ETV Bharat / sports

ಐಪಿಎಲ್​ನಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ಬಾಲರ್​ ಅಮಿತ್​ ಮಿಶ್ರಾ - ಐಪಿಎಲ್‌ನಲ್ಲಿ ಐದು ಬಾರಿ ನಾಲ್ಕು ವಿಕೆಟ್ ಪಡೆದ ಅಮಿತ್ ಮಿಶ್ರಾ

ನಿನ್ನೆ ನಡೆದ ಪಂದ್ಯದಲ್ಲಿ ಅಮಿತ್ ಮಿಶ್ರಾ 4 ವಿಕೆಟ್​ ಪಡೆದು ಮಿಂಚಿದರು. ಇದು ಇವರು ಐಪಿಎಲ್​​ನಲ್ಲಿ 5 ಬಾರಿ ನಾಲ್ಕು ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್​​ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ..

ಅಮಿತ್​ ಮಿಶ್ರಾ
ಅಮಿತ್​ ಮಿಶ್ರಾ
author img

By

Published : Apr 21, 2021, 2:48 PM IST

Updated : Apr 21, 2021, 4:35 PM IST

ಹೈದರಾಬಾದ್ : ಚೆನ್ನೈನ ಎಂ ಎ ಚಿದಬರಂ ಕ್ರಿಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಈ ಗೆಲುವಿಗೆ ಮೂಲ ಕಾರಣ ಅನುಭವಿ ಲೆಗ್​ ಸ್ಪೀನ್ನರ್​ ಅಮಿತ್​ ಮಿಶ್ರಾ.

ಈ ಬಾರಿಯ ಐಪಿಎಲ್​​ನಲ್ಲಿ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಮಿಶ್ರಾ ಈ ಪಂದ್ಯದಲ್ಲಿ ಫ್ಲಾಪ್ ಆಗಿದ್ದರು. ಇದಾದ ಬಳಿಕೆ ಡೆಲ್ಲಿ ತಂಡ ಮುಂದಿನ ಎರಡು ಪಂದ್ಯಗಳಿಗೆ ಅಮಿತ್​ ಮಿಶ್ರಾರನ್ನ ಕೈಬಿಟ್ಟು ಬೆಂಚ್​ ಕಾಯಿಸಿತ್ತು. ಆದರೆ, 4ನೇ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆದ ಮಿಶ್ರಾ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದರು.

ಈ ಪಂದ್ಯದಲ್ಲಿ ಅಮಿತ್​ ಮಿಶ್ರಾ ಪ್ರಮುಖ 4 ವಿಕೆಟ್​ ಕಿತ್ತು ಮುಂಬೈ ಸೋಲಿಗೆ ಕಾರಣರಾಗಿದ್ದರು. ಈ ಪಂದ್ಯದಲ್ಲಿ 4 ವಿಕೆಟ್​ ಪಡೆದ ಮಿಶ್ರಾ ಐಪಿಎಲ್​​ನಲ್ಲಿ ಮತ್ತೊಂದು ದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡರು.

ನಿನ್ನೆ ನಡೆದ ಪಂದ್ಯದಲ್ಲಿ ಅಮಿತ್ ಮಿಶ್ರಾ 4 ವಿಕೆಟ್​ ಪಡೆದು ಮಿಂಚಿದರು. ಇದು ಇವರು ಐಪಿಎಲ್​​ನಲ್ಲಿ 5 ಬಾರಿ ನಾಲ್ಕು ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್​​ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ವೆಸ್ಟ್​ ಇಂಡೀಸ್​ನ ಬೌಲರ್​ ಸುನೀಲ್​ ನರೈನ್ ಪ್ರಸ್ತುತ ಐಪಿಎಲ್​​ನಲ್ಲಿ ಕೆಕೆಆರ್​ ತಂಡದ ಪರ ಆಡುತ್ತಿದ್ದರು. ಇವರು ಐಪಿಎಲ್​​ನಲ್ಲಿ ಒಟ್ಟು 7 ಬಾರಿ 4 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಇವರ ಹೊರತಾಗಿ ಶ್ರೀಲಂಕಾದ ಮಾಜಿ ಆಟಗಾರ ಲಸೀತ್​ ಮಲಿಂಗಾ ಕೂಡ 7 ಬಾರಿ ನಾಲ್ಕು ವಿಕೆಟ್​ ಪಡೆದಿದ್ದಾರೆ.

ಅಂಕಿ ಅಂಶ: ಹೆಚ್​. ಆರ್ . ಗೋಪಾಲ ಕೃಷ್ಣ

ಇದನ್ನೂ ಓದಿ : ಡೆಲ್ಲಿ ವಿರುದ್ಧ ನಿಧಾನಗತಿ ಬೌಲಿಂಗ್: ರೋಹಿತ್‌ ಶರ್ಮಾಗೆ ₹ 12 ಲಕ್ಷ ದಂಡ

Last Updated : Apr 21, 2021, 4:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.