ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ 16ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ಫಾಫ್ ಡು ಪ್ಲೆಸಿಸ್ ಉದ್ಯಾನ ನಗರಿಗೆ ಆಗಮಿಸಿದ್ದು ತಂಡ ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ SA20 ಮೊದಲ ಆವೃತ್ತಿಯ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಂಡಿದ್ದ ಫಾಪ್, ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ್ದರು.
ಈ ತಂಡವನ್ನು ಸೆಮಿಫೈನಲ್ ವರೆಗೂ ಕೊಂಡೊಯ್ದಿದ್ದರು. ಇದೀಗ ಐಪಿಎಲ್ನಲ್ಲಿ ಆರ್‌ಸಿಬಿ ತಂಡ ಮುನ್ನಡೆಸಲಿದ್ದು ಕಪ್ ಮೇಲೆ ಫಾಪ್ ತಂಡ ಕಣ್ಣಿಟ್ಟಿದೆ. ಕಳೆದ ವರ್ಷ ವಿರಾಟ್ ಕೊಹ್ಲಿಯಿಂದ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡ ದಕ್ಷಿಣ ಆಫ್ರಿಕಾದ ಆಟಗಾರ ತಂಡವನ್ನು ನಾಲ್ಕನೇ ಸ್ಥಾನಕ್ಕೆ ಕೊಂಡೊಯ್ದಿದ್ದರು.
ಬೆಂಗಳೂರು ತಲುಪಿದ ನಂತರ ಹರ್ಷ ವ್ಯಕ್ತಪಡಿಸಿರುವ ಫಾಪ್, "ಬೆಂಗಳೂರಿಗೆ ಮರಳಿರುವುದು ನನಗೆ ಸಂತಸ ತಂದಿದೆ. ಕಳೆದ ಸೀಸನ್‌ನಲ್ಲಿ ಇಲ್ಲಿಯ ಪ್ರೇಕ್ಷಕರ ಹರ್ಷೋದ್ಗಾರ ಅನುಭವಿಸಲು ಆಗಿರಲಿಲ್ಲ. ಈ ವರ್ಷ ಉತ್ಸುಕನಾಗಿದ್ದೇನೆ. ಈ ಬಾರಿ ಜನರಿಂದ ತುಂಬಿರುವ ಕ್ರೀಡಾಂಗಣದಲ್ಲಿ ಆಟ ಆಡುತ್ತೇವೆ. ಇದಕ್ಕಾಗಿಯೇ ನಾನು ಕಾಯುತ್ತಿದ್ದೇನೆ" ಎಂದು ಹೇಳಿರುವ ವಿಡಿಯೋವನ್ನು ಆರ್‌ಸಿಬಿ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ. ದ.ಆಫ್ರಿಕಾದ ಮಾಜಿ ನಾಯಕ ಡು ಪ್ಲೆಸಿಸ್ ಅವರನ್ನು 2022ರ ಹರಾಜಿನಲ್ಲಿ ಆರ್‌ಸಿಬಿ 7 ಕೋಟಿ ರೂಗೆ ಖರೀದಿಸಿದೆ.
-
Captain Faf is HOME! 😎
— Royal Challengers Bangalore (@RCBTweets) March 22, 2023 " class="align-text-top noRightClick twitterSection" data="
Leading from the front, captain Faf du Plessis arrives in Bengaluru and speaks about his current form, wanting to experience the support of 12th Man Army at the Chinnaswamy and more…#PlayBold #ನಮ್ಮRCB #IPL2023 @faf1307 pic.twitter.com/3T3kgdWXTe
">Captain Faf is HOME! 😎
— Royal Challengers Bangalore (@RCBTweets) March 22, 2023
Leading from the front, captain Faf du Plessis arrives in Bengaluru and speaks about his current form, wanting to experience the support of 12th Man Army at the Chinnaswamy and more…#PlayBold #ನಮ್ಮRCB #IPL2023 @faf1307 pic.twitter.com/3T3kgdWXTeCaptain Faf is HOME! 😎
— Royal Challengers Bangalore (@RCBTweets) March 22, 2023
Leading from the front, captain Faf du Plessis arrives in Bengaluru and speaks about his current form, wanting to experience the support of 12th Man Army at the Chinnaswamy and more…#PlayBold #ನಮ್ಮRCB #IPL2023 @faf1307 pic.twitter.com/3T3kgdWXTe
31 ರಿಂದ ಚುಟುಕು ಕ್ರಿಕೆಟ್ ಶುರು: ಮಾರ್ಚ್ 31ರಿಂದ 16ನೆ ಆವೃತ್ತಿಯ ಐಪಿಎಲ್ ಚುಟುಕು ಕ್ರಿಕೆಟ್ ಸಂಭ್ರಮ ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ 15ನೇ ಆವೃತ್ತಿಯ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಲಿವೆ. 70 ಪಂದ್ಯಗಳನ್ನೊಳಗೊಂಡ ಲೀಗ್ ಮೇ 28 ಕ್ಕೆ ಮುಕ್ತಾಯಗೊಳ್ಳಲಿದೆ.
ಕೆಲವು ತಂಡಗಳಿಗೆ ಗಾಯದ ಬರೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿಲ್ ಜಾಕ್ಸ್ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸ್ನಾಯು ನೋವಿಗೆ ಒಳಗಾಗಿದ್ದು ಬದಲಿ ಆಟಗಾರನಾಗಿ ನ್ಯೂಜಿಲೆಂಡ್ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್‌ರನ್ನು ಘೋಷಣೆ ಮಾಡಿದೆ. ಇನ್ನುಳಿದಂತೆ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಗಾಯಾಳು ಆಟಗಾರರ ಬದಲಿ ಆಟಗಾರರನ್ನು ಇನ್ನೂ ಘೋಷಿಸಿಲ್ಲ.
ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದು, ಝೈ ರಿಚರ್ಡ್ಸನ್ ಕೂಡ ಮಂಡಿರಜ್ಜು ಗಾಯದಿಂದ ಹೊರಗುಳಿದಿದ್ದಾರೆ. ಈ ಇಬ್ಬರ ಸ್ಥಾನಕ್ಕೆ ಬದಲಿ ಆಟಗಾರರನ್ನು ಮುಂಬೈ ಘೋಷಿಸಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದು ಐಪಿಎಲ್ ನಿಂದ ದೂರ ಉಳಿದಿದ್ದಾರೆ. ಅಲ್ಲದೇ ಅನ್ರಿಚ್ ನಾರ್ಟ್ಜೆ ಮತ್ತು ಸರ್ಫರಾಜ್ ಖಾನ್ ಕೂಡ ಗಾಯದ ಕಾರಣದಿಂದ ಲೀಗ್ನಲ್ಲಿ ಪಾಲ್ಗೊಳ್ಳುತ್ತಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್‌ನ ಬೆನ್ ಸ್ಟೋಕ್ಸ್ ಮೊಣಕಾಲಿನ ಗಾಯದಿಂದ ಲೀಗ್ನಿಂದ ಹೊರಗುಳಿದಿದರೆ, ಕೈಲ್ ಜೇಮಿಸನ್ ಬೆನ್ನಿನ ಗಾಯದಿಂದ ಬಳಲುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಸ್ಟಾರ್ ಬೌಲರ್ ಪ್ರಸಿದ್ಧ್ ಕೃಷ್ಣ ಬದಲಿ ಆಟಗಾರನನ್ನು ರಾಜಸ್ಥಾನ್ ರಾಯಲ್ಸ್ ಹುಡುಕುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಟಾರ್ ಬ್ಯಾಟರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದಾಗಿ ಅಂತಾರಾಷ್ಟ್ರೀಯ ಪಂದ್ಯಗಳಿಂದ ಭಾಗಿಯಾಗುತ್ತಿಲ್ಲ.
ಇದನ್ನೂ ಓದಿ: IPL ಹೊಸ ನಿಯಮ: ಟಾಸ್ ಬಳಿಕವೂ ಆಟಗಾರರ ಬದಲಾವಣೆಗೆ ಅವಕಾಶ