ETV Bharat / sports

IPL 2023: ಫಿಲಿಪ್ ಸಾಲ್ಟ್, ಮಾರ್ಷ್ ಶತಕದ ಜೊತೆಯಾಟ ವ್ಯರ್ಥ: ಸನ್​ರೈಸರ್ಸ್​​ಗೆ ಶರಣಾದ ಡೆಲ್ಲಿ - ETV Bharath Karnataka

ಫಿಲಿಪ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಹೋರಾಟದ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಸನ್​ರೈಸರ್ಸ್​​ ಹೈದರಾಬಾದ್​ಗೆ ಶರಣಾಗಿದೆ.

IPL 2023
IPL 2023
author img

By

Published : Apr 29, 2023, 7:18 PM IST

Updated : Apr 30, 2023, 12:31 AM IST

ನವದೆಹಲಿ: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಂದು ಸೋಲು ಕಂಡಿದೆ. ತಾನು ಆಡಿದ್ದ ಏಳು ಪಂದ್ಯ ಪೈಕಿ ಆರಂಭದ ಐದು ಪಂದ್ಯಗಳ ಸೋತು, ಕಳೆದ ಎರಡು ಪಂದ್ಯಗಳನ್ನು ಗೆದ್ದಿದ್ದ ಹೈದರಾಬಾದ್​ ಶನಿವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್​ಗೆ 9 ರನ್‌ಗಳಿಂದ ಶರಣಾಗಿದೆ.

ಇಲ್ಲಿನ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಸನ್ ರೈಸರ್ಸ್ 6 ವಿಕೆಟ್ ನಷ್ಟಕ್ಕೆ 197 ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಆರು ವಿಕೆಟ್ ನಷ್ಟಕ್ಕೆ 188 ರನ್ ಗಳಿಸಲಷ್ಟೇ ಶಕ್ತವಾಯಿತು. ಫಿಲಿಪ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಜೊತೆಯಾಟದಿಂದ ಡೆಲ್ಲಿಗೆ ಜಯ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸತತವಾಗಿ ವಿಕೆಟ್​ಗಳು ಕಳೆದುಕೊಂಡಿದ್ದು ತಂಡಕ್ಕೆ ಹಿನ್ನಡೆಯಾಯಿತು.

ಡೆಲ್ಲಿ ತಂಡಕ್ಕೆ ಆಘಾತಕಾರಿ ಆರಂಭ ಸಿಕ್ಕಿತು. ನಾಯಕ ಡೇವಿಡ್ ವಾರ್ನರ್ (0) ಭುವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಆದರೆ, ನಂತರ ಫಿಲಿಪ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಶತಕದ ಜೊತೆಯಾಟ ನೀಡಿದರು. ಇವರಿಬ್ಬರ ಅದ್ಭುತ ಬ್ಯಾಟಿಂಗ್​ ಪ್ರದರ್ಶನದಿಂದ ಡೆಲ್ಲಿ 10 ಓವರ್​​ಗಳಲ್ಲಿ ನೂರು ರನ್ ದಾಟಿತು. ಸಾಲ್ಟ್ 29 ಎಸೆತಗಳಲ್ಲಿ ಮತ್ತು ಮಾರ್ಷ್ 28 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿದರು.

12ನೇ ಓವರ್‌ನ ಎರಡನೇ ಎಸೆತದಲ್ಲಿ ಸಾಲ್ಟ್‌ ಔಟ್​ ಮಾಡುವ ಮೂಲಕ ಮಯಾಂಕ್ ಮಾರ್ಕಾಂಡೆ ಈ ಜೊತೆಯಾಟವನ್ನು ಮುರಿದರು. 35 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 59 ರನ್ ಗಳಿಸಿದ್ದ ಸಾಲ್ಟ್ ಬೌರಲ್​ ಮಯಾಂಕ್ ಮಾರ್ಕಂಡೆಗೆ ಕ್ಯಾಚ್ ನೀಡಿದರು. ಮಾರ್ಷ್ - ಸಾಲ್ಟ್ ಎರಡನೇ ವಿಕೆಟ್‌ಗೆ 112 ರನ್ ಸೇರಿಸಿದರು. ಆದರೆ, ನಂತರದ ಓವರ್‌ನಲ್ಲೇ ಮಾರ್ಷ್ ಕೂಡ ವಿಕೆಟ್​ ಒಪ್ಪಿಸಿದರು. 39 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 6 ಸಿಕ್ಸರ್‌ಗಳೊಂದಿಗೆ 63 ರನ್ ಗಳಿಸಿದ್ದ ಮಾರ್ಷ್ ಅವರನ್ನು ಅಕೆಲ್ ಹೊಸೈನ್ ಔಟ್ ಮಾಡಿದರು.

ಬಳಿಕ ಬಂದ ಮನೀಷ್ ಪಾಂಡೆ (1) ಮತ್ತು ಪ್ರಿಯಮ್ ಗಾರ್ಗ್ (12) ಬೇಗನೇ ಪೆವಿಲಿಯನ್​​ ಸೇರಿದರು. ಇದರಿಂದ 15.4 ಓವರ್‌ಗಳಲ್ಲಿ ಐದು ವಿಕೆಟ್​ ಕಳೆದುಕೊಂಡು 140ಕ್ಕೆ ಕುಸಿಯಿತು. ಸರ್ಫರಾಜ್ ಖಾನ್ ( 9) ಕೂಡ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ಡೆಲ್ಲಿಗೆ 18 ಎಸೆತಗಳಲ್ಲಿ 48 ರನ್ ಬೇಕಾಗಿತ್ತು. ಆಗ ಕ್ರೀಸ್​ಗೆ ಬಂದ ಅಕ್ಷರ್ ಪಟೇಲ್ ಮತ್ತು ರಿಪಾಲ್ ಪಟೇಲ್ ತಂಡಕ್ಕೆ ರಕ್ಷಣಾತ್ಮಕ ಆಟವಾಡರೂ ಡೆಲ್ಲಿ 188 ರನ್​ಗೆ ತನ್ನ ಇನ್ನಿಂಗ್​ ಅಂತ್ಯಗೊಳಿಸಿತು. ಇದರಿಂದ 9 ರನ್​ನಿಂದ ಸನ್​ರೈಸರ್ಸ್​ ಗೆಲುವು ದಾಖಲಿಸಿತು.

ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 29 ಮತ್ತು ರಿಪಾಲ್ ಪಟೇಲ್ 8 ಎಸೆತಗಳಲ್ಲಿ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಸನ್‌ರೈಸರ್ಸ್ ಪರ ಮಯಾಂಕ್ ಮಾರ್ಕಾಂಡೆ ಎರಡು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಅಕೇಲ್ ಹೊಸೈನ್, ಟಿ ನಟರಾಜನ್ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಹೈದರಾಬಾದ್​ ಇನ್ಸಿಂಗ್ದ್​: ಇದಕ್ಕೂ ಮುನ್ನ ಸನ್​​ ರೈಸರ್ಸ್​ ಬ್ಯಾಟಿಂಗ್​ ವೈಲಫ್ಯದ ನಡುವೆಯೂ ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಅರ್ಧಶತಕದ ಸಹಾಯದಿಂದ 197 ರನ್​ ಸೇರಿಸಿತ್ತು. ಹೈದರಾಬಾದ್​ ತಂಡಕ್ಕೆ ಅನುಭವಿ ಇಶಾಂತ್​ ಶರ್ಮಾ ಆರಂಭಿಕ ಆಘಾತ ನೀಡಿದರು. 5 ರನ್​​ ಗಳಿಸಿದ್ದ ಮಯಾಂಕ್​ ಅಗರ್ವಾಲ್​ ಬೇಗ ವಿಕೆಟ್​ ಒಪ್ಪಿಸಿದರು. ರಾಹುಲ್​ ತ್ರಿಪಾಠಿ 10 ರನ್​ಗೆ ಔಟ್​ ಆದರೆ, ನಾಯಕ ಐಡೆನ್ ಮಾರ್ಕ್ರಾಮ್ 8 ಮತ್ತು ಹ್ಯಾರಿ ಬ್ರೂಕ್​ ಶೂನ್ಯಕ್ಕೆ ಪೆವಿಲಿಯನ್ ದಾರಿ ಹಿಡಿದರು.

ಒಂದೆಡೆ ವಿಕೆಟ್​ ನಷ್ಟವಾಗುತ್ತಿದ್ದರೂ ಅಭಿಷೇಕ್ ಶರ್ಮಾ ತಮ್ಮ ಅಬ್ಬರದ ಆಟವನ್ನು ಮುಂದುವರೆಸಿದ್ದರು. 36 ಬಾಲ್​ ಎದುರಿಸಿ 1 ಸಿಕ್ರರ್​​ ಮತ್ತು 12 ಬೌಂಡರಿಯಿಂದ 67 ರನ್​ ಕಲೆಹಾಕಿ ವಿಕೆಟ್​ ಒಪ್ಪಿಸಿದರು. ನಂತರ ಬಂದಿದ್ದ ಅಬ್ದುಲ್​ ಸಮದ್​ 21 ಬಾಲ್​ನಲ್ಲಿ 28 ರನ್​ ಗಳಿಸಿ ಚುಟುಕು ಇನ್ನಿಂಗ್ಸ್​ ಕಟ್ಟಿದರು. ಹೆನ್ರಿಚ್ ಕ್ಲಾಸೆನ್ 27 ಎಸೆತದಲ್ಲಿ 4 ಸಿಕ್ಸರ್​​ ಮತ್ತು 2 ಬೌಂಡರಿಯಿಂದ ಅಜೇಯ 53 ರನ್​ ಗಳಿಸಿದರು. ಅವರ ಜೊತೆಗೆ ಪಾದಾರ್ಪಣೆ ಮಾಡಿದ ಆಟಗಾರ ಅಕೇಲ್ ಹೊಸೈನ್ ಅಜೇಯರಾಗಿ 16 ರನ್​ ಗಳಿಸಿದರು. ಡೆಲ್ಲಿ ಪರ ವಿಚೆಲ್​ ಮಾರ್ಷ್​ 4 ವಿಕೆಟ್​ ಪಡೆದರೆ, ಅಕ್ಷರ್​ ಪಟೇಲ್​ ಮತ್ತು ಇಶಾಂತ್​ ಶರ್ಮಾ ತಲಾ ಒಂದು ವಿಕೆಟ್​ ಪಡೆದರು. ಈ ಪಂದ್ಯದ ಗೆಲುವಿನಿಂದ ಹೈದರಾಬಾದ್​ ಟೂರ್ನಿಯಲ್ಲಿ ತಾನು ಆಡಿದ 8 ಪಂದ್ಯಗಳ ಪೈಕಿ ಮೂರು ಪಂದ್ಯ ಗೆದ್ದಂತಾಗಿದೆ.

ಇದನ್ನೂ ಓದಿ:KKR vs GT: ಗುಜರಾತ್​ ಗೆಲುವಿಗೆ 180 ರನ್​ ಗುರಿ ನೀಡಿದ ಕೋಲ್ಕತ್ತಾ ನೈಟ್​ ರೈಡರ್ಸ್​

Last Updated : Apr 30, 2023, 12:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.