ETV Bharat / sports

ಐಪಿಎಲ್​ ಟ್ರೋಫಿಗೆ ವಿಶೇಷ ಪೂಜೆ ಮಾಡಿಸಿದ ಸಿಎಸ್​ಕೆ ಮಾಲೀಕ ಎನ್​ ಶ್ರೀನಿವಾಸ್​

ಅಕಾಲಿಕ ಮಳೆಯ ನಂತರವೂ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಾದ ಬಳಿಕ ಸಿಎಸ್‌ಕೆಯ ಮಾಲೀಕರಾದ ಎನ್ ಶ್ರೀನಿವಾಸನ್ ಅವರು ಆಡಳಿತ ಮಂಡಳಿಯೊಂದಿಗೆ ತಿರುಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ್ದಾರೆ.

CSK performed a special Pooja for IPL Trophy at the Tirupathi Temple
ಐಪಿಎಲ್​ ಟ್ರೋಫಿಗೆ ವಿಶೇಷ ಪೂಜೆ ಮಾಡಿಸಿದ ಸಿಎಸ್​ಕೆ ಮಾಲೀಕ ಎನ್​ ಶ್ರೀನಿವಾಸ್​
author img

By

Published : May 31, 2023, 3:39 PM IST

ನವದೆಹಲಿ: ಐಪಿಎಲ್ 2023ರ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಫೈನಲ್ ಪಂದ್ಯ ಮಳೆಯಿಂದಾಗಿ ಅನೇಕ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. 28 ರಂದು ಭಾನುವಾರ ಅದ್ಧೂರಿಯಾಗಿ ಫೈನಲ್​​ಗೆ ​ಎಲ್ಲ ತಯಾರಿಗಳು ನಡೆದಿದ್ದವು. ಆದರೆ, ವರುಣ ಕೊಂಚವೂ ಬಿಡುವು ನೀಡದ ಹಿನ್ನೆಲೆ ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಲಾಯಿತು. ಮೀಸಲು ದಿನದ ಎರಡನೇ ಇನ್ನಿಂಗ್ಸ್​ ವೇಳೆಯೂ ಮಳೆ ಬಂದು ರಾತ್ರಿ 12 ಗಂಟೆಗೆ ಓವರ್​ ಕಡಿತಗೊಳಿಸಿ ಪಂದ್ಯವನ್ನು ಆಡಿಸಲಾಯಿತು. ಚೆನ್ನೈ ಸೂಪರ್​ ಕಿಂಗ್ಸ್​ ಪಂದ್ಯ ಗೆದ್ದು 5ನೇ ಬಾರಿಗೆ ಐಪಿಎಲ್​ ಟ್ರೋಫಿ ತನ್ನದಾಗಿಸಿಕೊಂಡಿತು.

ಚಾಂಪಿಯನ್ ಆದ ನಂತರ, ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮಾಲೀಕ ಎನ್ ಶ್ರೀನಿವಾಸನ್ ಅವರು ಐಪಿಎಲ್ ಟ್ರೋಫಿಯೊಂದಿಗೆ ತಿರುಪತಿಗೆ ತೆರಳಿ ಪೂಜೆ ಮಾಡಿಸಿದ್ದಾರೆ. ಮಳೆಯ ಸಂಕಷ್ಟಗಳ ನಡುವೆ ಚೆನ್ನೈನ ಬ್ಯಾಟರ್​ಗಳ ಅಬ್ಬರ ಬ್ಯಾಟಿಂಗ್​ನಿಂದ ಒಲಿದ ಪ್ರಶಸ್ತಿಯನ್ನು ದೇವರ ಪಾದದ ಅಡಿ ಇಟ್ಟು ಗೆಲುವು ಸಮರ್ಪಿಸಿದ್ದಾರೆ. ತ್ಯಾಗರಾಯನಗರ ತಿರುಪತಿ ದೇವಸ್ಥಾನದಲ್ಲಿ ಎನ್ ಶ್ರೀನಿವಾಸನ್ ಪೂಜೆ ಮಾಡಿಸಿದ್ದಾರೆ.

ಸಪ್ತಗಿರಿವಾಸ ಮೊರೆಹೋದ ಶ್ರೀನಿವಾಸನ್: ಚೆನ್ನೈ ಫ್ರಾಂಚೈಸಿ ಮಾಲೀಕ ಎನ್ ಶ್ರೀನಿವಾಸನ್ ಅವರು ತಿರುಪತಿಯಲ್ಲಿ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ, ಎನ್ ಶ್ರೀನಿವಾಸನ್ ಅವರು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಜೊತೆಗೆ ಐಪಿಎಲ್ ಟ್ರೋಫಿಯನ್ನು ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಪೂಜೆಯಲ್ಲಿ ಸಿಎಸ್​ಕೆ ಯಾವುದೇ ಆಟಗಾರರು ಕಂಡುಬಂದಿಲ್ಲ.

ಮೀಸಲು ದಿನದಲ್ಲಿ ಪಂದ್ಯದಲ್ಲಿ ಚೆನ್ನೈ ನಾಯಕ ಧೋನಿ ಟಾಸ್​ ಗೆದ್ದು ಮಳೆಯ ಮುನ್ಸೂಚನೆ ಇರುವುದರಿಂದ ಮೊದಲು ಬೌಲಿಂಗ್​ ಮಾಡುವುದಾಗಿ ನಿರ್ಣಯ ತೆಗೆದುಕೊಂಡರು. ಆದರೆ, ತಂಡದಿಂದ ಅದ್ಭುತ ಬೌಲಿಂಗ್​ ಪ್ರದರ್ಶನ ಕಂಡುಬರಲಿಲ್ಲ. ಪ್ಲೇ ಆಫ್​ ಹಂತದ 4ನೇ ಹೆಚ್ಚು ರನ್​ ಗುಜರಾತ್​ ಗಳಿಸಿತ್ತು. ಗಿಲ್​ ಮತ್ತು ಸಹಾ ಮೊದಲ ವಿಕೆಟ್​ 50+ ಜೊತೆಯಾಟ ದಾಖಲಿಸಿದರು. ನಂತರ ಬಂದ ಸಾಯಿ ಸುದರ್ಶನ್​ ಭರ್ಜರಿ ಬ್ಯಾಟಿಂಗ್​ ಮಾಡಿ 96 ರನ್​ ಗಳಿಸಿ 4 ರನಿಂದ ಶತಕ ವಂಚಿತರಾದರು. ಸಹಾ, ಸುದರ್ಶನ್​ ಮತ್ತು ಹಾರ್ದಿಕ್​ ಪಾಂಡ್ಯರ ಬ್ಯಾಟಿಂಗ್ ಬಲದಿಂದ ಗುಜರಾತ್​ ಟೈಟಾನ್ಸ್​ 214 ರನ್​ನ ಬೃಹತ್​ ಗುರಿಯನ್ನು ಕೇವಲ ನಾಲ್ಕು ವಿಕೆಟ್​ ಕಳೆದುಕೊಂಡು ಗಳಿಸಿದ್ದರು.

ಇದನ್ನು ಬೆನ್ನು ಹತ್ತಲು ಸಿಎಸ್​ಕೆ ಮೈದಾನಕ್ಕಿಳಿದು 3 ಬಾಲ್​ ಆಡುತ್ತಿದ್ದಂತೆ ಮಳೆ ಆರಂಭವಾಗಿ ಪಂದ್ಯವನ್ನು ನಿಲ್ಲಿಸಲಾಯಿತು. 9:15 ಕ್ಕೆ ಆರಂಭವಾದ ಮಳೆ ಸುಮಾರು 11 :30 ರ ವರೆಗೆ ಧಾರಾಕಾರವಾಗಿ ಸುರಿದಿದೆ. ಮಳೆ ಬಿಟ್ಟನಂತರ 12 ಗಂಟೆಗೆ ಪಂದ್ಯ ಆರಂಭಿಸಿ ಡಿಎಲ್​ಎಸ್​ ನಿಯಮದಂತೆ 15 ಓವರ್​ಗೆ 171 ರನ್​ ಗುರಿಯನ್ನು ನೀಡಲಾಯಿತು. ಸಿಎಸ್​ಕೆಯ ಕಾನ್ವೆ, ದುಬೆ, ರೆಹಾನೆ, ಜಡೇಜಾ ಅವರ ಬ್ಯಾಟಿಂಗ್​ನಿಂದ ಪಂದ್ಯದ ಗತಿಯನ್ನು ಬದಲಾಯಿಸಿತು. ಕೊನೆಯ ಓವರ್​ನ ಎರಡು ಬಾಲ್​ಗೆ ಹತ್ತು ರನ್​ ಬೇಕಾಗಿದ್ದಾಗ ಜಡೇಜ ಸಿಕ್ಸ್​ ಮತ್ತು ಬೌಡರಿ ಪಡೆದು ಪಂದ್ಯ ಗೆಲ್ಲಿಸಿದ್ದರು. ಈ ಮೂಲಕ ಚೆನ್ನೈ ಮುಂಬೈ ಇಂಡಿಯನ್ಸ್​ನ ದಾಖಲೆಯನ್ನು ಸರಿಗಟ್ಟಿತ್ತು.

ಇದನ್ನೂ ಓದಿ: ಟೆಸ್ಟ್​​ ಚಾಂಪಿಯನ್​ಶಿಪ್​ ಟೀಮ್​ ಸೇರಿಕೊಂಡ ಕ್ಯಾಪ್ಟನ್​ ರೋಹಿತ್​: ಲಂಡನ್​ನಲ್ಲಿ ಅಭ್ಯಾಸ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.