ETV Bharat / sports

ವಾರ್ನರ್ ಪಾಲಿಗೆ ಮೇ.16 ಕರಾಳ.. 9 ವರ್ಷದ ಹಿಂದೆ ಇದೇ ದಿನ 'ಗೋಲ್ಡನ್ ಡಕ್'​ ಆಗಿದ್ದ ಎಡಗೈ ಬ್ಯಾಟರ್​!

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಬ್ಯಾಟ್​ ಬೀಸುತ್ತಿರುವ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್​ ಗೋಲ್ಡನ್ ಡಕ್​​ ಆಗಿದ್ದಾರೆ. ಈ ಮೂಲಕ ಮೇ.16 ವಾರ್ನರ್​​ ಜೀವನದಲ್ಲಿ ಕರಾಳ ದಿನ ಎಂಬುದು ಮತ್ತೊಮ್ಮೆ ಸಾಬೀತುಗೊಂಡಿದೆ.

David Warner
David Warner
author img

By

Published : May 16, 2022, 10:53 PM IST

Updated : May 17, 2022, 12:02 AM IST

ಮುಂಬೈ: ಇಂಡಿಯನ್​​ ಪ್ರೀಮಿಯರ್ ಲೀಗ್​​ನಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಪಂಜಾಬ್ ಕಿಂಗ್ಸ್​ ಮುಖಾಮುಖಿಯಾಗಿವೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆರಂಭಿಕ ಆಟಗಾರ ವಾರ್ನರ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್​ ಬಲೆಗೆ ಬಿದ್ದರು. ಈ ಮೂಲಕ 9 ವರ್ಷಗಳ ನಂತರ ಐಪಿಎಲ್​​ನಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್​ ಒಪ್ಪಿಸಿದ್ದಾರೆ.

ನವೀ ಮುಂಬೈನ ಡಿವೈ ಪಾಟೀಲ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡದ ಲಿವಿಂಗ್​​ಸ್ಟೋನ್​ ಎಸೆದ ಮೊದಲ ಎಸೆತದಲ್ಲೇ ಡೇವಿಡ್ ವಾರ್ನರ್​​​ ರಾಹುಲ್​​ ಚಹರ್​ಗೆ ಕ್ಯಾಚ್​ ನೀಡಿ, ನಿರ್ಗಮಿಸಿದರು. 2013ರ ಬಳಿಕ ವಾರ್ನರ್​ ಯಾವುದೇ ಪಂದ್ಯದಲ್ಲಿ ಗೋಲ್ಡನ್ ಡಕ್​ ಆಗಿರಲಿಲ್ಲ. ಆದರೆ, ಇಂದಿನ ಪಂದ್ಯದಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟ್​ ಆದರು.

ಇದನ್ನೂ ಓದಿ: 89ನೇ ಅರ್ಧಶತಕ ಸಿಡಿಸಿ ಟಿ20 ಇತಿಹಾಸದಲ್ಲಿ ಹೊಸ ದಾಖಲೆ ರಚಿಸಿದ ವಾರ್ನರ್‌!

ಇನ್ನು ಐಪಿಎಲ್​ ಇತಿಹಾಸದಲ್ಲಿ ವಾರ್ನರ್​ ಒಟ್ಟು 9 ಸಲ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದು, ಮೂರು ಸಲ ಗೋಲ್ಡನ್ ಡಕ್​​ ಆಗಿದ್ದಾರೆ. ಈ ಹಿಂದೆ 9 ವರ್ಷಗಳ ಹಿಂದೆ ಇದೇ(ಮೇ.16) ದಿನಾಂಕದಂದು ಪಂಜಾಬ್ ತಂಡದ ವಿರುದ್ಧವೇ ವಾರ್ನರ್​ ಗೋಲ್ಡನ್ ಡಕ್​​ ಆಗಿದ್ದರು. ಈ ವೇಳೆ, ಡೆಲ್ಲಿ ತಂಡದ ಪರ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದಿದ್ದ ವಾರ್ನರ್​​ ಸಂದೀಪ್ ಶರ್ಮಾ ಎಸೆದ ಓವರ್​​ನಲ್ಲಿ ಗೋಲ್ಡನ್ ಡಕ್​ ಆಗಿದ್ದರು.

ಪ್ರಸಕ್ತ ಸಾಲಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಬ್ಯಾಟ್​ ಬೀಸುತ್ತಿರುವ ಡೇವಿಡ್ ವಾರ್ನರ್ ಉತ್ತಮ ಫಾರ್ಮ್​​ನಲ್ಲಿದ್ದು, ತಾವು ಆಡಿರುವ 11 ಪಂದ್ಯಗಳಿಂದ 5 ಅರ್ಧಶತಕ ಸೇರಿದಂತೆ 427ರನ್​​ಗಳಿಕೆ ಮಾಡಿದ್ದಾರೆ.

Last Updated : May 17, 2022, 12:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.