ಮುಂಬೈ : ಟೀ ಇಂಡಿಯಾ ಹಾಗು ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಇವರು ಆಗಾಗ ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅನುಷ್ಕಾ, ಇನ್ಸ್ಟಾಗ್ರಾಮ್ನಲ್ಲಿ ಪತಿಯ ಅಪರೂಪದ ಕ್ರಿಕೆಟ್ ಸಾಧನೆಯ ಕುರಿತಾಗಿ ಪೋಸ್ಟ್ ಮಾಡಿದ್ದು, ಗಮನ ಸೆಳೆದಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ(ನಿನ್ನೆ) ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕರೆ ಮಾಡಿ ಮಾತನಾಡಿದರು. ಈ ಕುರಿತಾದ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಪ್ರೀತಿ ಅಭಿಮಾನದ ಮಳೆಗರೆಯುತ್ತಿದ್ದಾರೆ.
-
Virat on a Video call with Anushka ❤❤❤ pic.twitter.com/gLUIp7UEUT
— Shreya ❤ (@Shreyaztweets) May 18, 2023 " class="align-text-top noRightClick twitterSection" data="
">Virat on a Video call with Anushka ❤❤❤ pic.twitter.com/gLUIp7UEUT
— Shreya ❤ (@Shreyaztweets) May 18, 2023Virat on a Video call with Anushka ❤❤❤ pic.twitter.com/gLUIp7UEUT
— Shreya ❤ (@Shreyaztweets) May 18, 2023
ಅನುಷ್ಕಾ ಶರ್ಮಾ ಕೂಡ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಪತಿಯ ಆಟದ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ, ಕೊಹ್ಲಿ 100 ರನ್ ಬಾರಿಸಿ ಸಂಭ್ರಮಿಸುತ್ತಿರುವ ಫೋಟೋಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದು, "ವಾಟ್ ಎ ಇನ್ನಿಂಗ್" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅವರ ಮೊದಲ ಶತಕ ಇದಾಗಿದೆ. ಈ ಶತಕದಾಟಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಅವರು ಕಾಯುತ್ತಿದ್ದರು. 2019ರ ಏಪ್ರಿಲ್ನಲ್ಲಿ ನಡೆದ ಐಪಿಎಲ್ನಲ್ಲಿ ಸೆಂಚುರಿ ಸಾಧನೆ ಮಾಡಿ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದರು. ಇದೀಗ ಸ್ಟಾರ್ ಬ್ಯಾಟರ್ ಮತ್ತೆ ಅಬ್ಬರಿಸಿದ್ದು ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಇದನ್ನೂ ಓದಿ : IPL 2023: ಕಿಂಗ್ ಕೊಹ್ಲಿ ಶತಕ, ಡು ಪ್ಲೆಸಿಸ್ ಅರ್ಧಶತಕ... ಆರ್ಸಿಬಿಗೆ ಭರ್ಜರಿ ಗೆಲುವು
ಪಂದ್ಯದ ಬಗ್ಗೆ..: ಪ್ಲೇ ಆಫ್ ಸ್ಥಾನಕ್ಕೇರಲು ತೀವ್ರ ಹೋರಾಟ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೈದರಾಬಾದ್ ವಿರುದ್ಧ ಭರ್ಜರಿ ಜಯ ಗಳಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ನಾಯಕ ಫಾಫ್ ಡು ಪ್ಲೆಸಿಸ್ ಬಳಗ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್‌ಗಿಳಿದ ಹೈದರಾಬಾದ್, ಹೆನ್ರಿಕ್ ಕ್ಲಾಸೆನ್ ಅವರ ಸೊಗಸಾದ ಶತಕದಾಟದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 186 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಮತ್ತು ಡು ಪ್ಲೆಸಿಸ್ ಭರ್ಜರಿ ಜೊತೆಯಾಟ ನೀಡಿದರು. 19.2 ಓವರ್‌ಗಳಲ್ಲೇ 187 ರನ್ ಗಳಿಸುವ ವಿಜಯ ಕೇಕೆ ಹಾಕಿದರು. ಕೊಹ್ಲಿ 62 ಎಸೆತಗಳಿಂದ ಅಮೋಘ ಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. ಡು ಪ್ಲೆಸಿಸ್ 47 ಎಸೆತಗಳಲ್ಲಿ 71 ರನ್ ಗಳಿಸಿದರು.
ಇದನ್ನೂ ಓದಿ : ''Real King Virat Kohli'': ವಿರಾಟ್ ಬ್ಯಾಟಿಂಗ್ ಕೊಂಡಾಡಿದ ಪಾಕ್ ಕ್ರಿಕೆಟಿಗ, ಬಾಬರ್ ಫ್ಯಾನ್ಸ್ಗೆ ಟಾಂಗ್!