ETV Bharat / sports

CSK vs DC: ಟಾಸ್​ ಗೆದ್ದ ಚೆನ್ನೈ ಬ್ಯಾಟಿಂಗ್​ ಆಯ್ಕೆ: ಪ್ಲೇ ಆಫ್​ ಪ್ರವೇಶ ಪಡೆಯುತ್ತಾ ತಲೈವಾ ಪಡೆ? - ಟಾಸ್​ ಗೆದ್ದ ಚೆನ್ನೈ ಬ್ಯಾಟಿಂಗ್​ ಆಯ್ಕೆ

ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ 16ನೇ ಆವೃತ್ತಿಯ ಐಪಿಎಲ್​ನ 67ನೇ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಚೆನ್ನೈ ನಾಯಕ ಧೋನಿ ಮೊದಲು ಬೌಲಿಂಗ್​ ಮಾಡುವಂತೆ ಡೆಲ್ಲಿಗೆ ಆಹ್ವಾನಿಸಿದ್ದಾರೆ.

Etv Bharat
Etv Bharat
author img

By

Published : May 20, 2023, 3:24 PM IST

ದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್​ ಲೀಗ್​ನ 16ನೇ ಆವೃತ್ತಿಯ 67ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ (ಡಿಸಿ) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ಮುಖಾಮುಖಿಯಾಗಿತ್ತಿವೆ. ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ಮೊದಲು ಬ್ಯಾಟಿಂಗ್​ ಮಾಡಿಕೊಂಡಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ಈ ಪಂದ್ಯವನ್ನು ಗೆದ್ದರೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲಿದೆ. ಈ ಮೂಲಕ ತವರು ಮೈದಾನದಲ್ಲಿ ನಡೆಯುವ ಕ್ವಾಲಿಫೈಯರ್​ - 1 ನ್ನು ಆಡಲು ಎದುರು ನೋಡುತ್ತಿದೆ. ಲೀಗ್​ನ ಕೊನೆಯ ಪಂದ್ಯವನ್ನು ಉಭಯ ತಂಡಗಳು ಆಡುತ್ತಿದ್ದು, ಇಂದು ಚೆನ್ನೈ ಗೆದ್ದಲ್ಲಿ ಪ್ಲೇ ಆಫ್ ಅಧಿಕೃತ ಪ್ರವೇಶ ಪಡೆಯಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್​ನ ವಿರುದ್ಧ ಚೆನ್ನೈ ಸೋಲನುಭವಿಸಿದ್ದು, ಪ್ಲೇ ಆಫ್​ ಪ್ರವೇಶ ಕಾಯ್ದಿರಿಸಿತ್ತು. ಇಂದು ಚೆನ್ನೈ ಸೋತಲ್ಲಿ ಸಂಜೆ ನಡೆಯುವ ಪಂದ್ಯದಲ್ಲಿ ಲಕ್ನೋ ಗೆದ್ದರೆ ಎರಡನೇ ಸ್ಥಾನ ಪಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್​ ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಈಗಾಗಲೇ ಲೀಗ್​ನಿಂದ ಹೊರಬಿದ್ದಿದೆ. ಆದರೆ ಕಳೆದ ಪಂದ್ಯದಲ್ಲಿ ಡೇವಿಡ್​ ವಾರ್ನರ್​, ಫೃಥ್ವಿ ಶಾ ಮತ್ತು ಸಾಲ್ಟ್​ ಉತ್ತಮ ಪ್ರದರ್ಶನ ನೀಡಿ ಪಂಜಾಬ್​ ಕಿಂಗ್ಸ್​​ ಮಣಿಸಿತ್ತು. ಡೆಲ್ಲಿ ಲೀಗ್​ನಿಂದ ಹೊರ ಬಿದ್ದರೂ ಔಪಚಾರಿಕ ಪಂದ್ಯದಲ್ಲಿ ತಮ್ಮ ಬೆಸ್ಟ್​ ನೀಡಿತ್ತಿದ್ದು, ಎದುರಾಳಿಗೆ ಕಾಡುತ್ತಿದ್ದಾರೆ. ಇಂದರಿಂದ ಇಂದು ಚೆನ್ನೈ ತವರು ನೆಲದಲ್ಲಿ ಕಟ್ಟಿ ಹಾಕುವ ಚಿಂತನೆಯಲ್ಲಿದೆ ವಾರ್ನರ್​ ಪಾಳಯ.

13 ಪಂದ್ಯವನ್ನು ಆಡಿರುವ ಚೆನ್ನೈ 7 ಪಂದ್ಯ ಗೆದ್ದು ಒಂದು ರದ್ದಾದ ಹಿನ್ನಲೆ ಒಟ್ಟು 15 ಅಂಕಗಳನ್ನು ಗಳಿಸಿದೆ. ಮೂರನೇ ಸ್ಥಾನದಲ್ಲಿ ಲಕ್ನೋ ಕೂಡಾ 15 ಅಂಕಗಳನ್ನು ಹೊಂದಿದ್ದು ರನ್​ ರೇಟ್​ ಮಾತ್ರ ಕಡಿಮೆ ಇದೆ. ಚೆನ್ನೈ ಈ ಪಂದ್ಯ ಸೋತಲ್ಲಿ ಎರಡನೇ ಸ್ಥಾನ ಕಳೆದು ಕೊಳ್ಳುವ ಸಾಧ್ಯತೆ ಇದೆ. ದ್ವಿತೀಯ ಸ್ಥಾನಕ್ಕಾಗಿ ಲಕ್ನೋ ಮತ್ತು ಆರ್​ಸಿಬಿ ರೇಸ್​ನಲ್ಲಿದೆ.

ಮೇ 10 ರಂದು ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸೋಲನುಭವಿಸಿತ್ತು. ಚೆನ್ನೈ ಸೂಪರ್​ ಕಿಂಗ್ಸ್​ ನೀಡಿದ್ದ 167 ರನ್​ ಸ್ಪರ್ಧಾತ್ಮಕ ಗುರಿಯನ್ನು ಬೆನ್ನು ಹತ್ತಿದ್ದ ಡೆಲ್ಲಿ, ನಿಗದಿತ ಓವರ್​ ಅಂತ್ಯಕ್ಕೆ 140 ರನ್​ ಮಾತ್ರ ಗಳಿಸಿ 27 ರನ್​ ಸೋಲನುಭವಿಸಿತ್ತು. ಆ ಪಂದ್ಯದಲ್ಲಿ ರಿಲೆ ರುಸ್ಸೋವ್​ 37 ರನ್​ ಗಳಿಸಿದ್ದೇ ಬೃಹತ್​ ಮೊತ್ತವಾಗಿತ್ತು. ಆದರೆ ಅತ್ತ ಮೊದಲು ಬ್ಯಾಟಿಂಗ್​ ಮಾಡಿದ್ದ ಚೆನ್ನೈ 6 ಬ್ಯಾಟರ್​​ಗಳ 20 ರನ್​ ಸಹಾಯದಿಂದ 167 ರನ್​ ಕಲೆಹಾಕಿತ್ತು. ಇದರಿಂದ ಡೆಲ್ಲಿ ಚೆನ್ನೈ ಮೇಲೆ ಬೌಲಿಂಗ್​ ನಿಯಂತ್ರಣ ಸಾಧಿಸುವ ಸಾಧ್ಯತೆ ಇದೆ.

ತಂಡಗಳು ಇಂತಿವೆ..: ಡೆಲ್ಲಿ ಕ್ಯಾಪಿಟಲ್ಸ್​: ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್(ವಿಕೆಟ್​ ಕೀಪರ್​), ರಿಲೀ ರೋಸೊವ್, ಯಶ್ ಧುಲ್, ಅಮನ್ ಹಕೀಮ್ ಖಾನ್, ಅಕ್ಸರ್ ಪಟೇಲ್, ಲಲಿತ್ ಯಾದವ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ

ಚೆನ್ನೈ ಸೂಪರ್​ ಕಿಂಗ್ಸ್​​: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ / ವಿಕೆಟ್​ ಕೀಪರ್​), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ಇದನ್ನೂ ಓದಿ: ಪಂಜಾಬ್​ ವಿರುದ್ಧ ರಾಜಸ್ಥಾನ ರಾಯಲ್ಸ್​ಗೆ​ ಗೆಲುವು: ಸೋಲಿನೊಂದಿಗೆ ಐಪಿಎಲ್​ನಿಂದ ಹೊರಬಿದ್ದ ಕಿಂಗ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.