ETV Bharat / sports

CSK vs RR: ಬಟ್ಲರ್​ 3000 ರನ್​ ಮೈಲಿಗಲ್ಲು, ಚೆನ್ನೈಗೆ 176 ರನ್​ನ ಸಾಧಾರಣ ಗುರಿ

ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಧೋನಿ ಟಾಸ್​ ಗೆದ್ದು, ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಬ್ಯಾಟಿಂಗ್​ ಆಹ್ವಾನ ನೀಡಿದ್ದರು.

CSK vs RR: ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ಬೌಲಿಂಗ್​ ಆಯ್ಕೆ

author img

By

Published : Apr 12, 2023, 7:17 PM IST

Updated : Apr 12, 2023, 9:32 PM IST

ಚೆನ್ನೈ (ತಮಿಳುನಾಡು): ಜೋಸ್​ ಬಟ್ಲರ್​, ದೇವದತ್​ ಪಡಿಕ್ಕಲ್​ ಮತ್ತು ಶಿಮ್ರೋನ್ ಹೆಟ್ಮೆಯರ್ ಬ್ಯಾಟಿಂಗ್​ ಬಲದಿಂದ ರಾಜಸ್ಥಾನ ರಾಯಲ್ಸ್​ ನಿಗದಿತ ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 175 ರನ್​ ಗಳಿಸಿತು. ಸ್ಪಿನ್​ ಪಿಚ್​ನಲ್ಲಿ ಚೆನ್ನೈ ಸ್ಪಿನ್ನರ್​ಗಳು ಕಮಾಲ್​ ಮಾಡಲಿಲ್ಲ. ಇದರಿಂದ ಸೂಪರ್​ ಕಿಂಗ್ಸ್​ಗೆ ರಾಜಸ್ಥಾನ 176 ರನ್​ಗಳ ಸಾಧಾರಣ ಗುರಿ ನೀಡಿತು.

ಟಾಸ್​ ಸೋತು ಬ್ಯಾಟಿಂಗ್​ಗಿಳಿದ ರಾಜಸ್ಥಾನ ರಾಯಲ್ಸ್​ಗೆ ತುಷಾರ್ ದೇಶಪಾಂಡೆ ಅವರು ಜೈಸ್ವಾಲ್​ ವಿಕೆಟ್​ ತೆಗೆದು ಆರಂಭಿಕ ಆಘಾತ ನೀಡಿದರು. ಮೂರನೇ ವಿಕೆಟ್​ ಆಗಿ ಬಂದ ದೇವದತ್​ ಪಡಿಕ್ಕಲ್​ ಮತ್ತೊಬ್ಬ ಆರಂಭಿಕ ಜೋಸ್​ ಬಟ್ಲರ್​ ಜೊತೆ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಇಬ್ಬರೂ ಸೇರಿ ತಂಡಕ್ಕೆ 50 ಪ್ಲಸ್​ ರನ್​ ಜೊತೆಯಾಟ ನೀಡಿದರು.

ಪಡಿಕ್ಕಲ್​ ಈ ಆವೃತ್ತಿಯ ಉತ್ತಮ ಇನ್ನಿಂಗ್ಸ್ ಆಡಿದರು. 26 ಬಾಲ್​ ಎದುರಿಸಿ 38 ರನ್​ ಕಲೆಹಾಕಿದರು. ಪಡಿಕ್ಕಲ್​ ವಿಕೆಟ್​ ಬೆನ್ನಲ್ಲೇ ಬಂದ ನಾಯಕ ಸಂಜು ಸ್ಯಾಮ್ಸನ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಆರ್. ಅಶ್ವಿನ್​ ಅವರಿಗೆ ಬಡ್ತಿ ನೀಡಿ 5ನೇ ವಿಕೆಟ್​ ಆಗಿ ಕಣಕ್ಕಿಳಿಸಿದರು. ಅಶ್ವಿನ್​ 22 ಬಾಲ್​ ಆಡಿ ತಂಡಕ್ಕೆ 30 ರನ್​ ಸೇರಿಸಿದರು.

3000 ರನ್​ ಪೂರೈಸಿದ ಬಟ್ಲರ್​: ಜೋಸ್​ ಬಟ್ಲರ್​ ಐಪಿಎಲ್​ನ 18ನೇ ಅರ್ಧಶತಕ ದಾಖಲಿಸಿದರು. ಒಂದೆಡೆ ತಂಡ ವಿಕೆಟ್​ ಕಳೆದುಕೊಳ್ಳುತ್ತಿದ್ದರೂ ವಿಚಲಿತರಾಗದೇ 36 ಬಾಲ್​ನಲ್ಲಿ 3 ಸಿಕ್ಸ್​ ಮತ್ತು ಒಂದು ಬೌಂಡರಿಯಿಂದ 52 ರನ್​ ಗಳಿಸಿದರು. 86 ಐಪಿಎಲ್​ ಪಂದ್ಯಗಳನ್ನು ಆಡಿರುವ ಬಟ್ಲರ್​ 3000 ರನ್​ ಗಡಿ ದಾಟಿದರು. ಮೂರನೇ ಅತಿ ಕಡಿಮೆ ಇನ್ನಿಂಗ್ಸ್​ನಿಂದ ಈ ರನ್​ ತಲುಪಿದ ಬ್ಯಾಟರ್​ ಆದರು. ಗೇಲ್​ 75 ಮತ್ತು ಕೆ.ಎಲ್.ರಾಹುಲ್​ 80 ಪಂದ್ಯದಿಂದ ಈ ಮೈಲಿಗಲ್ಲು ಸಾಧಿಸಿದ್ದರು.

ನಂತರ ಬಂದ ಧ್ರುವ ಜುರೆಲ್ (4), ಜೇಸನ್ ಹೋಲ್ಡರ್ (0) ಮತ್ತು ಜಂಪಾ (1) ಔಟ್​ ಆದರೆ, ಶಿಮ್ರೋನ್ ಹೆಟ್ಮೆಯರ್ ಅಬ್ಬರದ ಬ್ಯಾಟಿಂಗ್​ ಮಾಡಿದರು. 18 ಬಾಲ್​ನಲ್ಲಿ ಎರಡು ಬೌಂಡರಿ ಮತ್ತು ಸಿಕ್ಸ್​ನಿಂದ ಅಜೇಯ 30 ರನ್​ ಗಳಿಸಿದರು. ಚೆನ್ನೈ ಪರ ಆಕಾಶ್ ಸಿಂಗ್, ರವೀಂದ್ರ ಜಡೇಜಾ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್​ ಪಡೆದರೆ, ಮೊಯಿನ್ ಅಲಿ ಒಂದು ವಿಕೆಟ್​ ಕಿತ್ತರು.

ತಂಡಗಳು ಇಂತಿವೆ..: ರಾಜಸ್ಥಾನ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​/ನಾಯಕ), ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಕುಲದೀಪ್ ಸೇನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್

ಚೆನ್ನೈ ಸೂಪರ್​ ಕಿಂಗ್ಸ್​: ಡೆವೊನ್ ಕಾನ್ವೆ, ರುತುರಾಜ್ ಗಾಯಕ್‌ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್​ ಕೀಪರ್​/ನಾಯಕ), ಸಿಸಂದಾ ಮಗಳಾ, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್

ಇದನ್ನೂ ಓದಿ: ಧೋನಿ ನಾಯಕತ್ವದಲ್ಲಿ 200ನೇ IPL ಪಂದ್ಯ: ಗೆಲುವಿನ ಉಡುಗೊರೆ ನೀಡುತ್ತೇವೆ- ಜಡೇಜಾ

Last Updated : Apr 12, 2023, 9:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.