ETV Bharat / sports

ಕೂಲ್ ಕ್ಯಾಪ್ಟನ್, ಸಿಎಸ್​ಕೆ ನಾಯಕ ಮಹಿ ಮತ್ತೊಂದು ದಾಖಲೆ.. ಏನದು ವಿಶಿಷ್ಠ ಸಾಧನೆ? - ವಿಕೆಟ್ ಕೀಪಿಂಗ್​ನಲ್ಲಿ ಧೋನಿ ದಾಖಲೆ

ಗುರುವಾರ ನಡೆದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ನಾಯಕ ಧೋನಿ ದಾಖಲೆ ನಿರ್ಮಿಸಿದ್ದಾರೆ.

Dhoni completes 100 IPL catches for CSK as wicket-keeper
ಕೂಲ್ ಕ್ಯಾಪ್ಟನ್ ಮಹಿ ಮತ್ತೊಂದು ದಾಖಲೆ
author img

By

Published : Oct 1, 2021, 8:48 AM IST

ಶಾರ್ಜಾ: ಚೆನ್ನೈ ಸೂಪರ್​ ಕಿಂಗ್ಸ್ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಗುರುವಾರ ಅವರ ದಾಖಲೆಗಳ ಪಟ್ಟಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.

ಗುರುವಾರ ಶಾರ್ಜಾದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ನೂರನೇ ಕ್ಯಾಚ್ ಹಿಡಿಯುವ ಮೂಲಕ ಐಪಿಎಲ್​ನಲ್ಲಿ ವಿಕೆಟ್​​ ಕೀಪಿಂಗ್​ನಲ್ಲಿ ನೂರನೇ ಕ್ಯಾಚ್ ಹಿಡಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಇದೇ ಪಂದ್ಯದಲ್ಲಿ ಮೂರು ಕ್ಯಾಚ್ ಹಿಡಿದಿರುವ ಮಹೇಂದ್ರ ಸಿಂಗ್ ಧೋನಿ ಈವರೆಗೆ 215 ಐಪಿಎಲ್ ಪಂದ್ಯಗಳನ್ನ ಆಡಿದ್ದು, 39 ಸ್ಟಂಪಿಂಗ್ ಮಾಡಿರುವ ದಾಖಲೆಯನ್ನೂ ಕೂಡಾ ಹೊಂದಿದ್ದಾರೆ.

ಇನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಈ ಋತುವಿನ ಐಪಿಎಲ್‌ ಟಿ-20ಯಲ್ಲಿ ಪ್ಲೇ ಆಫ್‌ಗೆ ತಲುಪಿದ ಮೊದಲ ತಂಡವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: IPL 2021: ಹೈದರಾಬಾದ್‌ ವಿರುದ್ಧ ಗೆದ್ದು ಪ್ಲೇ ಆಫ್‌ ಪ್ರವೇಶಿಸಿದ ಸಿಎಸ್‌ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.