ETV Bharat / sports

ಹುಚ್ಚನಾಗುತ್ತಿದ್ದ ನನ್ನನ್ನು ತಿದ್ದಿದವಳು ಅನುಷ್ಕಾ: ವಿರಾಟ್​ ಮನದಾಳ - ETV Bharath Karnataka

ಸಚಿನ್ ಮತ್ತು ವಿವ್ ರಿಚರ್ಡ್ಸ್ ಅವರೊಂದಿಗೆ ಯಾರನ್ನೂ ಹೋಲಿಸಬಾರದು. ಅವರು ಕ್ರಿಕೆಟ್​ನ ಚಾರ್ಮ್​ಅನ್ನೇ ಬದಲಿಸಿದವರು ಎಂದು ವಿರಾಟ್​ ಕೊಹ್ಲಿ ಹೇಳಿದ್ದಾರೆ.

Anushka Sharma helped him to out from negative state of mind  : Kohli
ಹುಚ್ಚನಾಗುತ್ತಿದ್ದ ನನ್ನನ್ನು ತಿದ್ದಿದವಳು ಅನುಷ್ಕಾ: ವಿರಾಟ್​ ಮನದಾಳ
author img

By

Published : Apr 18, 2023, 6:36 AM IST

ಬೆಂಗಳೂರು: ಜನರು ನನ್ನನ್ನು ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದಾಗ ನನಗೆ ಮುಜುಗರವಾಗುತ್ತದೆ. ಲೆಜೆಂಡರಿ ಕ್ರಿಕೆಟಿಗ ಅವರು ನನಗೆ ಸ್ಫೂರ್ತಿ ಎಂದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಸಚಿನ್ ಮತ್ತು ವಿವ್ ರಿಚರ್ಡ್ಸ್ ಅವರೊಂದಿಗೆ ಯಾರನ್ನೂ ಹೋಲಿಸಬಾರದು ಏಕೆಂದರೆ ಅವರು ತಮ್ಮ ಯುಗದಲ್ಲಿ ಕ್ರಿಕೆಟ್​ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಕೊಹ್ಲಿ ಹೇಳಿದರು.

"ನಾನು ಪ್ರತಿ ಬಾರಿಯೂ ಅದನ್ನು ಕೇಳಿದಾಗ ನಗುತ್ತೇನೆ. ಈ ಜನರಿಗೆ ಆಟದ ಬಗ್ಗೆ ತಿಳಿದಿಲ್ಲ. ಆದರೆ ಅವರು ಅಂಕಿಅಂಶಗಳೊಂದಿಗೆ ಹೋಲಿಸುತ್ತಾರೆ. ಆದರೆ ನನ್ನನ್ನು ಸಚಿನ್‌ಗೆ ಹೋಲಿಸಿದಾಗ ನನಗೆ ಮುಜುಗರವಾಗುತ್ತದೆ. ಆದರೆ ಈ ಅಂಕಿ-ಅಂಶಗಳು ಅವರಿಗೆ ಹೋಲಿಕೆ ಆಗಬಹುದು. ಆದರೆ ನಾನು ಬೆಳೆಯುವಾಗ ಅವರನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರು ನನ್ನ ಮೇಲೆ ಪರಿಣಾಮ ಬೀರಿದ್ದಾರೆ" ಎಂದು ಜಿಯೋ ಸಿನಿಮಾದಲ್ಲಿ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರಿಗೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ ಹೇಳಿದ್ದಾರೆ.

"ಸಚಿನ್ ತೆಂಡೂಲ್ಕರ್ ಎಂಬುದು ನನಗೆ ಭಾವನಾತ್ಮಕತೆ, ಅವರು ಎಲ್ಲರನ್ನೂ ತಮ್ಮಂತೆ ನೋಡುತ್ತಾರೆ. ಸಚಿನ್​ ಎಲ್ಲರೊಂದಿಗೂ ನಂಬಿಕೆಯಿಂದ ಇರುತ್ತಾರೆ, ಅವರು ಸ್ಫೂರ್ತಿ ಮತ್ತು ಸಾಂತ್ವನದ ಸೆಲೆಯಾಗಿದ್ದಾರೆ. ಅವರು ರನ್​ ಗಳಿಸುವುದನ್ನು ನೋಡುವುದೇ ಒಂದು ಉತ್ತಮವಾದ ಕ್ಷಣವಾಗಿತ್ತು. ಸಚಿನ್ ಮತ್ತು ವಿವ್ ರಿಚರ್ಡ್ಸ್ ಅವರೊಂದಿಗೆ ಯಾರನ್ನೂ ಹೋಲಿಸಬಾರದು. ಏಕೆಂದರೆ, ಅವರು ತಮ್ಮ ಯುಗದಲ್ಲಿ ಕ್ರಿಕೆಟ್​ನಲ್ಲಿ ಒಂದು ಬದಲಾವಣೆಯನ್ನು ಮಾಡಿದವರು. ಜನರು ಅವರಲ್ಲಿ ಇಟ್ಟಿರುವ ನಂಬಿಕೆ ಅಪರೂಪ, ಒಬ್ಬ ಆಟಗಾರನಲ್ಲಿ ಅಂತಹ ನಂಬಿಕೆ ಇರುವುದು ಅಪರೂಪ" ಎಂದು ಅವರು ಹೇಳಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ಬ್ಯಾಟರ್ ರಿಂಕು ಸಿಂಗ್ ಅವರನ್ನು ಹೊಗಳಿದ ಕೊಹ್ಲಿ "ಇಂದು ಐಪಿಎಲ್‌ನಲ್ಲಿ ಹಲವಾರು ಮ್ಯಾಚ್ ವಿನ್ನರ್‌ಗಳಿದ್ದಾರೆ. ಈ ಯುವಕರು ಎಲ್ಲಿಂದಲಾದರೂ ಪಂದ್ಯಗಳನ್ನು ಗೆಲ್ಲುತ್ತಾರೆ. ರಿಂಕು ಸಿಂಗ್ ಐದು ಎಸೆತಗಳಲ್ಲಿ ಐದು ಸಿಕ್ಸರ್‌ಗಳನ್ನು ಹೊಡೆದರಂತೆ. ಈ ಹುಡುಗರು ಮಾಡುತ್ತಿರುವ ಕೆಲಸವನ್ನು ಮಾಡಲು ನಾನು ಯೋಚಿಸಲು ಸಹ ಸಾಧ್ಯವಾಗಲಿಲ್ಲ. ಆದರೆ ಸಚಿನ್ ಮತ್ತು ವಿವ್ ರಿಚರ್ಡ್ಸ್ ಯಾರೂ ಮಾಡದಿದ್ದಾಗ ಈ ರೀತಿಯದ್ದನ್ನು ಮಾಡಿದ್ದರು. ಅದಕ್ಕಾಗಿಯೇ ಅವರನ್ನು ಐಕಾನ್‌ಗಳಾಗಿ ಪರಿಗಣಿಸಲಾಗುತ್ತದೆ" ಎಂದಿದ್ದಾರೆ.

ಕೊಹ್ಲಿ ತಮ್ಮ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ ಅವರು ನಕಾರಾತ್ಮಕ ಮನಸ್ಥಿತಿಯಿಂದ ಹೊರಬರಲು ಹೇಗೆ ಸಹಾಯ ಮಾಡಿದರು ಎಂಬುದನ್ನು ಸಂದರ್ಶನದಲ್ಲಿ ಹೇಳಿದ್ದಾರೆ. "ಅನುಷ್ಕಾ ನನಗೆ ನೀಡುವ ಸಲಹೆಗಳಿಗೆ ಮತ್ತು ಪ್ರೋತ್ಸಾಹಕ್ಕೆ ಎಂದು ಬೆಲೆ ಕಟ್ಟಲಾಗದು, ಅಷ್ಟು ಮಹತ್ವದ್ದು. ಅವಳು ನನ್ನೊಂದಿಗೆ ಯಾವಾಗಲೂ ನೇರವಾಗಿ ಮಾತನಾಡುತ್ತಾಳೆ, ಯಾವುದೇ ಮುಚ್ಚುಮರೆ ಇಲ್ಲದೇ ಸತ್ಯವನ್ನು ಹೇಳುತ್ತಾಳೆ. ನಾನು ಆ ಹಂತದಲ್ಲಿ (ಏಷ್ಯಾ ಕಪ್‌ಗೆ ಮೊದಲು) ನನ್ನನ್ನು ಏಕಾಂಗಿಯಾಗಿ ಬಿಟ್ಟರೆ ಹುಚ್ಚನಾಗುತ್ತಿದ್ದೆ. ಆದರೆ ಅವಳು ನನ್ನನ್ನು ಸಾಮಾನ್ಯ ವ್ಯಕ್ತಿಯಾಗಿ ಉನ್ನತ ಹಂತಕ್ಕೆತರುತ್ತಾಳೆ" ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ: ಮುಂದಿನ 9 ಪಂದ್ಯಗಳನ್ನೂ ಗೆಲ್ಲುತ್ತೇವೆ: ಡೆಲ್ಲಿ ಕ್ಯಾಪಿಟಲ್ಸ್‌ ನಿರ್ದೇಶಕ ಗಂಗೂಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.