ಮುಂಬೈ(ಮಹಾರಾಷ್ಟ್ರ): ಬ್ರಬೋರ್ನ್ ಕ್ರೀಡಾಂಗಣದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಟಾಸ್ ಗೆದ್ದ ಚೆನ್ನೈ ತಂಡ ಬೌಲಿಂಗ್ ಆಯ್ದುಕೊಂಡಿದೆ. ನಾಲ್ಕು ಬಾರಿ ಕಪ್ ಗೆದ್ದಿದ್ದ ಸೂಪರ್ ಕಿಂಗ್ಸ್ ಈ ಬಾರಿ ಮಂಕಾಗಿದೆ. ಜಡೇಜ ನಾಯಕತ್ವದ ಚೆನ್ನೈ ಎರಡು ಪಂದ್ಯಗಳಲ್ಲಿ ಸೋತಿದೆ. ಮಯಾಂಕ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ಒಂದು ಗೆಲುವು ಒಂದು ಸೋಲು ಅನುಭವಿಸಿದೆ. ಎರಡೂ ತಂಡಗಳು ಈ ಪಂದ್ಯದಲ್ಲಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿವೆ.
ಚೆನ್ನೈ ಸೂಪರ್ ಕಿಂಗ್ ತಂಡ ಒಂದು ಬದಲಾವಣೆ ಮಾಡಿದ್ದು, ತುಷಾರ್ ಬದಲಾಗಿ ಕ್ರಿಸ್ ಜೋರ್ಡಾನ್ ಆಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ನಲ್ಲಿ ಹರ್ಪ್ರೀತ್ ಬ್ರಾರ್ ಜಾಗಕ್ಕೆ ವೈಭವ್ ಅರೋರಾ ಮತ್ತು ರಾಜ್ ಬಾವಾ ಜಾಗಕ್ಕೆ ಜಿತೇಶ್ ಶರ್ಮಾರನ್ನು ಆಡಿಸುವ ಮೂಲಕ ಎರಡು ಬದಲಾವಣೆ ಮಾಡಿಕೊಂಡಿದೆ. ಹಳೇ ಚೆನ್ನೈ ತಂಡದ ಸಾಂಗಿಕ ಹೋರಾಟ ಗೆಲುವಿಗೆ ಅಗತ್ಯವಿದ್ದು, ಗಾಯಕ್ವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯಿಡು ಮೇಲೆ ಒತ್ತಡ ಹೆಚ್ಚಾಗಿದೆ. ಮೊದಲ ಪಂದ್ಯದಂತೆ ಧೋನಿ ಮತ್ತೆ ಘರ್ಜಿಸುವ ನಿರೀಕ್ಷೆಯೂ ಇದೆ.
-
🚨 Toss Update 🚨@imjadeja has won the toss & @ChennaiIPL have elected to bowl against @PunjabKingsIPL.
— IndianPremierLeague (@IPL) April 3, 2022 " class="align-text-top noRightClick twitterSection" data="
Follow the match ▶️ https://t.co/ZgMGLamhfU #TATAIPL | #CSKvPBKS pic.twitter.com/2QzODLJme2
">🚨 Toss Update 🚨@imjadeja has won the toss & @ChennaiIPL have elected to bowl against @PunjabKingsIPL.
— IndianPremierLeague (@IPL) April 3, 2022
Follow the match ▶️ https://t.co/ZgMGLamhfU #TATAIPL | #CSKvPBKS pic.twitter.com/2QzODLJme2🚨 Toss Update 🚨@imjadeja has won the toss & @ChennaiIPL have elected to bowl against @PunjabKingsIPL.
— IndianPremierLeague (@IPL) April 3, 2022
Follow the match ▶️ https://t.co/ZgMGLamhfU #TATAIPL | #CSKvPBKS pic.twitter.com/2QzODLJme2
ಪಂಜಾಬ್: ಮಯಾಂಕ್ ಅಗರ್ವಾಲ್(ಸಿ), ಶಿಖರ್ ಧವನ್, ಭಾನುಕಾ ರಾಜಪಕ್ಸೆ(ಡಬ್ಲ್ಯೂ), ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಜಿತೇಶ್ ಶರ್ಮಾ, ಓಡಿಯನ್ ಸ್ಮಿತ್, ಅರ್ಶ್ದೀಪ್ ಸಿಂಗ್, ಕಗಿಸೊ ರಬಾಡ, ರಾಹುಲ್ ಚಾಹರ್, ವೈಭವ್ ಅರೋರಾತಂಡ ಇಂತಿದೆ: ಚೆನೈ: ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ಸಿ), ಎಂಎಸ್ ಧೋನಿ (ಡಬ್ಲ್ಯು), ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಡ್ವೈನ್ ಪ್ರಿಟೋರಿಯಸ್, ಮುಖೇಶ್ ಚೌಧರಿ
ಇದನ್ನೂ ಓದಿ: ಮಹಿಳೆಯರ ವಿಶ್ವಕಪ್ ಕ್ರಿಕೆಟ್: 7ನೇ ಬಾರಿ ಆಸ್ಟ್ರೇಲಿಯಾ ಚಾಂಪಿಯನ್