ಚೆನ್ನೈ(ತಮಿಳುನಾಡು): ಮಹೇಂದ್ರ ಸಿಂಗ್ ಧೋನಿಯ 200ನೇ ಪಂದ್ಯ. ಗೆಲ್ಲಿಸಿಕೊಡಲೇಬೇಕೆಂಬ ಹಠ ರವೀಂದ್ರ ಜಡೇಜಾರದ್ದು. 18 ಎಸೆತಗಳಲ್ಲಿ ಬೇಕಾಗಿದ್ದು 54 ರನ್. ಸ್ವತಃ ಧೋನಿಯೇ ಮೈದಾನದಲ್ಲಿದ್ದರು. ಆದರೆ, ಥ್ರಿಲ್ಲಿಂಗ್ ಪಂದ್ಯದಲ್ಲಿ ಕೊನೆಗೆ ಜಯ ಗಳಿಸಿದ್ದು ಮಾತ್ರ ರಾಜಸ್ಥಾನ ರಾಯಲ್ಸ್. ಸಂದೀಪ್ ಶರ್ಮಾರ ಯಾರ್ಕರ್ ಚೆನ್ನೈ ಗೆಲುವನ್ನು ಕಸಿದುಕೊಂಡಿತು.
ನಿನ್ನೆ ಚೆಪಾಕ್ ಮೈದಾನದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಹೋರಾಟ ರೋಚಕ ಅಂತ್ಯ ಕಂಡಿತು. ಗೆಲುವಿಗಾಗಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಪಂದ್ಯ ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಲೀಲಾಜಾಲವಾಗಿ ಸಿಕ್ಸರ್ಗಳನ್ನು ಬಾರಿಸುತ್ತಿದ್ದ ಧೋನಿಯನ್ನು ಸಂದೀಪ್ ಶರ್ಮಾ ಯಾರ್ಕರ್ ಮೂಲಕ ಕಟ್ಟಿಹಾಕಿ ರಾಯಲ್ಸ್ಗೆ 3 ರನ್ಗಳ ಜಯ ತಂದಿತ್ತರು.
-
.@ashwinravi99 starred with bat & ball and bagged the Player of the Match awards as @rajasthanroyals beat #CSK to seal their 2⃣nd successive win. 👏 👏
— IndianPremierLeague (@IPL) April 12, 2023 " class="align-text-top noRightClick twitterSection" data="
Scorecard ▶️ https://t.co/IgV0Ztjhz8#TATAIPL | #CSKvRR pic.twitter.com/a9k5fp5lol
">.@ashwinravi99 starred with bat & ball and bagged the Player of the Match awards as @rajasthanroyals beat #CSK to seal their 2⃣nd successive win. 👏 👏
— IndianPremierLeague (@IPL) April 12, 2023
Scorecard ▶️ https://t.co/IgV0Ztjhz8#TATAIPL | #CSKvRR pic.twitter.com/a9k5fp5lol.@ashwinravi99 starred with bat & ball and bagged the Player of the Match awards as @rajasthanroyals beat #CSK to seal their 2⃣nd successive win. 👏 👏
— IndianPremierLeague (@IPL) April 12, 2023
Scorecard ▶️ https://t.co/IgV0Ztjhz8#TATAIPL | #CSKvRR pic.twitter.com/a9k5fp5lol
ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ಜೋಸ್ ಬಟ್ಲರ್ರ ಅರ್ಧಶತಕದ ಬಲದಿಂದ 20 ಓವರ್ಗಳಲ್ಲಿ 175 ರನ್ ಗಳಿಸಿತು. ಗುರಿ ಬೆನ್ನತ್ತಿದ ಚೆನ್ನೈ 172 ರನ್ ಗಳಿಸಿ ಮೂರು ರನ್ಗಳಿಂದ ಸೋಲು ಕಂಡಿತು. ವಿಶೇಷ ಅಂದ್ರೆ ಈ ಪಂದ್ಯ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ 200 ನೇ ಪಂದ್ಯವಾಗಿತ್ತು.
ಮಧ್ಯಮ ಕ್ರಮಾಂಕ ಕುಸಿತ: ಚೆನ್ನೈ ತಂಡ ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ತಂಡದ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್ 8 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಡೆವೋನ್ ಕಾನ್ವೆ 38 ಎಸೆತಗಳಲ್ಲಿ 50 ರನ್ ಗಳಿಸಿ ವಿಕೆಟ್ ನೀಡಿದರು. ಕಳೆದ ಪಂದ್ಯದಲ್ಲಿ ಸಿಡಿದಿದ್ದ ಅಜಿಂಕ್ಯಾ ರಹಾನೆ ಈ ಪಂದ್ಯದಲ್ಲೂ ಅಬ್ಬರಿಸಿ 31 ರನ್ ಮಾಡಿದರು. ಇದಾದ ಬಳಿಕ ಶಿವಂ ದುಬೆ, ಮೊಯಿನ್ ಅಲಿ, ಅಂಬಟಿ ರಾಯುಡು ಒಂಟಿ ರನ್ಗೆ ಸುಸ್ತಾದರು. ಮಧ್ಯಮ ಕ್ರಮಾಂಕದ ಕುಸಿತದಿಂದ ತಂಡ ಒತ್ತಡಕ್ಕೆ ಸಿಲುಕಿತು.
-
WHAT. A. GAME! 👏 👏
— IndianPremierLeague (@IPL) April 12, 2023 " class="align-text-top noRightClick twitterSection" data="
Another day, another last-ball finish in #TATAIPL 2023! 😎@sandeep25a holds his nerve as @rajasthanroyals seal a win against #CSK! 👍 👍
Scorecard ▶️ https://t.co/IgV0Ztjhz8#CSKvRR pic.twitter.com/vGgNljKvT6
">WHAT. A. GAME! 👏 👏
— IndianPremierLeague (@IPL) April 12, 2023
Another day, another last-ball finish in #TATAIPL 2023! 😎@sandeep25a holds his nerve as @rajasthanroyals seal a win against #CSK! 👍 👍
Scorecard ▶️ https://t.co/IgV0Ztjhz8#CSKvRR pic.twitter.com/vGgNljKvT6WHAT. A. GAME! 👏 👏
— IndianPremierLeague (@IPL) April 12, 2023
Another day, another last-ball finish in #TATAIPL 2023! 😎@sandeep25a holds his nerve as @rajasthanroyals seal a win against #CSK! 👍 👍
Scorecard ▶️ https://t.co/IgV0Ztjhz8#CSKvRR pic.twitter.com/vGgNljKvT6
ಧೋನಿ- ಜಡೇಜಾ ಸಾಹಸ: ಈ ವೇಳೆ ಜೊತೆಯಾದ ಜಡೇಜಾ ಮತ್ತು ಧೋನಿ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಿದರು. ಕೊನೆಯ 18 ಎಸೆತಗಳಲ್ಲಿ 54 ರನ್ ಬೇಕಿದ್ದಾಗ ಆಟಗಾರರು ಅಬ್ಬರಿಸಿದರು. ಜಡೇಜಾ 15 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ 1 ಬೌಂಡರಿಯಿಂದ 25 ರನ್ ಮಾಡಿದರೆ, ಇನ್ನೊಂದೆಡೆ ಗ್ರೇಟ್ ಫಿನಿಷಿಂಗ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿಗಳಿಂದ 32 ರನ್ ಚಚ್ಚಿದರು. ಆದರೆ, ಗೆಲುವಿನ ಅದೃಷ್ಟ ಮಾತ್ರ ರಾಜಸ್ಥಾನ ಪರವಾಗಿತ್ತು.
ಚೆನ್ನೈ ಗೆಲುವಿಗೆ ಕೊನೆಯ ಎಸೆತದಲ್ಲಿ 5 ರನ್ ಬೇಕಿತ್ತು. ಅಬ್ಬರಿಸುತ್ತಿದ್ದ ಧೋನಿ ಸ್ಟ್ರೈಕ್ನಲ್ಲಿದ್ದಾಗ ಸಂದೀಪ್ ಶರ್ಮಾ ತೋರಿದ ಚಾಕಚಕ್ಯತೆ ಧೋನಿ ಬ್ಯಾಟ್ ಅನ್ನು ಕಟ್ಟಿಹಾಕಿತು. ಯಾರ್ಕರ್ ಎಸೆತದನ್ನು ಸಿಕ್ಸರ್ಗೆ ಅಟ್ಟಲು ವಿಫಲವಾದ ಧೋನಿ 2 ರನ್ ಮಾತ್ರ ಗಳಿಸಿದರು. ಇದರಿಂದ ತಂಡ 3 ರನ್ಗಳ ಸೋಲು ಕಾಣಬೇಕಾಯಿತು.
ಬಟ್ಲರ್ ಫಿಫ್ಟಿ: ರಾಜಸ್ಥಾನ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಮತ್ತೊಮ್ಮೆ ನೆರವಾದರು. 36 ಎಸೆತಗಳಲ್ಲಿ 52 ರನ್ ಮಾಡಿದರು. ಸತತ ವೈಪಲ್ಯ ಕಾಣುತ್ತಿದ್ದ ದೇವದತ್ ಪಡಿಕಲ್ 38, ಆರ್ ಅಶ್ವಿನ್ 30, ಶಿಮ್ರಾನ್ ಹೆಟ್ಮಾಯಿರ್ 30 ರನ್ ಗಳಿಸಿದರು. ಇದರಿಂದ ತಂಡ 176 ರನ್ಗಳ ಟಾರ್ಗೆಟ್ ನೀಡಿತು. ಈ ಗೆಲುವಿನ ಮೂಲಕ ರಾಯಲ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಓದಿ: 200ನೇ ಪಂದ್ಯ ಮುನ್ನಡೆಸುತ್ತಿರುವ ಧೋನಿ: ಸಿಎಸ್ಕೆ ಫ್ರಾಂಚೈಸಿಯಿಂದ ವಿಶೇಷ ಗೌರವ