ETV Bharat / sports

ಪಡಿಕ್ಕಲ್​ ಮಲಿಯಾಳಿ ಎಂದಿದ್ದಕ್ಕೆ ಶಶಿ ತರೂರ್​ಗೆ ತಿರುಗೇಟು ನೀಡಿದ ದೊಡ್ಡ ಗಣೇಶ್ - ದೇವದತ್ತ ಪಡಿಕ್ಕಲ್​

ಸದ್ಯ ಪಡಿಕ್ಕಲ್​ ಶತಕದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್​ ಸಂಸದ ಶಶಿ ತರೂರ್ ಮಾಡಿದ್ದ ಟ್ವೀಟ್​ಗೆ ರಾಜ್ಯದ ಹಿರಿಯ ಕ್ರಿಕೆಟಿಗ ದೊಡ್ಡ ಗಣೇಶ್ ತಿರುಗೇಟು ನೀಡಿದ್ದಾರೆ.

ಶಶಿ ತರೂರ್​ಗೆ ತಿರುಗೆಟು ನೀಡಿದ ದೊಡ್ಡ ಗಣೇಶ್
ಶಶಿ ತರೂರ್​ಗೆ ತಿರುಗೆಟು ನೀಡಿದ ದೊಡ್ಡ ಗಣೇಶ್
author img

By

Published : Apr 24, 2021, 10:54 AM IST

ಹೈದರಾಬಾದ್: ಈ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಕರ್ನಾಟಕದ ಯುವ ಪ್ರತಿಭೆ ದೇವದತ್ತ ಪಡಿಕ್ಕಲ್​ ಶತಕ ಸಿಡಿಸಿ ಮಿಂಚಿದ್ದರು.

  • Well, a lot of people owned Karun Nair after he scored a triple century in 2016 and disowned him after he lost his place. Now the same with Devdutt. Agree, they’re Malyalis. But, Kerala had no role in Karun & Devdutt’s progress as cricketers. They’re Karnataka boys. Period. https://t.co/LbFatnK0lg

    — ದೊಡ್ಡ ಗಣೇಶ್ | Dodda Ganesh (@doddaganesha) April 22, 2021 " class="align-text-top noRightClick twitterSection" data=" ">

ಸದ್ಯ ಈ ಶತಕದ ಬಗ್ಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್​ ಸಂಸದ ಶಶಿ ತರೂರ್ ಮಾಡಿದ್ದ ಟ್ವೀಟ್​ಗೆ ರಾಜ್ಯದ ಹಿರಿಯ ಕ್ರಿಕೆಟಿಗ ದೊಡ್ಡ ಗಣೇಶ್ ತಿರುಗೇಟು ನೀಡಿದ್ದಾರೆ. ಶಶಿ ತರೂರ್​ ತಮ್ಮ ಟ್ವೀಟ್​ ನಲ್ಲಿ 'ಈ ವರ್ಷದ ಐಪಿಎಲ್‌ನಲ್ಲಿ ಎರಡೂ ಶತಕಗಳನ್ನು ಮಲಯಾಳಿಗಳು ಗಳಿಸಿರುವುದು ಹೆಮ್ಮೆಯ ಸಂಗತಿ. ಇಷ್ಟು ಕಾಲ ಕೇರಳವನ್ನು ಕ್ರಿಕೆಟ್‌ನ ಹಿನ್ನೀರು ಎಂದು ಪರಿಗಣಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 100ರ ಗಡಿ ದಾಟಿದ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಲಯಾಳಿಗಳು. ಸಂಜು ಸ್ಯಾಮ್ಸನ್ ಜೊತೆ ಸೇರಿದ ದೇವದತ್ತ ಪಡಿಕ್ಕಲ್ ಅವರಿಗೆ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದರು.

ತರೂರ್ ಟ್ವೀಟ್​ಗೆ ರೀ ಟ್ವೀಟ್​ ಮಾಡಿರುವ ದೊಡ್ಡ ಗಣೇಶ್, '2016ರಲ್ಲಿ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ್ದ ಕರುಣ್ ನಾಯರ್ ಅವರನ್ನ ಕೆಲವರು ತಮ್ಮವರೆಂದು ಹೇಳಿದ್ದರು. ಆದರೆ, ಭಾರತ ತಂಡದಲ್ಲಿ ಅವರು ಸ್ಥಾನ ಕಳೆದುಕೊಂಡಾಗ ಆಗ ಎಲ್ಲಿ ಹೋಗಿದ್ದರು. ಈಗ ದೇವದತ್ತ ಹೆಸರಲ್ಲೂ ಅದೇ ನಡೆಯುತ್ತಿದೆ. ಪಡಿಕ್ಕಲ್​ ಕೇರಳ ಮೂಲದವರು ಎಂಬುದನ್ನು ಒಪ್ಪುತ್ತೇನೆ. ಆದರೆ ಕ್ರಿಕೆಟಿಗರಾಗಿ ಕರುಣ್ ಹಾಗೂ ದೇವದತ್ತ ಅವರನ್ನ ಬೆಳೆಸಿದ್ದರಲ್ಲಿ ಕೇರಳದ ಪಾತ್ರವೇನೂ ಇಲ್ಲ. ಅವರು ಕರ್ನಾಟಕದ ಹುಡುಗರು' ಎಂದು ತಿರುಗೇಟು ನೀಡಿದ್ದಾರೆ.

ಓದಿ : ಹ್ಯಾಟ್ರಿಕ್‌ ಸೋಲಿನ ಬಳಿಕ ಹಳಿಗೆ ಮರಳಿದ ಪಂಜಾಬ್​; ಮುಂಬೈ ವಿರುದ್ಧ 9 ವಿಕೆಟ್‌ಗಳ ಗೆಲುವು

ಕೆ ಎಲ್ ರಾಹುಲ್ ಅವರ ಹೆಸರಿನಲ್ಲಿ ಕಣ್ಣೂರು ಎಂಬುದು ಸೇರಿರುವುದರಿಂದ ಈ ಹಿಂದೆ ಕೆಲವರು ಆತ ಕೇರಳದ ಕಣ್ಣೂರಿನವನು, ಮಲಯಾಳಿ ಎಂದು ಹೇಳಿದ್ದರು. ಆದರೆ, ಕೆ ಎಲ್ ರಾಹುಲ್ ಹಾಸನ ಬಳಿಯ ಕಣ್ಣೂರಿನವರು ಎಂದು ತಿಳಿದಾಗ ಸುಮ್ಮನಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.