ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಅಂಬಾಟಿ ರಾಯುಡು ದಿಢೀರ್ ಆಗಿ ಐಪಿಎಲ್ಗೆ ನಿವೃತ್ತಿ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ತಾವು ಮಾಡಿರುವ ಟ್ವೀಟ್ ಡಿಲೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೊದಲು ಮುಂಬೈ ಇಂಡಿಯನ್ಸ್ ಹಾಗೂ ಇದೀಗ ಸಿಎಸ್ಕೆ ಪರ ಬ್ಯಾಟ್ ಬೀಸಿರುವ ಈ ಪ್ಲೇಯರ್ ಒಟ್ಟು 187 ಪಂದ್ಯಗಳನ್ನಾಡಿದ್ದು, 4,187ರನ್ಗಳಿಕೆ ಮಾಡಿದ್ದಾರೆ. ಇದರಲ್ಲಿ 1 ಶತಕ ಹಾಗೂ 22 ಅರ್ಧಶತಕಗಳಿವೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ 12 ಪಂದ್ಯಗಳಿಂದ ರಾಯುಡು ಕೇವಲ 271 ರನ್ಗಳಿಕೆ ಮಾಡಿದ್ದು, ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ.
ರಾಯುಡು ಟ್ವೀಟ್ ಇಂತಿದೆ: ಇದು ನನ್ನ ಕೊನೆಯ ಐಪಿಎಲ್ ಎಂದು ಘೋಷಣೆ ಮಾಡಲು ಸಂತೋಷವಾಗುತ್ತದೆ. ಕಳೆದ 13 ವರ್ಷಗಳಿಂದ ಎರಡು ಉತ್ತಮ ತಂಡಗಳಲ್ಲಿ ಅದ್ಭುತ ಸಮಯ ಕಳೆದಿದ್ದೇನೆ. ಈ ಪಯಣಕ್ಕೆ ಅವಕಾಶ ಕಲ್ಪಿಸಿಕೊಟ್ಟ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
2018ರ ಐಪಿಎಲ್ನಲ್ಲಿ ರಾಯುಡು 602 ರನ್ಗಳಿಕೆ ಮಾಡಿ, ಎಲ್ಲರ ಗಮನ ಸೆಳೆದಿದ್ದರು. 2018ರ ಐಪಿಎಲ್ನಲ್ಲಿ ಈ ಪ್ಲೇಯರ್ಗೆ 2.2 ಕೋಟಿ ರೂ ನೀಡಿ, ಸಿಎಸ್ಕೆ ಖರೀದಿ ಮಾಡಿತ್ತು. ಇದಾದ ಬಳಿಕ 2022ರ ಐಪಿಎಲ್ಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ 6.75 ಕೋಟಿ ನೀಡಿ, ಸಿಎಸ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು.
ಇದನ್ನೂ ಓದಿ: 'ಅದೃಷ್ಟ ಶೀಘ್ರವೇ ನಿಮ್ಮತ್ತ ತಿರುಗಲಿದೆ': ವಿರಾಟ್ಗೆ ಪಂಜಾಬ್ ತಂಡದ ಶುಭ ಸಂದೇಶ
ರಾಯುಡು ಟ್ವೀಟ್ ಮಾಡುತ್ತಿದ್ದಂತೆ ಅನೇಕರು ಅವರಿಗೆ ವಿಶ್ ಸಹ ಮಾಡಿದ್ದಾರೆ. ಆದರೆ, ಸಿಎಸ್ಕೆ ತಂಡದ ಸಿಇಒ ಕಾಶಿ ವಿಶ್ವನಾಥ್, ರಾಯುಡು ಐಪಿಎಲ್ನಿಂದ ನಿವೃತ್ತಿ ಪಡೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ರಾಯುಡು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.
2013ರಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ರಾಯುಡು 55 ಏಕದಿನ ಪಂದ್ಯಗಳನ್ನಾಡಿದ್ದು, 6 ಟಿ-20 ಪಂದ್ಯಗಳಿಂದ 42ರನ್ಗಳಿಕೆ ಮಾಡಿದ್ದಾರೆ. 2019ರ ಏಕದಿನ ವಿಶ್ವಕಪ್ನಲ್ಲಿ ಈ ಪ್ಲೇಯರ್ಗೆ ಅವಕಾಶ ಸಿಗದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದರು.