ETV Bharat / sports

ಭಾರತಕ್ಕೆ 37 ಲಕ್ಷ ರೂ ದೇಣಿಗೆ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾ

ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಯು ದೇಣಿಗೆ ನೀಡಿದ ಹಣ (ಅಂದಾಜು 37 ಲಕ್ಷ ರೂ.) ಗಂಭೀರವಾಗಿ ಅನಾರೋಗ್ಯ ಪೀಡಿತ ರೋಗಿಗಳಿಗೆ ಆಮ್ಲಜನಕವನ್ನು ಸಂಗ್ರಹಿಸಲು, ಕೊರೊನಾ ಪೀಡಿತ ಪ್ರದೇಶಗಳಲ್ಲಿ ಪರೀಕ್ಷಾ ಸಾಧನಗಳನ್ನು ಒದಗಿಸಲು ಮತ್ತು ಕೋವಿಡ್​ ಲಸಿಕೆ ಖರೀದಿಗೆ ಸಹಾಯವಾಗಲಿದೆ.

ಕ್ರಿಕೆಟ್ ಆಸ್ಟ್ರೇಲಿಯಾ
ಕ್ರಿಕೆಟ್ ಆಸ್ಟ್ರೇಲಿಯಾ
author img

By

Published : May 3, 2021, 10:21 AM IST

ಮೆಲ್ಬೋರ್ನ್: ಭಾರತಕ್ಕಾಗಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ಸ್ಥಾಪಿಸಿದ ಕೋವಿಡ್ ಬಿಕ್ಕಟ್ಟಿನ ಮನವಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ 37 ಲಕ್ಷ ರೂ ದೇಣಿಗೆ ಪ್ರಕಟಿಸಿದೆ.

ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಯು ದೇಣಿಗೆ ನೀಡಿದ ಹಣ (ಅಂದಾಜು 37 ಲಕ್ಷ ರೂ.) ಗಂಭೀರವಾಗಿ ಅನಾರೋಗ್ಯ ಪೀಡಿತ ರೋಗಿಗಳಿಗೆ ಆಮ್ಲಜನಕವನ್ನು ಸಂಗ್ರಹಿಸಲು, ಕೊರೊನಾ ಪೀಡಿತ ಪ್ರದೇಶಗಳಲ್ಲಿ ಪರೀಕ್ಷಾ ಸಾಧನಗಳನ್ನು ಒದಗಿಸಲು ಮತ್ತು ಕೋವಿಡ್​ ಲಸಿಕೆ ಖರೀದಿಗೆ ಸಹಾಯವಾಗಲಿದೆ.

  • 📻 | Our Interim CEO @HockleyNick will join Gerard Whateley on @WhateleySEN from 11:15am AEST this morning.

    Tune in to hear more about Australian Cricket's support of the India COVID-19 Crisis Appeal.

    — Cricket Australia (@CricketAus) May 3, 2021 " class="align-text-top noRightClick twitterSection" data=" ">

ಆಸ್ಟ್ರೇಲಿಯನ್ನರು ಮತ್ತು ಭಾರತೀಯರು ವಿಶೇಷ ಬಂಧವನ್ನು ಹೊಂದಿದ್ದಾರೆ. ಕ್ರಿಕೆಟ್ ಪ್ರೀತಿ ಆ ಸ್ನೇಹಕ್ಕೆ ಕೇಂದ್ರವಾಗಿದೆ. ಕಳೆದ ವಾರದಲ್ಲಿ ಪ್ಯಾಟ್ ಕಮ್ಮಿನ್ಸ್ ಮತ್ತು ಬ್ರೆಟ್ ಲೀ ದೇಣಿಗೆಗಳಿಂದ ನಾವೆಲ್ಲರೂ ಪ್ರಭಾವಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ.

ಯುನಿಸೆಫ್ ಆಸ್ಟ್ರೇಲಿಯಾದೊಂದಿಗೆ ಪಾಲುದಾರಿಕೆ ಹೊಂದಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಆರೋಗ್ಯ ವ್ಯವಸ್ಥೆಗೆ ಹೆಚ್ಚು ಅಗತ್ಯವಿರುವ ಆಮ್ಲಜನಕ, ಪರೀಕ್ಷಾ ಉಪಕರಣಗಳು ಮತ್ತು ಲಸಿಕೆಗಳನ್ನು ಒದಗಿಸುವ ಮೂಲಕ ಭಾರತದ ಜನರಿಗೆ ಸಹಾಯ ಮಾಡಲು ಹಣ ಸಂಗ್ರಹಿಸುತ್ತೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೆ ಹೇಳಿದ್ದಾರೆ.

ಪ್ಯಾಟ್ ಕಮ್ಮಿನ್ಸ್ ಅವರು ಪಿಎಂ ಕೇರ್ಸ್ ಫಂಡ್‌ಗೆ $ 50,000 ದೇಣಿಗೆ ನೀಡಿದ ಮೊದಲ ಕ್ರಿಕೆಟಿಗರಾಗಿದ್ದರು.

ಇದನ್ನೂ ಓದಿ : ಕೊರೊನಾ ವಾರಿಯರ್ಸ್ ಮೇಲೆ ಆರ್​​ಸಿಬಿ ಪ್ರೀತಿ: ಸಚಿವ ಡಾ.ಸುಧಾಕರ್​ ಪ್ರಶಂಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.