ETV Bharat / sports

ಡ್ಯಾನ್ಸ್ ಪೆ ಚಾನ್ಸ್: ವಿರಾಟ್​ ಫಿಟ್​​ನೆಸ್​ಗೆ ಅನುಷ್ಕಾ ನೃತ್ಯ ಸ್ಪರ್ಧೆ - ETV Bharath Kannada news

ಅನುಷ್ಕಾ ಶರ್ಮಾ ಡ್ಯಾನ್ಸ್ ಪೆ ಚಾನ್ಸ್​ನಲ್ಲಿ ವಿರಾಟ್ ಕೊಹ್ಲಿ ಮಣಿಸಿದ್ದಾರೆ.. ಹೇಗೆ ಎಂಬುದು ಇಲ್ಲಿದೆ ನೋಡಿ..

Dance pe Chance gone wrong: Anushka Sharma, Virat Kohli get groovy; watch what happens in the end
ಡ್ಯಾನ್ಸ್ ಪೆ ಚಾನ್ಸ್: ವಿರಾಟ್​ ಫಿಟ್​​ನೆಸ್​ಗೆ ಅನುಷ್ಕಾ ನೃತ್ಯ ಸ್ಪರ್ಧೆ
author img

By

Published : Apr 24, 2023, 5:15 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿ ವಿರಾಟ್ ಕೊಹ್ಲಿಯೊಂದಿಗೆ ಡ್ಯಾನ್ಸ್ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜಿಸಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿರಾಟ್​ ಕೊಹ್ಲಿಯೊಂದಿಗೆ ಡ್ಯಾನ್ಸ್​ ಚಾಲೆಂಜ್​ನಲ್ಲಿ ಗೆದ್ದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಸ್ಟಾರ್​ ಜೋಡಿ ಪಂಜಾಬಿ ಹಾಡೊಂದಕ್ಕೆ ಸ್ಟೆಪ್ ಹಾಕಿದ್ದಾರೆ. ಇದರಲ್ಲಿ ಅನುಷ್ಕಾ ಶರ್ಮಾ ವಿರಾಟ್​ಗೆ ಚಾಲೆಂಜ್​ ಹಾಕಿದ್ದು, ಅದರಲ್ಲಿ ವಿರಾಟ್​ ಸೋಲೊಪ್ಪಿಕೊಂಡಿದ್ದಾರೆ. ವಿರಾಟ್​ ಹೆಚ್ಚು ಹೊತ್ತು ಡ್ಯಾನ್ಸ್​ ಮಾಡಲಾಗದೇ, ಬೇಗ ಕ್ವಿಟ್​ ಮಾಡುತ್ತಾರೆ. ಇದನ್ನು ಕಂಡು ಅನುಷ್ಕಾ ನಗೆ ಬೀರುತ್ತಾರೆ.

16ನೇ ಆವೃತ್ತಿಯಲ್ಲಿ ಆರ್​ಸಿಬಿಯ ತಂಡದ ಜೊತೆಗೆ ಅನುಷ್ಕಾ ಸಹ ಪ್ರಯಾಣ ಬೆಳೆಸುತ್ತಿದ್ದಾರೆ. ಎಲ್ಲ ಪಂದ್ಯದಲ್ಲೂ ಡಗೌಟ್​ನಲ್ಲಿ ನಿಂತು ವಿರಾಟ್​ ಕೊಹ್ಲಿಗೆ ಬೆಂಬಲಿಸುವುದರ ಜೊತೆಗೆ ತಂಡಕ್ಕೆ ಚಿಯರ್​​ ಮಾಡುತ್ತಾರೆ. ನಿನ್ನೆ ಹಸಿರು ಜರ್ಸಿಯಲ್ಲಿ ವಿರಾಟ್​ ನಾಯಕತ್ವದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವು ದಾಖಲಿಸಿತು. ಈ ವೇಳೆ ಅನುಷ್ಕಾ ಪಂದ್ಯ ವೀಕ್ಷಿಸಿದ್ದರು.

ವಿರಾಟ್​ ಕೊಹ್ಲಿ ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ತನಗೆ ಅನುಷ್ಕಾ ಸ್ಪೂರ್ತಿ ಎಂದು ಹೇಳಿಕೊಂಡಿದ್ದರಲ್ಲದೇ, ಸುಮಾರು ಮೂರು ವರ್ಷಗಳ ಕಾಲ ಫಾರ್ಮ್​ನಲ್ಲಿ ವಿರಾಟ್​ ಇರದಿದ್ದಾಗ ಬರುತ್ತಿದ್ದ ಟೀಕೆಗಳಿಂದ ಹೊರ ಬಂದು ಮತ್ತೆ ಲಯಕ್ಕೆ ಮರಳುವಲ್ಲಿ ಅನುಷ್ಕಾಳ ಪಾತ್ರ ದೊಡ್ಡದು ಎಂದು ಹೇಳಿದ್ದಾರೆ. ಹುಚ್ಚನಾಗುತ್ತಿದ್ದ ನನ್ನನ್ನು ತಿದ್ದಿದವಳು ಅನುಷ್ಕಾ ಎಂದು ಹೇಳಿಕೊಂಡಿದ್ದರು.

ವಿರಾಟ್ ಮತ್ತು ಅನುಷ್ಕಾ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯವಾಗಿರುತ್ತಾರೆ. ಆಗಾಗ ಕೆಲ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸ್ಟಾರ್​ ದಂಪತಿ ರಾಜಸ್ಥಾನ ತಂಡದ ಪಂದ್ಯಕ್ಕೂ ಮುನ್ನ ಬೆಂಗಳೂರಿನ ಕೆಲ ಹೋಟೆಲ್​ಗಳಿಗೆ ಬೇಟಿಕೊಟ್ಟಿದ್ದರು. ಇನ್​ಸ್ಟಾಗ್ರಾಂನ ಸ್ಟೋರಿಯಲ್ಲಿ ಈ ಬಗ್ಗೆ ಅನುಷ್ಕಾ ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ವಿರಾಟ್ ಕೊಹ್ಲಿ ಶಕ್ತಿ ಅನುಷ್ಕಾ ಶರ್ಮಾ: ಕ್ರೀಡಾಂಗಣದಲ್ಲಿ ಪತಿ ಹುರಿದುಂಬಿಸಿದ ನಟಿ

ಇನ್​ಸ್ಟಾಗ್ರಾಂನಲ್ಲಿ ಈ ಜೋಡಿ ಡ್ಯಾನ್ಸ್​ನ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅನುಷ್ಕಾ ಶರ್ಮಾ ಬಣ್ಣ ಬಣ್ಣದ ಪ್ರಿಂಟ್‌ಗಳೊಂದಿಗೆ ಸಡಿಲವಾದ ಅರ್ಧ ತೋಳಿನ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಫ್ರೀ-ಸ್ಟೈಲ್​ನ ಜೀನ್ಸ್ ತೊಟ್ಟಿದ್ದಾರೆ. ಇದೇ ರೀತಿಯ ವಸ್ತ್ರದಲ್ಲಿ ವಿರಾಟ್​ ಕೂಡಾ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್​ನಲ್ಲಿ ಫಿಟ್​ ಆಗಿರುವ ವಿರಾಟ್​ ಕೊಹ್ಲಿ ಡ್ಯಾನ್ಸ್​ ಮಾಡುವಾಗ ಕಾಲು ನೋವಿಗೆ ಒಳಗಾಗಿ ನೃತ್ಯ ನಿಲ್ಲಿಸುತ್ತಾರೆ. ಅನುಷ್ಕಾ ಗೆಲುವಿನ ನಗೆಯ ಬೀರುತ್ತಾರೆ.

'ಡ್ಯಾನ್ಸ್ ಪೆ ಚಾನ್ಸ್' ಎಂದು ವಿಡಿಯೋಕ್ಕೆ ಅನುಷ್ಕಾ ಕ್ವಾಪ್ಶನ್​ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಆಗುತ್ತಿದ್ದಂತೆ ಅಭಿಮಾನಿಗಳು ನಾನಾ ಕಮೆಂಟ್​ಗಳನ್ನು ಬರೆದಿದ್ದಾರೆ. ಒಬ್ಬ ಅಭಿಮಾನಿ 'ರಾಜ ಮತ್ತು ರಾಣಿ' ಎಂದು ಮತ್ತೊಬ್ಬ ಅಭಿಮಾನಿ 'ಮೇಡ್ ಫಾರ್ ಈಚ್ ಅದರ್ ಎಂದಿದ್ದಾನೆ. ಜಗತ್ತಿನ ಅತ್ಯುತ್ತಮ ಸೆಲೆಬ್ರಿಟಿ ಜೋಡಿಗಳು.. ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ ಮತ್ತು ನಿಮ್ಮ ಕುಟುಂಬದ ಸದಸ್ಯರನ್ನು ಆಶೀರ್ವದಿಸಲಿ....ಕೀಪ್ ಸ್ಮೈಲಿಂಗ್ ಸಿಸ್ಟರ್.' ಎಂದು ಸಹ ಕಮೆಂಟ್​ಗಳು ಬಂದಿದೆ.

ಇದನ್ನೂ ಓದಿ: ಹುಚ್ಚನಾಗುತ್ತಿದ್ದ ನನ್ನನ್ನು ತಿದ್ದಿದವಳು ಅನುಷ್ಕಾ: ವಿರಾಟ್​ ಮನದಾಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.