನಡೆಸಿದರು. ಆದರೆ, ವಿಜಯ್ 14 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ದರ್ಶನ್ ನಲ್ಕಂಡೆ ಶೂನ್ಯಕ್ಕೆ ರನ್ ಔಟ್ ಬಲೆಗೆ ಬಿದ್ದರು. ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಸಮೇತ ರಶೀದ್ ಖಾನ್ 30 ರನ್ ಬಾರಿಸಿ ಔಟಾದರು. ಕೊನೆಯಲ್ಲಿ ನೂರ್ ಅಹ್ಮದ್ ಅಜೇಯ 7 ರನ್ ಮತ್ತು ಮೊಹಮ್ಮದ್ ಶಮಿ 5 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ 20 ಓವರ್ಗಳಲ್ಲಿ 157 ರನ್ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತ್ತು.
ಚೆನ್ನೈ ಪರ ದೀಪಕ್ ಚಹಾರ್, ಮಹೇಶ್ ತೀಕ್ಷ್ಣ, ರವೀಂದ್ರ ಜಡೇಜಾ, ಮತೀಶ ಪತಿರಣ ತಲಾ ಎರಡು ವಿಕೆಟ್ ಪಡೆದರೆ, ತುಷಾರ್ ದೇಶಪಾಂಡೆ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣವಾದರು. ಇದರೊಂದಿಗೆ ಚೆನ್ನೈ 15 ರನ್ ಗೆಲುವು ದಾಖಲಿಸಿ ನೇರವಾಗಿ ಫೈನಲ್ ಪ್ರವೇಶಿಸಿತು. ಪಂದ್ಯದಲ್ಲಿ ಸೋತಿರುವ ಗುಜರಾತ್ಗೆ ಮೇ 26ರಂದು 2ನೇ ಕ್ವಾಲಿಫೈಯರ್ ಅವಕಾಶ ಇದೆ. ಮೇ 24ರಂದು ಲಖನೌ ಮತ್ತು ಮುಂಬೈ ಮುಖಾಮುಖಿಯಾಗಲಿದ್ದು, ಇಲ್ಲಿ ಗೆದ್ದ ತಂಡ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ.