ಚೆನ್ನೈ: ಅಹಮದಾಬಾದ್ನ ಮೊದಲ ಪಂದ್ಯದ ಸೋಲಿನ ಬಳಿಕ ಎಂಎಸ್ಡಿ ಪಡೆಯ ಮುಂದೆ ತವರು ನೆಲದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಇಂದು ಮ್ಯಾಚ್ ನಡೆಯುತ್ತಿದೆ. ಮೊದಲ ಪಂದ್ಯದ ಸೋಲಿಗೆ 20 ರನ್ ಕಡಿಮೆ ಗಳಿಸಿದ್ದು, ಕಾರಣ ಎಂದು ಧೋನಿ ಹೇಳಿದ್ದರು. ಅದರಂತೆ ಇಂದು ಮೊದಲು ಬ್ಯಾಟ್ ಮಾಡಿದರೆ ಗೆಲುವಿನ ಹೆಚ್ಚುವರಿ 20 ರನ್ ಗಳಿಸುವ ಗುರಿ ತಂಡದ ಮುಂದಿದೆ.
ಲಖನೌದ ಪ್ರಥಮ ಪಂದ್ಯದಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ ಮಾರ್ಕ್ ವುಡ್ ಅವರನ್ನು ನಿಯಂತ್ರಿಸುವುದು ಚೆನ್ನೈ ಮೇಲಿರುವ ಮೊದಲ ಒತ್ತಡವಾಗಿದೆ. ಅದರಂತೆ ಚೆನ್ನೈನ ಋತುರಾಜ್ ಗಾಯಕ್ವಾಡ್ ಅವರನ್ನು ಕಟ್ಟಿಹಾಕುವುದು ಸಹ ಲಕ್ನೋಗೆ ಚಾಲೆಂಜ್ ಆಗಿದೆ. ಮಿಕ್ಕಂತೆ ಪಿಚ್ನ ಲಾಭ ಪಡೆಯಲು ಉಭಯ ತಂಡಗಳು ಸ್ಪಿನ್ನರ್ಗಳ ಮೊರೆ ಹೋಗುವ ಸಾಧ್ಯತೆಯೂ ಹೆಚ್ಚಿದೆ.
ಚೆಪಾಕ್ ಕ್ರೀಡಾಂಗಣವನ್ನು ಯಾವಾಗಲೂ ಸ್ಪಿನ್ನರ್‌ಗಳಿಗೆ ವಿಶೇಷ ಎಂದು ಪರಿಗಣಿಸಲಾಗಿದೆ. ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ದಾಖಲೆಯೂ ಉತ್ತಮವಾಗಿದೆ. ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಆಡಿದ 56 ಪಂದ್ಯಗಳಲ್ಲಿ 40 ಬಾರಿ ಗೆದ್ದಿದೆ. ತಂಡದ ಬ್ಯಾಟರ್ಗಳು ತವರಯ ನೆಲದಲ್ಲಿ ಘರ್ಜಿಸಿರುವ ದಾಖಲೆಗಳಿವೆ. ಮೊದಲ ಪಂದ್ಯದಲ್ಲಿ ತಮ್ಮ ಕೈಚಳಕ ತೋರುವಲ್ಲಿ ವಿಫಲರಾಗಿರುವ ರವೀಂದ್ರ ಜಡೇಜಾ ಮತ್ತು ಮಿಚೆಲ್ ಸ್ಯಾಂಟ್ನರ್ ಅವರಿಗೆ ಇಂದು ಪಿಚ್‌ನಲ್ಲಿ ಪರೀಕ್ಷೆಗೆ ಇರುವುದಂತೂ ಕಂಡಿತ.
ಲಕ್ನೋ ಸೂಪರ್ ಜೈಂಟ್ಸ್‌ನ ಹಲವು ಆಟಗಾರರಿಗೆ ಚೆಪಾಕ್ನಲ್ಲಿ ಆಡಿ ಅನುಭವ ಇಲ್ಲದಿದ್ದರೂ, ಮೊದಲ ಪಂದ್ಯದಲ್ಲಿ ಸೂಪರ್ ಜೈಂಟ್ಸ್ ಗೆದ್ದಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಲಕ್ನೋದಿಂದ ಚೆನ್ನೈಗೆ ಹಾರಿರುವ ರಾಹುಲ್ ಪಡೆ ಮುಂದಿನ ಗೆಲುವಿಗೆ ಸಿದ್ಧತೆ ನಡೆಸಿದೆ. ಕೆಎಲ್ ರಾಹುಲ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಮೈದಾನದಲ್ಲಿ ಮತ್ತೊಂದು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಪಂದ್ಯಕ್ಕೂ ಕೆಲ ಆಟ ಅಲಭ್ಯ: ಕ್ವಿಂಟನ್ ಡಿ ಕಾಕ್ ಅವರು ಭಾನುವಾರ ಸಂಜೆ ನೆದರ್ಲ್ಯಾಂಡ್ಸ್ ವಿರುದ್ಧದ ದಕ್ಷಿಣ ಆಫ್ರಿಕಾದ ಅಂತಿಮ ಏಕದಿನ ಪಂದ್ಯ ಮುಗಿಸಿ ಚೆನ್ನೈಗೆ ಹಾರಿದ್ದಾರೆ. ಆದರೆ ಅವರು ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಆದರೂ ಅವರ ಸ್ಥಾನಕ್ಕೆ ಕೈಲ್ ಮೇಯರ್ಸ್ ಉತ್ತಮ ಪ್ರದರ್ಶನ ನೀಡಿರುವುದರಿಂದ ಸೂಪರ್ ಜೈಂಟ್ಸ್ ಆರಂಭಿಕರ ಕೊರತೆಯ ಒತ್ತಡ ಇಲ್ಲ.
ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಸಿಸಂದಾ ಮಗಲಾ ಇಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ಆಡಲಿದೆ. ಇದರೊಂದಿಗೆ ನ್ಯೂಜಿಲ್ಯಾಂಡ್ನಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ಮಹೇಶ್ ತೀಕ್ಷ್ಣ ಮತ್ತು ಮತಿಶಾ ಪತಿರಾನಾ ಕೂಡ ಶ್ರೀಲಂಕಾ ಪರ ಆಡುತ್ತಿದ್ದಾರೆ. ಇವರಿಬ್ಬರಿಗೂ ಮೊದಲ ಮೂರು ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಆಟಗಾರರು: ಕೆಎಲ್ ರಾಹುಲ್ (ನಾಯಕ ಮತ್ತು ವಿಕೆಟ್ ಕೀಪರ್), ಕೈಲ್ ಮೇಯರ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಅವೇಶ್ ಖಾನ್, ರವಿ ಬಿಷ್ಣೋಯ್, ಅಮಿತ್ ಮಿಶ್ರಾ, ಮಾರ್ಕ್ ವುಡ್.
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಆಟಗಾರರು: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್ ), ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ರಾಜವರ್ಧನ್ ಹ್ಯಾಂಗರ್ಗೆಕರ್.
ಪಂದ್ಯ ಇಂದು ಸಂಜೆ 7:30 ಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಿಂದ ನೇರ ಪ್ರಸಾರಗೊಳ್ಳಲಿದ್ದು ಸ್ಟಾರ್ ಸ್ಪೋರ್ಟ್ ಮತ್ತು ಜಿಹಯೋ ಸಿನಿಮಾ.
ಇದನ್ನೂ ಓದಿ: 12 ವರ್ಷಗಳ ಹಿಂದಿನ ಧೋನಿ ಶಾಟ್ ನೆನಪಿಸಿದ ವಿರಾಟ್ ಕೊನೆಯ ಸಿಕ್ಸ್