ಚೆನ್ನೈ (ತಮಿಳುನಾಡು): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಯಕ ನಿತೀಶ್ ರಾಣಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆರು ವಿಕೆಟ್ಗಳ ಜಯ ದಾಖಲಿಸಿದೆ. ಸಿಎಸ್ಕೆ ನೀಡಿದ್ದ 145 ರನ್ಗಳ ಸಾಧಾರಣ ಗುರಿಯನ್ನು 18.3 ಓವರ್ಗಳಲ್ಲೇ ತಲುಪಿದ ಕೆಕೆಆರ್ ಗೆಲುವಿನ ನಗೆ ಬೀರಿದೆ.
ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ್ದ ಕೋಲ್ಕತ್ತಾ ತಂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ರಿಂಕು ಸಿಂಗ್ ಹಾಗೂ ನಾಯಕ ನಿತೀಶ್ ರಾಣಾ ಹೋರಾಟದಿಂದ ಗೆದ್ದು ಬೀಗಿತು.
-
A convincing chase and a special Knight in Chennai for @KKRiders 💜👏🏻
— IndianPremierLeague (@IPL) May 14, 2023 " class="align-text-top noRightClick twitterSection" data="
The @NitishRana_27-led #KKR are well and truly alive in the tournament 😎
Scorecard ▶️ https://t.co/d7m0BcEtvi #TATAIPL | #CSKvKKR pic.twitter.com/oZcq5Blj6G
">A convincing chase and a special Knight in Chennai for @KKRiders 💜👏🏻
— IndianPremierLeague (@IPL) May 14, 2023
The @NitishRana_27-led #KKR are well and truly alive in the tournament 😎
Scorecard ▶️ https://t.co/d7m0BcEtvi #TATAIPL | #CSKvKKR pic.twitter.com/oZcq5Blj6GA convincing chase and a special Knight in Chennai for @KKRiders 💜👏🏻
— IndianPremierLeague (@IPL) May 14, 2023
The @NitishRana_27-led #KKR are well and truly alive in the tournament 😎
Scorecard ▶️ https://t.co/d7m0BcEtvi #TATAIPL | #CSKvKKR pic.twitter.com/oZcq5Blj6G
ಸುಲಭದ ಟಾರ್ಗೆಟ್ ಪಡೆದಿದ್ದ ಕೆಕೆಆರ್ ಪರ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ಗೆ ಸೇರಿಕೊಂಡರು. ಇದಾದ ಸ್ವಲ್ಪ ಹೊತ್ತಲ್ಲೇ 9 ರನ್ ಸಿಡಿಸಿದ್ದ ವೆಂಕಟೇಶ್ ಅಯ್ಯರ್ ಸಹ ನಿರ್ಗಮಿಸಿದರು. ಕೆಕೆಆರ್ ತಂಡ ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಜೇಸನ್ ರಾಯ್ ಕೂಡ ಕೇವಲ 12 ರನ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೋಲ್ಕತ್ತಾ ತಂಡ 4.3 ಓವರ್ಗಳಲ್ಲಿ 33 ರನ್ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆದರೆ, ಈ ಸಮಯದಲ್ಲಿ ಒಂದಾದ ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ನಾಲ್ಕನೇ ವಿಕೆಟ್ಗೆ 99 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನತ್ತ ಸಾಗಿಸಿದರು. ಅಲ್ಲದೇ, ರಿಂಕು ಸಿಂಗ್ ಹಾಗೂ ನಿತೀಶ್ ರಾಣಾ ಅರ್ಧಶತಕ ಸಿಡಿಸಿ ಮಿಂಚಿದರು. ಅಂತಿಮ 18 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 13 ರನ್ ಅಗತ್ಯವಿತ್ತು.
ಈ ವೇಳೆ ಅನಗತ್ಯ ರನ್ ಕದಿಯಲು ಯತ್ನಿಸಿದ ರಿಂಕು ಸಿಂಗ್ ರನೌಟ್‌ಗೆ ಬಲಿಯಾದರು. 43 ಎಸೆತಗಳನ್ನು ಎದುರಿಸಿದ ರಿಂಕು ಸಿಂಗ್ ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಮೇತ 54 ರನ್ ಬಾರಿಸಿದರು. ಮತ್ತೊಂದೆಡೆ, ನಿತೀಶ್ ರಾಣಾ 44 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಆರು ಬೌಂಡರಿಗಳೊಂದಿಗೆ ಅಜೇಯ 57 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿದರು. ಆ್ಯಂಡ್ರೆ ರಸೆಲ್ ಅಜೇಯ 2 ರನ್ ಗಳಿಸಿದರು. ಅಂತಿಮವಾಗಿ ಕೆಕೆಆರ್ 18.3 ಎಸೆತದಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ಇದರಿಂದ ಕೋಲ್ಕತ್ತಾ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಇದಕ್ಕೂ ಮುನ್ನ ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಅವರ ಜೊತೆಯಾಟದ ನೆರವಿನಿಂದ ಚೆನ್ನೈ 144 ರನ್ ಕಲೆ ಹಾಕಿತ್ತು. ಸಿಎಸ್ಕೆಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ರುತುರಾಜ್ ಗಾಯಕ್ವಾಡ್ 17 ರನ್ಗೆ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಅಜಿಂಕ್ಯಾ ರಹಾನೆ 16 ರನ್ಗೆ ಔಟಾದರು. ಇದರ ಬೆನ್ನಲ್ಲೇ 30 ರನ್ ಗಳಿಸಿದ್ದ ಡೆವೊನ್ ಕಾನ್ವೇ ಕೂಡ ಪೆವಿಲಿಯನ್ ಸೇರಿದರು. ಅಂಬಾಟಿ ರಾಯುಡು 4 ರನ್ ಮತ್ತು ಆಲ್ರೌಂಡರ್ ಮೋಯಿನ್ ಅಲಿ 1 ರನ್ಗೆ ನಿರ್ಗಮಿಸಿದರು.
ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಶಿವಂ ದುಬೆ ತಂಡಕ್ಕೆ ಆಸರೆಯಾದರು. ಈ ಜೋಡಿ ಆರನೇ ವಿಕೆಟ್ಗೆ 68 ರನ್ಗಳ ಜೊತೆಯಾಟ ನೀಡಿತು. 20 ರನ್ ಗಳಿಸಿದ್ದ ಜಡೇಜಾ ಕೊನೆಯ ಓವರ್ನಲ್ಲಿ ಔಟಾದರು. ಅಜೇಯ ಆಟ ಆಡಿದ ಶಿವಂ ದುಬೆ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಸಮೇತ ಅಜೇಯ 48 ರನ್ ಗಳಿಸಿದರು. ನಾಯಕ ಧೋನಿ ಮೂರು ಬಾಲ್ ಎದುರಿಸಿ ಎರಡು ರನ್ ಕಲೆಹಾಕಿದ್ದರು. ಕೆಕೆಆರ್ ಪರ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್, ವೈಭವ್ ಅರೋರಾ ತಲಾ ಒಂದು ವಿಕೆಟ್ ಕಬಳಿಸಿದ್ದರು.
ಇದನ್ನೂ ಓದಿ: ನೋ ಬಾಲ್ ಗೊಂದಲ: ಹೈದರಾಬಾದ್ ಅಭಿಮಾನಿಗಳಿಂದ ಲಕ್ನೋ ಮೇಲೆ ನಟ್ ಬೋಲ್ಟ್ ದಾಳಿ